ತಾಳಗುಪ್ಪ:-ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ತಾಳಗುಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಳಗುಪ್ಪದ ರೈಲ್ವೆ ನಿಲ್ದಾಣದ ಆವರಣದಲ್ಲಿ ಬೇಸಿಗೆ ಸಮಯದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಸಾರ್ವಜನಿಕ ತೆರಿಗೆ ಹಣ ಬಳಸಿ ನೆಟ್ಟ ಮಾವಿನ ಗಿಡಗಳು ಸಂಪೂರ್ಣ ಒಣಗಿ ಹೋಗಿದ್ದೂ, ಮಳೆಗಾಲದಲ್ಲಿ ನೆಡಬೇಕಾಗಿದ್ದ ಗಿಡಗಳನ್ನು ಬೇಸಿಗೆಕಾಲದಲ್ಲಿ ನೆಟ್ಟು ತೋರಿಕೆಗೆ ಮಾತ್ರಾ ವನ್ಯಸಂಪತ್ತುದತ್ತ ಪ್ರಚಾರಕ್ಕೆ ಸೀಮಿತವಾದ ಸರ್ಕಾರಗಳು, ಒಟ್ಟಾರೇಯಾಗಿ ಇದೊಂದು ರೈಲ್ವೆ ಇಲಾಖೆಯ ನಿರ್ಲಕ್ಷತನ, ಬೇಜವಾಬ್ದಾರಿತನದ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈ ಬಗ್ಗೆ ರೈಲ್ವೆ ಪ್ರಯಾಣಿಕರು, ಪರಿಸರವಾದಿಗಳು, ಪ್ರವಾಸಿಗರು, ಸ್ಥಳೀಯರು, ರೈಲ್ವೆ ಇಲಾಖೆಯು ಸಾರ್ವಜನಿಕ ತೆರಿಗೆ ಹಣ ಬಳಸಿ ಅವೈಜ್ಞಾನಿಕವಾಗಿ ನೆಟ್ಟ ಮಾವಿನ ಗಿಡಗಳನ್ನು ಸೂಕ್ತ ನಿರ್ವಹಣೆಯಲ್ಲಿ ವಿಫಲರಾದ ಸಂಬಂಧ ಪಟ್ಟ ರೈಲ್ವೆ ಅಧಿಕಾರಿಗಳ ವಿರುದ್ಧ ರೈಲ್ವೆ ಇಲಾಖೆಯ ಮೇಲಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ ✒️ಓಂಕಾರ ಎಸ್. ವಿ. ತಾಳಗುಪ್ಪ*
0 Comments