ಎಂಡಿಎಫ್ ಸಭೆಯಲ್ಲಿ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಪೊಲೀಸ್ ಇಲಾಖೆ ವಿಫಲ:ಜಗದೀಶ್ ಗೌಡ್ರು ಆರೋಪ.


ಕಳೆದ 4ದಿನಗಳ ಹಿಂದೆ ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಎಲ್ ಬಿ ಕಾಲೇಜಿನಲ್ಲಿ  56 ನೇ MDF ಸರ್ವಸದಸ್ಯರ ಸಭೆಯನ್ನು ಕರೆಯಲಾಗಿತ್ತು.ಈ ಸಭೆಗೆ ಆಮಂತ್ರಣವಿಲ್ಲದಿದ್ದರೂ ಹರತಾಳು ಹಾಲಪ್ಪನವರು ಆಗಮಿಸಿದ್ದರು .ಈ ಸಂದರ್ಭದಲ್ಲಿ ಕೆಲಕಾಲ ಮಾತಿನ ಚಕಮಕಿ ನಡೆಯುತ್ತಿತ್ತು ಈ ಸಂದರ್ಭದಲ್ಲಿ ಹರತಾಳು ಹಾಲಪ್ಪ ನವರ ಬೆಂಬಲಿಗರು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಶ್ರೀ  ಜಗದೀಶ್ ಗೌಡ್ರು ಮೇಲೆ ಹಲ್ಲೆ ನಡೆಸಿದ್ದರು .ಕೂಡಲೇ ಆಸ್ಪತ್ರೆಗೆ ದಾಖಲಾಗಿದ್ದರು ಈ ಸಂದರ್ಭದಲ್ಲೂ ಸಹ ಇವರಿಗೆ ಹರತಾಳು ಹಾಲಪ್ಪನವರ ಬೆಂಬಲಿಗರು ಬೆದರಿಕೆಯನ್ನೂ ಹಾಕಿದ್ದರು .ಈ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು .ಆದರೆ ಇದುವರೆಗೂ ಗ್ರಾಮಾಂತರ ಪೊಲೀಸ್ ಠಾಣೆ ಅಧಿಕಾರಿಗಳು ಹಲ್ಲೆ ನಡೆಸಿದವರ ವಿರುದ್ಧ ಯಾವುದೇ ರೀತಿ ಕ್ರಮ ಕೈಗೊಂಡಿಲ್ಲದಿರುವುದನ್ನು ಖಂಡಿಸಿ ಪೊಲೀಸ್ ಇಲಾಖೆ ವಿರುದ್ಧ ಹಲ್ಲೆಗೊಳಗಾದ ಮಲೆನಾಡು ಅಭಿವದ್ಧಿ ಪ್ರತಿಷ್ಠಾನದ ಕಾರ್ಯದರ್ಶಿ ಜಗದೀಶ್ ಗೌಡ್ರು ಕಿಡಿಕಾರಿದರು .
ಕೂಡಲೇ ಎಂಡಿಎಫ್ ಸಭೆಗೆ ಬಂದು ವೀರಶೈವ ಮುಖಂಡರು  ಹಾಗೂ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಶ್ರೀ ಜಗದೀಶ್ ಗೌಡ್ರು ಮೇಲೆ ಹಲ್ಲೆ ನಡೆಸಿದವರ ಮೇಲೆ ಕೂಡಲೇ ಕ್ರಮ ಕೈಗೊಳ್ಳುವಂತೆ ವೀರಶೈವ ಸಮಾಜದ ಮುಖಂಡರು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ಓಂಕಾರ.S.V.

Post a Comment

0 Comments