ಸಾಗರದ ಜನರ ಹೃದಯ ಸಿಂಹಾಸನದಲ್ಲಿ ಅಪ್ಪು ಜೀವಂತ.


ಕರುನಾಡ ರಾಜಕುಮಾರ ಇನ್ನಿಲ್ಲ ಎಂಬುವ ಸತ್ಯವನ್ನ ಅವರ ಅಭಿಮಾನಿಗಳು ನಂಬುತ್ತಿಲ್ಲ .ಅಪ್ಪು ಅಜರಾಮರವಾಗಿ ನಮ್ಮೊಟ್ಟಿಗೆ ಬದುಕಿದ್ದಾರೆ.ಅವರ ದೇಹಕ್ಕೆ ಮಾತ್ರ ಸಾವು ,ಆತ್ಮಕ್ಕೆ ಸಾವಿಲ್ಲ, ಅವರು ಪ್ರತಿ ಕನ್ನಡಿಗರ ಮನೆ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ.ಅದರಲ್ಲೂ ವಿಶೇಷವಾಗಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಜನರ ಹೃದಯ ಸಿಂಹಾಸನದಲ್ಲಿ ಯುವರತ್ನನಾಗಿ ಕಂಗೊಳಿಸುತ್ತಿದ್ದಾರೆ.

ತಾಲ್ಲೂಕಿನ ಪ್ರತಿ ಗ್ರಾಮದ ಪ್ರತಿ ಬಡಾವಣೆಯ ಯುವಕರಲ್ಲಿ ಪುನೀತ್ ಆದರ್ಶ ವ್ಯಕ್ತಿಯಾಗಿದ್ದಾರೆ.ಅವರ ಆದರ್ಶವನ್ನ ತಾಲ್ಲೂಕಿನ ಯುವಕರು ಅನುಸರಿಸುತ್ತಿದ್ದಾರೆ, ನೇತ್ರದಾನ ಮಾಡಲು ಮುಂದಾಗುತ್ತಿದ್ದಾರೆ.ಬದುಕಿರುವಷ್ಟು ದಿನ ಪುನೀತ್ ರಾಜ್ ಕುಮಾರ್ ಅವರಂತೆ ಉತ್ತಮ ಸೇವಾ ಕಾರ್ಯಗಳನ್ನು ಮಾಡೋಣ ಎಂಬ ಪಣ ತೊಟ್ಟಿದ್ದಾರೆ.ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ ಪುಣ್ಯ ಸ್ಮರಣೆ ಕಾರ್ಯಕ್ರಮಗಳನ್ನ ತಾಲ್ಲೂಕಿನಾದ್ಯಂತ ಅವರ ಅಭಿಮಾನಿಗಳು ಆಚರಿಸುತ್ತಿದ್ದಾರೆ .ಇನ್ನೂ 1ಹೆಜ್ಜೆ ಮುಂದೆ ಎನ್ನುವಂತೆ ತಾಲ್ಲೂಕಿನಾದ್ಯಂತ ಪ್ರತಿ ಗ್ರಾಮಗಳಲ್ಲೂ ಪುನೀತ್ ರಾಜ್ ಕುಮಾರ್ ಅವರ ಹೆಸರಿನ ವೃತ್ತಗಳು,ನಿಲ್ದಾಣಗಳು ಹಾಗೂ ಸಮುದಾಯ ಭವನ,ಉದ್ಯಾನವನಗಳನ್ನು ಅವರ ಅಭಿಮಾನಿಗಳು ನಿರ್ಮಿಸುತ್ತಿದ್ದಾರೆ.ತಾಲೂಕಿನ ಪ್ರತಿ ಗ್ರಾಮದ ಪ್ರತಿ ಮನೆಯ ದರ್ಶನ್ ಪುನೀತ್ ರಾಜ್ ಕುಮಾರ್ ಅವರನ್ನ ತಮ್ಮ ಹೃದಯ ಸಿಂಹಾಸನದಲ್ಲಿ ಜೋಪಾನವಾಗಿ ಬಚ್ಚಿಟ್ಟುಕೊಂಡಿದ್ದಾರೆ, ಪೋಷಣೆ ಮಾಡುತ್ತಿದ್ದಾರೆ.ದೊಡ್ಡ ಮನೆಯ ಬೆಳಕು ಆರದಂತೆ ಸುತ್ತಲೂ ರಕ್ಷಾ ಕವಚವನ್ನು ನಿರ್ಮಿಸಿದ್ದಾರೆ.ಸಾಗರ ತಾಲ್ಲೂಕಿನ ಮೂವತ್ತೈದು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಪುನೀತ್ ರಾಜ್ ಕುಮಾರ್ ಅವರ ಹೆಸರಿನ ಒಂದಾದರೂ ವೃತ್ತ ನಿಲ್ದಾಣಗಳು ಕಾಣದೆ ಇರಲು ಸಾಧ್ಯವೇ ಇಲ್ಲ ಅಷ್ಟರಮಟ್ಟಿಗೆ ಅವರ ಅಭಿಮಾನವನ್ನು ಮೆರೆದಿದ್ದಾರೆ,ಮೆರೆಯುತ್ತಿದ್ದಾರೆ. ತಾಲ್ಲೂಕಿನ ಕಾಗೋಡುದಿಂಬ ಗ್ರಾಮದಿಂದ ಪ್ರಾರಂಭವಾದ ಅವರ ಹೆಸರಿನ ವೃತ್ತಗಳು ಇಂದು ಕಲ್ಕೊಪ್ಪ ,ತೆಪ್ಪಗೋಡು,ಬೆಳಂದೂರು,ಕುಗ್ವೆ ,ಖಂಡಿಕಾ,ತಾಳಗುಪ್ಪ ,ಆನಂದಪುರ,ಕಣ್ಣೂರು, ಗೌತಮಪುರ ,ಸೇರಿದಂತೆ ತಾಲ್ಲೂಕಿನಾದ್ಯಂತ ಗ್ರಾಮಗಳಲ್ಲಿ ಪುನೀತ್ ರಾಜ್ ಕುಮಾರ್ ಅವರ ಹೆಸರು ಜೀವಂತವಾಗಿ ಇಟ್ಟಿದ್ದಾರೆ, ಇಡುವ ಪ್ರಯತ್ನ ಮಾಡುತ್ತಿದ್ದಾರೆ.ಇದೇ ಅಲ್ಲವೇ ಅಭಿಮಾನ ಎಂದರೆ .ವ್ಯಕ್ತಿ ಎಷ್ಟು ದಿನ ಬದುಕಿದ್ದ ಎಂಬುವುದು ಮುಖ್ಯವಲ್ಲ, ಬದುಕಿರುವಷ್ಟು ದಿನ ಎಷ್ಟು ಉತ್ತಮ ಕಾರ್ಯ ಮಾಡಿದ್ದಾರೆ ಎಂಬುದು ಮುಖ್ಯ. ಅಪ್ಪು ಅವರನ್ನು ಕನ್ನಡಿಗರಲ್ಲದೆ ಇಡೀ ದೇಶವೇ ಕೊಂಡಾಡುತ್ತಿದೆ.ಇಡೀ ವಿಶ್ವವೇ ಅಪ್ಪು ಅವರ ಸಮಾಜ ಸೇವೆಯನ್ನು ಹಾಡಿ ಹೊಗಳುತ್ತಿದೆ.ದೊಡ್ಡಮನೆ ಹುಡುಗ ,ದೊಡ್ಡ ಮನೆಯ ಗೌರವವನ್ನು ವಿಶ್ವದ ಬಾನೆತ್ತರಕ್ಕೆ ಹಾರಿಸಿಯೇ ಬಿಟ್ಟರು.ವೀರ ಕನ್ನಡಿಗ ಇಂದು ಕರ್ನಾಟಕ ರತ್ನ ನಾಗಿ ದೇಶದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿಯ ಹತ್ತಿರಕ್ಕೆ ಬಂದು ನಿಂತು ಬಿಟ್ಟರು.ಅಪ್ಪು ಸಾಗರದ ಜನತೆಯ ಹೃದಯ ಸಿಂಹಾಸನದಲ್ಲಿ ಸದಾ ಮಿನುಗುವ ನಕ್ಷತ್ರ.ನಕ್ಷತ್ರದ  ಇಡೀ ಸಾಗರದ ಜನತೆ.

ಪ್ರಕಾಶ್ ಮಂದಾರ .

Post a Comment

0 Comments