ನೂರಾರು ಕುಟುಂಬಗಳಲ್ಲಿ ಪ್ರಕಾಶಮಾನವಾಗಿ ಬೆಳಗಿದ ಪ್ರಕಾಶ್ ಅವರ ಸಾವಿನ ತನಿಖೆ ಎಲ್ಲಿಗೆ ಬಂದಿತು?


ಹೊಸನಗರ:-ಹೊಸನಗರ ವ್ಯಾಪ್ತಿಯ ಪಟುಗುಪ್ಪೆ ಸೇತುವೆ ಬಳಿ ಅನುಮಾನಸ್ಪದ ಸಾವಿನ ಬಗ್ಗೆ ಪೊಲೀಸ್ ಇಲಾಖೆಯ  ಆಮೆವೇಗದ ತನಿಖೆಯ ಕುರಿತು ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕವಾಗಿ ಟೀಕೆ ಟಿಪ್ಪಣಿಗಳು ಹರಿದಾಡುತ್ತಿದ್ದೂ 03 ತಿಂಗಳು ಕಳೆಯುತ್ತಾ ಬಂದರೂ ಪ್ರಕಾಶ್ ಬಸ್ ಮಾಲೀಕರಾದ ಶ್ರೀ ಪ್ರಕಾಶ್ ನಿಗೂಢ ಸಾವಿನ ತನಿಖಾ ವರದಿಯನ್ನು ಶ್ರೀ ಪ್ರಕಾಶ್ ಕುಟುಂಬಕ್ಕಾಗಲಿ, ಸಾರ್ವಜನಿಕರಿಗಾಗಲಿ, ಮಾಧ್ಯಮಕ್ಕಾಗಲಿ ಪೊಲೀಸ್ ಇಲಾಖೆ ಮಾಹಿತಿ ನೀಡದಿರುವುದು ಹತ್ತು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿರುವುದು ವಾಸ್ತವ.
*ಘಟನೆ:-* ದಿನಾಂಕ 21/01/2022 ರಂದು ಮನೆಯಿಂದ ತೆರಳಿದ ಪ್ರಕಾಶ್ ಬಸ್ ಮಾಲೀಕರಾದ ಶ್ರೀ ಪ್ರಕಾಶ್ ರವರು ಮರಳಿ ಮನೆಗೆ ಬಾರದಿರುವ ಹಿನ್ನಲೆಯಲ್ಲಿ ತೀವ್ರ ಆತಂಕಗೊಂಡ ಕುಟುಂಬ 22/01/2022 ರಂದು ಹೊಸನಗರ ಪೊಲೀಸ್ ಠಾಣೆಗೆ ಶ್ರೀ ಪ್ರಕಾಶ್ ನಾಪತ್ತೆ ಪ್ರಕರಣ ದಾಖಲಿಸಿದ್ದು, ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸ್ ಇಲಾಖೆ ತನಿಖೆ ಚುರುಕುಗೊಂಡ ಬೆನ್ನಲ್ಲೇ ಪಟುಗುಪ್ಪೆ ಸೇತುವೆಯ ಬಳಿ ಪ್ರಕಾಶ್ ರವರ ಕಾರು ನಿಂತಿರುವ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಇಲಾಖೆ ಸೇತುವೆಯ ತಳಭಾಗದಲ್ಲಿರುವ  ಹರಿಯುತ್ತಿರುವ ನೀರಲ್ಲಿ ಅನುಮಾನದಿಂದ ಪ್ರಕಾಶ್ ಶವ ಹುಡುಕಾಟ ನೆಡೆಸಿದರು, ಅಲ್ಲದೇ 24/01/2022 ರಂದು ಅದೇ ಪಟುಗುಪ್ಪೆ ಸೇತುವೆಯ ಅನತಿ ದೂರದಲ್ಲೇ ಶ್ರೀ ಪ್ರಕಾಶ್ ಶವ ಪತ್ತೆಯಾಗಿದ್ದು, ಶ್ರೀ ಪ್ರಕಾಶ್ ರವರ ಹುಡುಕಾಟದ ಮಂದಗತಿಯ ತನಿಖಾ ಕಾರ್ಯಾಚರಣೆ ವಿರುದ್ಧ ಹೊಸನಗರ ಪೊಲೀಸ್ ಠಾಣೆ ಎದುರು ನೂರಾರು ಸಂಖ್ಯೆಯಲ್ಲಿ ಜಮಾವಣೆಗೊಂಡ ಪ್ರಕಾಶ್ ಬಸ್ ಏಜೆಂಟ್ ರು, ಚಾಲಕರು, ಕಂಡಕ್ಟರ್ ಗಳು, ಹಾಗೂ ಶ್ರೀ ಪ್ರಕಾಶ್ ಅಭಿಮಾನಿಗಳು ತೀವ್ರ ಪ್ರತಿಭಟನೆ ನೆಡೆಸಿದರು. ಸ್ಥಳಕ್ಕೆ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಹರತಾಳು ಹಾಲಪ್ಪ ಹಾಗೂ ಶ್ರೀಮತಿ ಡಾಕ್ಟರ್ ಕಾಗೋಡು ರಾಜನಂದಿನಿ ಇನ್ನೂ ಮುಂತಾದ ರಾಜಕೀಯ ಮುಖಂಡರುಗಳು ಪಟುಗುಪ್ಪೆ ಸೇತುವೆ ಬಳಿ ಭೇಟಿ ಕೊಟ್ಟು ಪ್ರಾಮಾಣಿಕ ತನಿಖೆ ನೆಡೆಸುವುದಾಗಿ ನೆರೆದಿದ್ದ ಸಾವಿರಾರು ಜನರ ಸಮಕ್ಷಮದಲ್ಲಿ ವಾಗ್ದಾನ ನೀಡಿದ್ದಾರೆ.

*ಮಾನ್ಯರ ವಾಗ್ದಾನ ನೀಡಿದ್ದೂ ಸರಿಯಷ್ಟೇ,  ಘಟನೆ ನೆಡೆದು ಸುಮಾರು 03 ತಿಂಗಳು ಕಳೆಯುತ್ತಾ ಬಂದರೂ ಇದುವರೆಗೂ ಪೊಲೀಸ್ ಇಲಾಖೆ ಕುಟುಂಬಕ್ಕಾಗಲಿ, ಮಾಧ್ಯಮಕ್ಕಾಗಲಿ, ಸಾರ್ವಜನಿಕರಿಗಾಗಲಿ ಪ್ರಕಾಶ್ ಬಸ್ ಮಾಲೀಕರಾದ ಶ್ರೀ ಪ್ರಕಾಶ್ ರವರ ನಿಗೂಢ ಸಾವಿನ ಕುರಿತ ಮಾಹಿತಿಯನ್ನು ಅಥವಾ ತನಿಖೆ ಬಗ್ಗೆ ಪೊಲೀಸ್ ಇಲಾಖೆ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂಬ ಬಗ್ಗೆ ಶಿವಮೊಗ್ಗ ಜಿಲ್ಲಾಧ್ಯ0ತ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ*

Post a Comment

0 Comments