ಊರಮ್ಮ ಜಾತ್ರೆಯ ಪ್ರಯುಕ್ತ "ವಾರದ ಸಂತೆ" ಎಪಿಎಂಸಿ ಮಾರ್ಕೆಟ್ ಗೆ ಶಿಫ್ಟ್ !!!


ಹರಿಹರ:-ನಗರದಲ್ಲಿ ಊರಮ್ಮ ದೇವಿಯ ಜಾತ್ರೆ ನಡೆಯುತ್ತಿದ್ದು ಪ್ರತಿ ಮಂಗಳವಾರ ನಡೆಯುತ್ತಿದ್ದ ವಾರದ ಸಂತೆಯನ್ನು ಮಾನ್ಯ ತಹಶೀಲ್ದಾರ ಅವರ ಆದೇಶದಂತೆ ನಗರದ ಎಪಿಎಂಸಿ ಮಾರ್ಕೆಟ್ ಗೆ ಸ್ಥಳಾಂತರ ಮಾಡಲಾಗಿದೆ ಎಂದು ನಗರಸಭೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

ವ್ಯಾಪಾರಸ್ಥರು, ಬೀದಿ ಬದಿ ವ್ಯಾಪಾರಿಗಳು.ಹಣ್ಣು, ಹೂವು, ತರಕಾರಿ, ಮಾರಾಟ ಮಾಡುವವರು ಹಾಗೂ ಗ್ರಾಹಕರು ಎಪಿಎಂಸಿ ಮಾರ್ಕೆಟ್ ಆವರಣದಲ್ಲಿ ನಡೆಯುವ ವಾರದ ಸಂತೆಗೆ ಸಹಕರಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ.
ಇದು ಹರಿಹರ ನಗರದ ಗ್ರಾಮದೇವತೆ ಜಾತ್ರೆಯ ಪ್ರಯುಕ್ತ ತಾತ್ಕಾಲಿಕವಾಗಿ ಈ ಮಂಗಳವಾರದ ಸಂತೆಯನ್ನು ಸ್ಥಳಾಂತರಿಸಲಾಗಿದೆ.

ಇದು ನಗರಸಭೆಯವರ ಪ್ರಕಟಣೆಯಾಗಿದ್ದು, ನಮ್ಮ ಮಾಧ್ಯಮವು ಪ್ರಚಾರ ಮಾಡಿದೆ.

ಪ್ರಕಾಶ್ ಮಂದಾರ.

Post a Comment

0 Comments