ತಲವಾಟ:-ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೊರಬ ವಿಧಾನಸಭಾ ಕ್ಷೇತ್ರದ ತಲವಾಟ ಗ್ರಾಮ ಪಂಚಾಯಿತಿಯಲ್ಲಿ ನೆಡೆದ ಕಾರ್ಯಕ್ರಮದಲ್ಲಿ ಸಾಗರ ಗ್ರಾಮಾಂತರ ಪೊಲೀಸ್ ಇಲಾಖೆಯ ಪೊಲೀಸರಿಗೆ ಸನ್ಮಾನ ಮಾಡಿ ಗೌರವಿಸಿದರು.
ಇತ್ತೀಚಿಗೆ ತಲವಾಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೆಡೆದ ಅಡಿಕೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಈ ಕಳ್ಳತನ ಮಾಡಿದ ಕಳ್ಳರನ್ನು ಭೇಧಿಸಿ ಕಳ್ಳರನ್ನು ಬಂಧಿಸಿದ್ದು ಕದ್ದ ಅಡಿಕೆಯನ್ನೂ ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಅವಿರತ ಶ್ರಮವಹಿಸಿದ ಸಾಗರ ಗ್ರಾಮಾಂತರ ಪೊಲೀಸ್ ಇಲಾಖೆ ಅಧಿಕಾರಿಗಳನ್ನು ಸನ್ಮಾನ ಮಾಡಿದ ತಲವಾಟ ಗ್ರಾಮ ಪಂಚಾಯಿತಿ*
ಈ ಸನ್ಮಾನ ಕಾರ್ಯಕ್ರಮದಲ್ಲಿ ಶ್ರೀಮತಿ ಪುಷ್ಪಾ ಎಂ ಕಮ್ಮಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಶ್ರೀ ಬಾಲಸುಬ್ರಮಣ್ಯ, ಸಹಾಯಕ ನಿರ್ದೇಶಕರು MGNREGA, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕಲ್ಪನಾ ಟಿ. ಎಸ್ , ಉಪಾಧ್ಯಕ್ಷರಾದ ಲಕ್ಷ್ಮಿ ಬಿ. ಸದಸ್ಯರಾದ ಪ್ರಸನ್ನ ಇಡುವಾಣಿ, ಕನ್ನಪ್ಪ, ಗಣೇಶ, ನಾಗರತ್ನಮ್ಮ, ದೇವಿಕಮ್ಮ, ಗ್ರಾಮ ಪಂಚಾಯಿತಿ PDO ಗುಲಾಬ್ ಶಾ, ಕಾರ್ಯದರ್ಶಿ ಬಾಲಚಂದ್ರ ಇನ್ನಿತರು ಹಾಜರಿದ್ದರು
0 Comments