ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಕ್ಕೆಗೊಂದಿ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ.



ಹರಿಹರ: ತಾಲೂಕಿನ ಎಕ್ಕೆಗೊಂದಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜುಲೈ 16ರಂದು ಸಿನಾಪ್ಸಿಸ್ ಕಂಪನಿ ಹಾಗೂ ಇಂಡಿಯಾ ಸುಧಾರ್ ಟ್ರಸ್ಟ್ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಇಂಡಿಯಾ ಸುಧಾರ್ ಟ್ರಸ್ಟ್‌ನ ಮುಖ್ಯಸ್ಥರಾದ ಶ್ರೀ ಕಿರಣ್ ಕುಮಾರ್ ಹಾಗೂ ಶ್ರೀ ಹರ್ಷ ಅವರು ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಿ, ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳುವಂತೆ ಶುಭ ಹಾರೈಸಿದರು.

ಶಾಲೆಗೆ ಉಚಿತ ನೋಟ್ ಪುಸ್ತಕಗಳನ್ನು ಒದಗಿಸಲು ಹಗಲಿರುಳು ಶ್ರಮಿಸಿದ ಶಿಕ್ಷಕರ ಸೇವಾ ವೇದಿಕೆಯ ಶರಣಕುಮಾರ್ ಹಾಗೂ ತಂಡದ ಸದಸ್ಯರಾದ ಗಿರೀಶ್ ಎಂ. ಮಲ್ಲಿಕಾರ್ಜುನ್, ಪರಶುರಾಮ್, ಪ್ರವೀಣ್ ಕುಮಾರ್, ರಾಮನಗೌಡ ಪ್ಯಾಟೀ ಮತ್ತು ಆನಂದ ಬೂತ್ ರೆಡ್ಡಿ ಅವರ ಸೇವೆಯನ್ನು ಕಾರ್ಯಕ್ರಮದಲ್ಲಿ ವಿಶೇಷವಾಗಿ ಸ್ಮರಿಸಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ವಿಜಯಾ ಮಾಯಚಾರಿ, ಸಹ ಶಿಕ್ಷಕರಾದ ಹನುಮರೆಡ್ಡರ್ ಟಿ.ಎಚ್., ನಾಗರಾಜ ಎಂ.ಎಚ್. ಹಾಗೂ ವಾಗೀಶ್ ಪಂಡಿತಾರಾಧ್ಯ, ಗ್ರಾಮದ ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಬಿ. ರುದ್ರಗೌಡ, ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು, ಅಡುಗೆ ಸಹಾಯಕರು ಮತ್ತು ಶಾಲಾ ಮಕ್ಕಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂತ್ಯದಲ್ಲಿ ಶಾಲೆಯ ಪರವಾಗಿ ಸಿನಾಪ್ಸಿಸ್ ಕಂಪನಿ, ಇಂಡಿಯಾ ಸುಧಾರ್ ಟ್ರಸ್ಟ್, ಶಿಕ್ಷಕರ ಸೇವಾ ವೇದಿಕೆ ಹಾಗೂ ಪ್ರತ್ಯಕ್ಷ–ಪರೋಕ್ಷವಾಗಿ ಸಹಕರಿಸಿದ ಎಲ್ಲ ದಾನಿಗಳಿಗೆ ಮುಖ್ಯೋಪಾಧ್ಯಾಯರು, ಶಿಕ್ಷಕರು, ಎಸ್‌ಡಿಎಂಸಿ, ಅಡುಗೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಕೃತಜ್ಞತೆಗಳನ್ನು ಸಲ್ಲಿಸಲಾಯಿತು.

Post a Comment

0 Comments