ಮಂದಾರ ನ್ಯೂಸ್: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್‌ಪಿಸಿಬಿ) ಅಧಿಕಾರಿಗಳು ಇತ್ತೀಚೆಗೆ ಕಲುಷಿತಗೊಂಡಿರುವ ತುಂಗಭದ್ರ ನದಿಯ ನೀರಿನ ಮಾದರಿಗಳನ್ನು ಸಂಗ್ರಹಿಸಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ತನ್ನ ವರದಿಯಲ್ಲಿ ತಿಳಿಸಿತ್ತು.
ತುಂಗಭದ್ರಾ ನದಿಯ ನೀರು ಬಳಕೆಗೆ ಯೋಗ್ಯವಲ್ಲ ಎಂದು ತಜ್ಞರು ಮತ್ತು ನಾಗರಿಕರು ಸೂಚಿಸಿದ ನಂತರ ಇಲಾಖೆ ಈ ಪರೀಕ್ಷಾ ಕಸರತ್ತು ನಡೆಸಿದ್ದು, ಇಲಾಖೆಯ ಕ್ರಮ ಮಹತ್ವ ಪಡೆದುಕೊಂಡಿತ್ತು. CPCB ನವೆಂಬರ್ 2022 ರಲ್ಲಿ ವರದಿಯೊಂದನ್ನು ಪ್ರಕಟಿಸಿತ್ತು. ವರದಿಯ ಪ್ರಕಾರ, ಕಲುಷಿತ ನದಿಗಳ (PRS) ವರದಿಯ ಪ್ರಕಾರ, ಕರ್ನಾಟಕದ ತುಂಗಭದ್ರಾ ನದಿಯ ನೀರು ಕಲುಷಿತವಾಗಿವೆ ಎನ್ನಲಾಗಿತ್ತು.
"ಕರ್ನಾಟಕದ ತುಂಗಭದ್ರಾ ನದಿಯ ನೀರಿನ ಗುಣಮಟ್ಟವನ್ನು 2019 ಮತ್ತು 2021 ರಲ್ಲಿ ಮಾಡಲಾಯಿತು. ಅದರಲ್ಲಿ ತುಂಗಭದ್ರ ನದಿಯ ಒಡಲಿನ ಜೈವಿಕ ರಾಸಾಯನಿಕ ಆಮ್ಲಜನಕದ ಬೇಡಿಕೆಗೆ (BOD) ಸಂಬಂಧಿಸಿದಂತೆ ನಿಗದಿತ ನೀರಿನ ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿಲ್ಲ ಎಂದು ಕಂಡುಬಂದಿದೆ ಎಂದು ಸಿಪಿಸಿಬಿ ವರದಿಯಲ್ಲಿ ಉಲ್ಲೇಖಿಸಿದೆ.
ಕೆಎಸ್‌ಪಿಸಿಬಿಯ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಮಾಹಿತಿ ನೀಡಿದ್ದು, “ವರದಿ ಹಳೆಯದಾಗಿದ್ದರೂ, ನೀರಿನ ಗುಣಮಟ್ಟದಿಂದಾಗಿ ಇದು ಇನ್ನೂ ಜನರಲ್ಲಿ ಭಯವನ್ನು ಉಂಟುಮಾಡುತ್ತಿದೆ. ಗುಣಮಟ್ಟವು ರಾತ್ರೋರಾತ್ರಿ ಬದಲಾಗುವುದಿಲ್ಲ ಎಂದು ನಮಗೆ ತಿಳಿದಿದೆ, ಆದರೆ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ನೆಲದ ಪರಿಸ್ಥಿತಿ ಮತ್ತು ಕೈಗಾರಿಕೆಗಳಿಂದ ಹೊರ ಬರುತ್ತಿರುವ ಕಲುಷಿತ ನೀರಿನಿಂದ ತುಂಗಭದ್ರ ವಿಷವಾದಳು.ಇನ್ನೇನು ಮಾಡಬೇಕಾಗಿದೆ ಎಂಬುದನ್ನು ತಿಳಿಯಲು ಅನೇಕ ಸ್ಥಳಗಳಿಂದ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ. ವಾಸ್ತವವಾಗಿ, ಕಳೆದ ಐದು ವರ್ಷಗಳಿಂದ ಕೆಲವು ಸ್ಥಳಗಳಲ್ಲಿ ನೀರಿನ ಗುಣಮಟ್ಟ ಹದಗೆಟ್ಟಿದೆ ಎಂದು ಹೇಳಿದ್ಜಾರೆ.
ಅಂತೆಯೇ ಕಲುಷಿತ ನದಿಗಳು ಮತ್ತು ಜಲಮೂಲಗಳ ಮೇಲೆ ನಡೆಯುತ್ತಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಪ್ರಕರಣಗಳನ್ನು ಅಧಿಕಾರಿ ಇದೇ ವೇಳೆ ಸೂಚಿಸಿದರು.
ರಾಜ್ಯದ ಕಲುಷಿತ ನದಿಗಳ ಪಟ್ಟಿಯಲ್ಲಿರುವ ನದಿಗಳ ಪಟ್ಟಿ ಇಂತಿದೆ
ಅಘನಾಶಿನಿ, ಅರ್ಕಾವತಿ, ಭದ್ರ, ಭೀಮ, ಕಾವೇರಿ, ದಕ್ಷಿಣ ಪಿನಾಕಿನಿ, ಗಂಗಾವಳಿ, ಕಬಿನಿ, ಕಾಗಿನಾ, ಕೃಷ್ಣ, ಲಕ್ಷ್ಮಣ ತೀರ್ಥ, ನೇತ್ರಾವತಿ, ಶರಾವತಿ, ಶಿಮ್ಶಾ, ಪೆನ್ನಾಯಿ, ತುಂಗಾ ಮತ್ತು ತುಂಗಭದ್ರಾ.
ಓದುಗರ ಮಿತ್ರರೇ ತುಂಗಭದ್ರಾ ನದಿ ವಿಷವಾಗಲು ಮೂಲ ಕಾರಣವನ್ನು ನಿಮ್ಮ ಮುಂದೆ ಬಿಚ್ಚಿಡುವ ಪ್ರಯತ್ನ ನಾವು ಮಾಡುತ್ತಿದ್ದೇವೆ.
ಸದ್ಯ ನಾವು ತುಂಗಭದ್ರ ನದಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ದೊಡ್ಡ ಹೋರಾಟ ಮಾಡಬೇಕಾಗಿದೆ .ಆ ದಿಸೆಯಲ್ಲಿ ನಮ್ಮ ಮಂದಾರ ನ್ಯೂಸ್ ವೆಬ್ ಪೋರ್ಟಬಲ್ ಸುದ್ದಿ ವಾಹಿನಿ ಡಿಟ್ಟ ಹೆಜ್ಜೆಯನ್ನ ಈಗಾಗಲೇ ಇಟ್ಟಿದೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಬಡಿದೆಬ್ಬಿಸುವ ಕೆಲಸ ನಾವು ಮಾಡುತ್ತಿದ್ದೇವೆ. ಮುಂದಿನ ದಿನದಲ್ಲಿ ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ಹಾಗೂ ನ್ಯಾಯಾಲಯದ ಗಮನಕ್ಕೆ ತರುವ ನಿಟ್ಟಿನಲ್ಲಿ ಈಗಾಗಲೇ ನಾವು ಮಾಹಿತಿಯನ್ನು ಸಂಗ್ರಹಿಸಿದ್ದು, ಮುಂದಿನ ದಿನದಲ್ಲಿ ಸಿಡಿ ರೂಪದಲ್ಲಿ ಸಂಬಂಧಿಸಿದವರ ಗಮನಕ್ಕೆ ತರುವ ಪ್ರಯತ್ನ ಮಾಡಲಾಗುತ್ತದೆ .ಇದರ ಜೊತೆಗೆ ತುಂಗಭದ್ರ ನದಿ ಜೊತೆಗೆ ಪರಿಸರ ,ಶಬ್ದ ಹಾಗೂ ವಾಯು ಮಾಲಿನ್ಯವನ್ನು ತಡೆಗಟ್ಟುವ ಜವಾಬ್ದಾರಿಯನ್ನು ನಮ್ಮ ಮಾಧ್ಯಮದ ಮೂಲಕ ಜನಸಾಮಾನ್ಯರಿಗೆ ತಲುಪಿಸುವ ಕಾಯಕವನ್ನ ಮಾಡುತ್ತೇವೆ.
ಓದುಗರ ಮಿತ್ರರೇ ನಿಮ್ಮ ಮುಂದೆ ದೊಡ್ಡ, ದೊಡ್ಡ ತಿಮಿಂಗಳ ನೈಜ್ಯ ಬಣ್ಣದ ಸುದ್ದಿಯನ್ನು ಅನಾವರಣಗೊಳಿಸುವ ಉದ್ದೇಶದಿಂದ ಹಂತ- ಹಂತವಾಗಿ ನಿಮ್ಮ ಮುಂದೆ ಒಂದೊಂದು ಸುದ್ದಿಯನ್ನು ಬಿತ್ತರಿಸುತ್ತಿದ್ದೇವೆ. ಇದು ಹೋರಾಟದ ಆರಂಭವಾಗಿದ್ದು. ಒಂದೊಂದೇ ಹೆಜ್ಜೆಯನ್ನ ತಾಳ್ಮೆಯಿಂದ ಇಡುವ ಕೆಲಸ ಮಾಡುತಿದ್ದೇವೆ.
ತುಂಗಭದ್ರ ವಿಷವಾಗಲು ಕಾರಣ ನಿಮ್ಮ ಮುಂದೆ ಬಿತ್ತರಿಸದಿದ್ದರೆ ಹೇಗೆ? ಕೂಡಲೇ ಬಿತ್ತರಿಸುವ ಎಲ್ಲಾ ಪ್ರಯತ್ನ ಮಾಡುತ್ತೇವೆ.
0 Comments