ಕೆ.ಹೆಚ್.ಶ್ರೀನಿವಾಸ್ ಮತ್ತು ಶಾಸಕ ಹರತಾಳು ಹಾಲಪ್ಪ ಅವರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದ ಹರನಾಥರಾವ್.
ಎಲ್.ಬಿ.ಕಾಲೇಜು ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಮಲೆನಾಡು ಅಭಿವೃದ್ಧಿ ಪ್ರತಿಷ್ಟಾನ
ಈ ಹಿನ್ನೆಲೆಯಲ್ಲಿ ಇಂದಿನ ಪ್ರತಿಷ್ಟಾನದ ಸರ್ವ ಸದಸ್ಯರ ಸಭೆಯಲ್ಲಿ ಭಾರೀ ಗದ್ದಲದ ಶಂಕೆ
ತಮ್ಮ ಮೇಲೆ ಹಲ್ಲೆ ನಡೆಯಬಹುದು ಎಂದು ಅನುಮಾನಗೊಂಡಿದ್ದ ಕೆ.ಹೆಚ್.ಶ್ರೀನಿವಾಸ್
ಈ ಬಗ್ಗೆ ಮಾಹಿತಿ ಪಡೆದ ಶಾಸಕ ಹರತಾಳು ಹಾಲಪ್ಪ ತಮಗಿದ್ದ ಆಹ್ವಾನದ ಮೇರೆಗೆ ಸಭೆಯಲ್ಲಿ ಭಾಗಿಯಾದರು.
ಅಧ್ಯಕ್ಷರ ಬದಲಾವಣೆ ಅನಿವಾರ್ಯವಾದರೆ ಹಲ್ಲೆಯಂತಹ ಘಟನೆಗಳು ನಡೆಯಬಾರದು.
ನಾನು ಕೂಡಾ ಎಲ್.ಬಿ.ಕಾಲೇಜಿನ ವಿದ್ಯಾರ್ಥಿ.ಅದನ್ನು ದೇವಸ್ಥಾನ ಎಂದು ನಂಬಿದವನು.
ಅಂತಲ್ಲಿ ಅಧಿಕಾರ ಹಸ್ತಾಂತರದ ಸಮಯದಲ್ಲಿ ಹಲ್ಲೆಯಂತಹ ಘಟನೆ ನಡೆದರೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದ ಶಾಸಕ ಹರತಾಳು ಹಾಲಪ್ಪ.
ಇದೇ ಕಾರಣಕ್ಕಾಗಿ ವಿಧಾನಸಭೆ ಅಧಿವೇಶನಕ್ಕೆ ಗುರುವಾರ ಗೈರು ಹಾಜರಾಗಲು ತೀರ್ಮಾನಿಸಿ ಸಾಗರಕ್ಕೆ ತೆರಳಿದ್ದರು ಹಾಲಪ್ಪ
ಜತೆಗೇ ರಾಜೀ ಸೂತ್ರವೊಂದನ್ನು ಹಿಡಿದುಕೊಂಡು ಹೋಗಿದ್ದರು.
ಅಧ್ಯಕ್ಷರ ಬದಲಾವಣೆ ಅನಿವಾರ್ಯವಾದರೆ ಹರನಾಥರಾವ್ ಮತ್ತಿಕೊಪ್ಪ ಅವರು ನೂತನ ಅಧ್ಯಕ್ಷರಾಗಲಿ ಎಂಬುದು ಈ ಸೂತ್ರ
ಸಾರ್ವಜನಿಕ ಬದುಕಿನಲ್ಲಿ ಯಾವ ಕಳಂಕವೂ ಇಲ್ಲದ ಮಿಸ್ಟರ್ ಕ್ಲೀನ್ ಹರನಾಥರಾವ್ ಉತ್ತಮ ಆಯ್ಕೆ ಎಂದ ಹರತಾಳು ಹಾಲಪ್ಪ?
ಹಲವು ನಾಟಕೀಯ ಬೆಳವಣಿಗೆಗಳ ಮಧ್ಯೆ ಇಂದು ಮಲೆನಾಡು ಅಭಿವೃದ್ಧಿ ಪ್ರತಿಷ್ಟಾನದ ಅಧ್ಯಕ್ಷರಾದ ಹರನಾಥರಾವ್ ಮತ್ತಿಕೊಪ್ಪ
ಮಂದಾರ ನ್ಯೂಸ್ ಗೆ ಉನ್ನತ ಮೂಲಗಳು ನೀಡಿದ ಮಾಹಿತಿ.
0 Comments