ಹರಿಹರ: ದಾವಣಗೆರೆಯಲ್ಲಿ ಸೌತ್ ಏಷ್ಯಾ ಅಸೋಸಿಯೇಷನ್ ಆಶ್ರಯದಲ್ಲಿ ನಡೆದ ‘ಸುಶೀಲ್ ಕ್ಲಾಸಿಕ್–2026’ ಮಿಸ್ಟರ್ ಮತ್ತು ಮಿಸೆಸ್ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಹರಿಹರ ನಗರದ ಎ.ಕೆ. ಕಾಲೋನಿಯ ಯುವಕ ಪಾಲಾಕ್ಷ ದ್ವಿತೀಯ ಸ್ಥಾನ ಪಡೆದು ನಗರಕ್ಕೆ ಕೀರ್ತಿ ತಂದಿದ್ದಾರೆ.
ರಾಜ್ಯಮಟ್ಟದ ಸ್ಪರ್ಧೆಯಲ್ಲಿ ತಮ್ಮ ಪ್ರತಿಭೆ ಮತ್ತು ಪರಿಶ್ರಮದ ಮೂಲಕ ಗಮನ ಸೆಳೆದ ಪಾಲಾಕ್ಷ ಅವರ ಸಾಧನೆಗೆ ಹರಿಹರ ನಗರದ ಕ್ರೀಡಾಭಿಮಾನಿಗಳು ಹಾಗೂ ಎ.ಕೆ. ಕಾಲೋನಿಯ ನಿವಾಸಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಪಾಲಾಕ್ಷ ಅವರ ಸಾಧನೆಗೆ ಅವರ ತಂದೆ, ತಾಯಿ ಹಾಗೂ ಸಹೋದರ ಸಂತಸ ವ್ಯಕ್ತಪಡಿಸಿದ್ದು, ಹರಿಹರ ನಗರದ ಸಾರ್ವಜನಿಕರು, ಎ.ಕೆ. ಕಾಲೋನಿಯ ಯುವಕರು ಮತ್ತು ಮುಖಂಡರು ಅಭಿನಂದನೆ ಸಲ್ಲಿಸಿ ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.
ಯುವಕರು ಕ್ರೀಡೆ ಮತ್ತು ದೇಹದಾರ್ಢ್ಯದತ್ತ ಆಸಕ್ತಿ ಬೆಳೆಸಿಕೊಂಡು ಶಿಸ್ತು, ನಿರಂತರ ಪರಿಶ್ರಮ ಹಾಗೂ ದೃಢಸಂಕಲ್ಪದ ಮೂಲಕ ಸಾಧನೆ ಮಾಡಬಹುದು ಎಂಬುದಕ್ಕೆ ಪಾಲಾಕ್ಷ ಅವರ ಯಶಸ್ಸು ಪ್ರೇರಣೆಯಾಗಿದೆ.
0 Comments