ಹರಿಹರ ವೃತ್ತ ನಿರೀಕ್ಷಕ ಸತೀಶ್.ಯು ಅವರ ಖಡಕ್ ಆದೇಶ;ಅಕ್ರಮ ಚಟುವಟಿಕೆಗಳಿಗೆ ಸಂಪೂರ್ಣ ಬ್ರೇಕ್!?


ಹರಿಹರ:-ಸದ್ಯ ಹರಿಹರ ದಾವಣಗೆರೆ ಜಿಲ್ಲೆಯಲ್ಲೇ ಅತ್ಯಂತ ಸುದ್ದಿಯಲ್ಲಿರುವ ನಗರ.ಜಿಲ್ಲೆಗೆ ಅಂಟಿಕೊಂಡಿರುವ ಹರಿಹರ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿಯೂ ಅಷ್ಟೇ ಮಹತ್ತರವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ

ತನ್ನದೇಯಾದ ಇತಿಹಾಸದ ಹಿನ್ನೆಲೆ,ಉತ್ತರ -ದಕ್ಷಿಣದ ನಗರ ಗಳನ್ನು ಬೆಸೆಯುವ ಕೊಂಡಿ ಹರಿಹರ ನಗರ .ನಗರದ ಪಕ್ಕದಲ್ಲೇ ಹಾದುಹೋಗುವ ದೇಶದ ಅತಿದೊಡ್ಡ ರಾಷ್ಟ್ರೀಯ ಹೆದ್ದಾರಿ NH-4.ಯಾವುದೇ ಅಡೆತಡೆಯಿಲ್ಲದೆ ಅಕ್ರಮ ಚಟುವಟಿಕೆಗಳು ನಿರಂತರವಾಗಿ, ಸರಾಗವಾಗಿ ಸಾಗಲು ಅನುಕೂಲಕರವಾದಂತಹ ವಾತಾವರಣದಲ್ಲಿ ಅವುಗಳನ್ನು ನಿಯಂತ್ರಿಸುವ ಜವಾಬ್ದಾರಿ ಪೊಲೀಸ್ ಇಲಾಖೆಗೆ ಇರುತ್ತದೆ.ಅದರಲ್ಲೂ ಹರಿಹರ  ತಾಲ್ಲೂಕಿನಾದ್ಯಂತ ಅಕ್ರಮ ಚಟುವಟಿಕೆಗಳು ನಿಯಂತ್ರಿಸಬೇಕಾದರೆ ಅತ್ಯಂತ ಚಾಣಾಕ್ಷತೆ ಹಾಗೂ ಕರ್ತವ್ಯದಲ್ಲಿ ಪ್ರಾಮಾಣಿಕತೆ ಇರಬೇಕಾಗುತ್ತದೆ .
ತುಂಗಾಭದ್ರ ನದಿಯಿಂದ ಪ್ರಾರಂಭವಾಗುವ ಅಕ್ರಮ ಚಟುವಟಿಕೆಗಳು ನಗರದ ಒಳಪ್ರದೇಶದಲ್ಲಿ ಗೊತ್ತಿದ್ದೂ, ಗೊತ್ತಿಲ್ಲದಂತೆ ನಡೆಯುವ ಕೆಲವು ದಂಧೆಗಳು ಪತ್ತೆಹಚ್ಚಿ ನಿಯಂತ್ರಿಸುವಲ್ಲಿ ಹರಿಹರದ ವೃತ್ತ ನಿರೀಕ್ಷಕರಾದ ಸತೀಶ್.ಯು ಯಶಸ್ವಿಯಾಗಿದ್ದಾರೆ ಎಂದರೂ ತಪ್ಪಾಗಲಾರದು .

ಅವರು ಹರಿಹರ ತಾಲ್ಲೂಕಿಗೆ ವೃತ್ತನಿರೀಕ್ಷಕರಾಗಿ ಅಧಿಕಾರ ವಹಿಸಿಕೊಂಡು ಸರಿಸುಮಾರು ಒಂದು ವರ್ಷ ಕಳೆದಿದೆ.ಹರಿಹರದ ವೃತ್ತನಿರೀಕ್ಷಕರಾಗಿ ಅಧಿಕಾರದ ಕುರ್ಚಿಯ ಮೇಲೆ ಕುಳಿತ ದಿನದಿಂದಲೂ ಇದುವರೆಗೂ ಹರಿಹರ ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಿದ್ದಾರೆ. ಹಾಗೂ ನಗರದ ಕಾನೂನು&ಸುವ್ಯವಸ್ಥೆ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ .

ಹರಿಹರ ನಗರ ಅತ್ಯಂತ ಸೂಕ್ಷ್ಮ ವಲಯ .ಇಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಎಡವಿದರೆ ಅವರಿಗೆ ಎಲ್ಲಿಂದ ಗೇಟ್ ಪಾಸ್  ಗ್ಯಾರಂಟಿ.ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುವುದು ಎಂಟೆದೆಯ ಗುಂಡಿಗೆ ಇರಬೇಕು .ಅಷ್ಟೇ ಚಾಣಾಕ್ಷತೆಗೆ ತಂತ್ರಗಾರಿಕೆ ಹೆಣೆಯಬೇಕು .ಹಿಂದೆ ಇದ್ದಂಥ ವೃತ್ತ ನಿರೀಕ್ಷಕರೊಬ್ಬರು ನಗರದ ಕಾನೂನು&ಸುವ್ಯವಸ್ಥೆ ಕಾಪಾಡುವಲ್ಲಿ ಎಡವಿದ ಕಾರಣ ವರ್ಗಾವಣೆಯಾಗಿದ್ದು ನಮ್ಮ ಕಣ್ಣ ಮುಂದೆ ಇದೆ .
ಎಲ್ಲಾ ಜಾತಿ ಧರ್ಮದವರನ್ನು ಸಂಭಾಳಿಸಿ, ಅವರಲ್ಲಿ ಅರಿವು ಮೂಡಿಸಿ, ಶಾಂತಿ ಸಭೆಗಳನ್ನು ನಡೆಸಿ ಅವರನ್ನು ಮನವೊಲಿಸುವುದು ಅಷ್ಟು ಸುಲಭವಲ್ಲ.ಇಂಥ ಪರಿಸ್ಥಿತಿಯಲ್ಲಿ ಹರಿಹರದ ವೃತ್ತ ನಿರೀಕ್ಷಕರಾದ ಸತೀಶ್.ಯು ತಮ್ಮ ಚಾಣಾಕ್ಷತೆಯ ನಡಿಗೆಯಿಂದ ನಗರ ಪ್ರದೇಶದ ಎಲ್ಲಾ ಸಮುದಾಯದ ಜನರ ವಿಶ್ವಾಸವನ್ನು ಗಣನೆಗೆ ತೆಗೆದುಕೊಂಡು ಎಲ್ಲೂ ಅಹಿತಕರ ಘಟನೆಗಳು ನಡೆಯದಂತೆ,ಶಾಂತಿಗೆ ಭಂಗವಾಗದಂತೆ,ಸಹಬಾಳ್ವೆಯಲ್ಲಿ ಜನರು ಜೀವನ ನಡೆಸಿಕೊಂಡು ಹೋಗುವಂತೆ,ಪೋಲಿಸ್ ಇಲಾಖೆ ಮೇಲೆ ನಂಬಿಕೆ ಇಟ್ಟು ನೆಮ್ಮದಿಯ ಬದುಕು ಕಳೆಯುವಂಥ ವಾತಾವರಣವನ್ನ ಹರಿಹರದ ವೃತ್ತ ನಿರೀಕ್ಷಕರಾದ ಸತೀಶ್.ಯು ಮಾಡಿದ್ದಾರೆ, ಮಾಡಿಕೊಂಡು ಹೋಗುತ್ತಿದ್ದಾರೆ.

ಕೆಲವು ದಕ್ಷ ಅಧಿಕಾರಿಗಳ ಕಾರ್ಯದಕ್ಷತೆ ಬೆಳಕಿಗೆ ಬರುವುದಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ಇನ್ನೊಬ್ಬರ ಮನಸ್ಸಿಗೆ ನೋವಾಗುತ್ತದೆ, ಆದರೆ ಅನಿವಾರ್ಯ. ಅವರಲ್ಲೂ ಮನುಷ್ಯತ್ವವಿರುತ್ತದೆ,ಮಾನವೀಯ ಮೌಲ್ಯಗಳು ಅಡಗಿರುತ್ತದೆ. ಆದರೆ ಕಾನೂನು & ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಠಿಣ ನಿರ್ಧಾರ ,ಕಟೋರ ವರ್ತನೆ ಪ್ರದರ್ಶಿಸಲೇಬೇಕು ಅಲ್ಲವೇ ? 
ತಾಲ್ಲೂಕಿನ ನಾಗರಿಕರೇ ಒಮ್ಮೆ ಯೋಚಿಸಿ ಹರಿಹರದ ವೃತ್ತನಿರೀಕ್ಷಕರಾಗಿ ಸತೀಶ್.ಯು ಬಂದ ದಿನದಿಂದಲೂ ಇದುವರೆಗೂ ಹರಿಹರದ ಕಾನೂನು&ಸುವ್ಯವಸ್ಥೆ ಹದಗೆಟ್ಟಿದೆಯೇ?ಎಲ್ಲಾದರೂ ಅಹಿತಕರ ಘಟನೆಗಳು ನಡೆದಿದೆಯೇ ?ಅಕ್ರಮ ಚಟುವಟಿಕೆಗಳ ಸದ್ದು ಕೇಳುತ್ತಿದೆಯೇ ?ಹಿಜಾಬ್ ನಂಥ ಘಟನೆ, ಕರೋನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಎಲ್ಲಾದರೂ ಪೋಲಿಸ್ ಇಲಾಖೆಯಿಂದ ಲೋಪದೋಷವಾದ ಉದಾಹರಣೆಗಳು ಇದೆಯೇ ?ಕಾರಣವಿಲ್ಲದೆ ಸುಖಾಸುಮ್ಮನೆ ಯಾರಾದರ ಮೇಲೆ ಎಫ್ ಐಆರ್ ದಾಖಲಾಗಿದೆಯೇ ?ಯಾವುದಾದರೂ ಒಂದೇ, ಒಂದು ಕಳಂಕ ವೃತ್ತ ನಿರೀಕ್ಷಕರ ಮೇಲೆ ಇದೆಯೇ?ಅಂದರೆ ನಗರದ ಕಾನೂನು&ಸುವ್ಯವಸ್ಥೆ ಕಾಪಾಡುವಲ್ಲಿ ವೃತ್ತ ನಿರೀಕ್ಷಕರು ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದಾರೆ ಎಂದರ್ಥ ಅಲ್ಲವೇ ?ಇಂತಹ ಅಧಿಕಾರಿಗಳ ಕಾರ್ಯದಕ್ಷತೆ ಮತ್ತು ಕರ್ತವ್ಯದಲ್ಲಿರುವ ಪ್ರಾಮಾಣಿಕತೆಯನ್ನು ಜನಸಾಮಾನ್ಯರ ಮುಂದೆ ಇಡುವ ಜವಾಬ್ದಾರಿ ಮಾಧ್ಯಮಗಳದ್ದು ಅಲ್ಲವೇ ?ಆ ಕಾರ್ಯವನ್ನು ಅತ್ಯಂತ ಜವಾಬ್ದಾರಿಯುತವಾಗಿ ನಮ್ಮ ಮಾಧ್ಯಮ ಮಾಡುತ್ತಿದೆ .

ನಮ್ಮ ತಾಲ್ಲೂಕಿನ ಪೋಲಿಸ್ ಇಲಾಖೆ ಅತ್ಯಂತ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ.ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಲಾಖೆಯೊಂದಿಗೆ ಕೈಜೋಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲೂ ಇದೆ .ಆ ನಿಟ್ಟಿನಲ್ಲಿ "ಇಲಾಖೆಯೊಂದಿಗೆ ಕೈ ಜೋಡಿಸೋಣ,ಅಪರಾಧ ಮುಕ್ತ ಹರಿಹರ ತಾಲ್ಲೂಕನ್ನಾಗಿ ಮಾಡೋಣ"ಎಂಬುದು ನಮ್ಮ ಮಾದ್ಯಮದ ಆಶಯವಾಗಿದೆ .

ತಾಲ್ಲೂಕಿನ ವೃತ್ತ ನಿರೀಕ್ಷಕರಿಗೆ ನಮ್ಮ ಮಾಧ್ಯಮದ ವತಿಯಿಂದ "ಬಿಗ್ ಸೆಲ್ಯೂಟ್"

ಇನ್ನು 4ದಿನದಲ್ಲಿ ಹರಿಹರದ ಗ್ರಾಮದೇವತೆ ಊರಮ್ಮ ದೇವಿಯ ಜಾತ್ರೆ ಇದೆ.ಜಾತ್ರೆಗೆ ಬರುವ ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಹಾಗೂ ಅಹಿತಕರ ಘಟನೆಗಳು ಸಂಭವಿಸದಂತೆ ಈಗಾಗಲೇ ಪೊಲೀಸ್ ಇಲಾಖೆ ವೃತ್ತ ನಿರೀಕ್ಷಕರಾದ ಸತೀಶ್ ಯು ಮಾರ್ಗದರ್ಶನದಲ್ಲಿ ಸರ್ವ ಸನ್ನದ್ಧವಾಗಿದೆ.ಹಾಗೂ ತಾಲ್ಲೂಕಿನಾದ್ಯಂತ ಕಟ್ಟೆಚ್ಚರ ವಹಿಸಿದೆ.ಈಗಾಗಲೇ ವಾಹನ ಸಂಚಾರ ಮಾರ್ಗದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಿದೆ .ಆಯಕಟ್ಟಿನ ಜಾಗದಲ್ಲಿ ಪೋಲಿಸ್ ನಿಯೋಜನೆ ಮಾಡಲಾಗುತ್ತಿದೆ.ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಹದ್ದಿನ ಕಣ್ಣು ಇಡಲಾಗಿದೆ.ಒಟ್ಟಾರೆಯಾಗಿ ತಾಲ್ಲೂಕಿನ ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತಿದೆ .

ಪ್ರಕಾಶ್ ಮಂದಾರ 
ಸಂಪಾದಕರು .

Post a Comment

0 Comments