ಹರಿಹರದಲ್ಲಿ "ದಿ ಕಾಶ್ಮೀರ ಫೈಲ್ಸ್" ಒಂದು ವಾರ ಉಚಿತ ಪ್ರದರ್ಶನ!!!



ಚಂದ್ರಶೇಖರ್ ಪೂಜಾರ್ ಅಭಿಮಾನಿ ಬಳಗದ ವತಿಯಿಂದ ನಗರದ ಶ್ರೀಕಾಂತ ಟಾಕೀಸಿನಲ್ಲಿ ಪ್ರದರ್ಶನಕ್ಕೆ ವ್ಯವಸ್ಥೆ .

ಹರಿಹರ:-"ದಿ ಕಾಶ್ಮೀರ ಫೈಲ್ಸ್ (The Kashmir Files) ಸದ್ಯ ದೇಶದೆಲ್ಲೆಡೆ ಸಂಚಲನ ಸೃಷ್ಟಿಸಿದೆ.ಬಿಡುಗಡೆಯಾಗಿರುವ ಎಲ್ಲಾ ಚಿತ್ರಮಂದಿರಗಳು ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ .ರಾಜ್ಯದ ಮುಖ್ಯಮಂತ್ರಿಗಳು ಈ ಚಲನ ಚಿತ್ರವನ್ನು ವೀಕ್ಷಿಸಿದ್ದಾರೆ.ಸಚಿವರು ಶಾಸಕರಿಗಾಗಿ ಚಿತ್ರದ ವೀಕ್ಷಣೆಗೆ ರಾಜ್ಯ ಸರ್ಕಾರ ವ್ಯವಸ್ಥೆ ಮಾಡಿದೆ.

ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ವಿಷಯವನ್ನು ಆಧರಿಸಿ ತಯಾರಾಗಿರುವ ಈ ಸಿನಿಮಾ ದೇಶದ ನಾಗರಿಕರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದ್ದಂತೂ ಸತ್ಯ .
ಹರಿಹರದಲ್ಲಿ ಭವಿಷ್ಯದ ಬಿಜೆಪಿಯ ಪ್ರಬಲ ಆಕಾಂಕ್ಷಿ ಚಂದ್ರಶೇಖರ್ ಪೂಜಾರ ಇವರು ತಮ್ಮ ಸ್ವಂತ ಖರ್ಚಿನಲ್ಲಿ ನಗರದ ಶ್ರೀಕಾಂತ್ ಟಾಕೀಸ್ ನಲ್ಲಿ ದಿನದ 4ಪ್ರದರ್ಶನದಂತೆ 1ವಾರಗಳ ಕಾಲ "ದಿ ಕಾಶ್ಮೀರ್ ಫೈಲ್ಸ್"ಚಿತ್ರವನ್ನ ಶ್ರೀಕಾಂತ್ ಟಾಕೀಸಿನಲ್ಲಿ ದಿನಾಂಕ ಮಾ 18 ರಿಂದ ಬಿಡುಗಡೆಯಾಗುತ್ತಿದ್ದು ಸತತ 1ವಾರಗಳ ಕಾಲ ಪ್ರತಿನಿತ್ಯ 4ಪ್ರದರ್ಶನ  ಉಚಿತವಾಗಿ ವೀಕ್ಷಿಸಲು ಎಲ್ಲಾ ವ್ಯವಸ್ಥೆಯನ್ನು ಮಾಡಿದ್ದಾರೆ .

ನಗರದ ದೇಶಭಕ್ತರಿಗಾಗಿಯೇ ಈ ಚಿತ್ರದ ಉಚಿತ ವೀಕ್ಷಣೆಯ ವ್ಯವಸ್ಥೆಯನ್ನ ಮಾಡಿದ್ದೇನೆ.ಎಲ್ಲ ದೇಶ ಭಕ್ತರು ಈ ಚಿತ್ರವನ್ನ ವೀಕ್ಷಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ .

"ದಿ ಕಾಶ್ಮೀರ್ ಫೈಲ್" ಚಿತ್ರಕ್ಕೆ ಪ್ರಧಾನಿ ಮೋದಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದನ್ನು ಚಿತ್ರತಂಡವು ಸಾಮಾಜಿಕ ಜಾಲತಾಣದಲ್ಲಿ ಸಂತಸವನ್ನ ಹಂಚಿಕೊಂಡಿದ್ದನ್ನು ನಾವು ನೀವೆಲ್ಲಾ ಕಂಡಿದ್ದೇವೆ.ಪ್ರಧಾನಿ ಯವರ ಮೆಚ್ಚುಗೆಯ ಮಾತುಗಳಿಂದ ಪೇಕ್ಷಕರಲ್ಲಿ ಔಚಿತ್ಯದ ಕುರಿತು ಕೌತುಕ ಹೆಚ್ಚಾಗಿತ್ತು .ಈ ಚಿತ್ರ ದೇಶಾದ್ಯಂತ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು ಹಲವು ರಾಜ್ಯಗಳು ಈಗಾಗಲೇ ತೆರಿಗೆ ವಿನಾಯಿತಿ ಘೋಷಿಸಿದೆ.ಅದರಂತೆ ಕರ್ನಾಟಕ ರಾಜ್ಯ ಸರ್ಕಾರವು ಚಿತ್ರ ಪ್ರದರ್ಶನಕ್ಕೆ ತೆರಿಗೆ ವಿನಾಯಿತಿ ಘೋಷಣೆ ಮಾಡಿದೆ.

"ದಿ ಕಾಶ್ಮೀರ್ ಫೈಲ್" ಸಿರಿಮಾವು,1990 ರಲ್ಲಿ ಜಮ್ಮು ಕಾಶ್ಮೀರದಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಹಾಗೂ ವಲಸೆ ಕುರಿತಾದ ಕಥೆಯನ್ನು ಹೊಂದಿದೆ.ಮುಸ್ಲಿಮ್ ಪ್ರತ್ಯೇಕತವಾದಿಗಳು ಹೇಗೆ ಕಾಶ್ಮೀರ ಪಂಡಿತರನ್ನು ಕೊಂದರು ,ರಾಜ್ಯದಿಂದ ಅವರನ್ನು ಹೊರಗಟ್ಟಿದರು ಎಂಬುದನ್ನ ಭಾವನಾತ್ಮಕವಾಗಿ ಚಿತ್ರೀಕರಿಸಲಾಗಿದೆ.

1989ರ ಸಮಯದಲ್ಲಿ ಪಾಕ್ ನ ಐ ಎಸ್ ಐ ಪೇರಣೆಯಿಂದ 'ಸ್ವತಂತ್ರ ಕಾಶ್ಮೀರ'ದ ಕೂಗು ಜೋರಾಗಿ ಎದ್ದಿತ್ತು.ಉಗ್ರಗಾಮಿ ಸಂಘಟನೆ ಜೆಕೆಎಲ್ಎಫ್ ಹಿಂಸಾತ್ಮಕ ರೀತಿಯಲ್ಲಿ ಸ್ವತಂತ್ರ ಕಾಶ್ಮೀರಕ್ಕೆ ಒತ್ತಾಯಿಸತೊಡಗಿತು.
ಉಗ್ರಗಾಮಿಗಳಿಗೆ ಶಿಕ್ಷೆ ನೀಡಿದ ಜಡ್ಜ್ ಹಾಗೂ ವಾದವನ್ನು ಮಂಡಿಸಿದ ಲಾಯರ್ ಗಳನ್ನು ಪಾಕ್ ಮೂಲಕ ಜೆಕೆಎಲ್ಎಫ್ ಉಗ್ರರು ಹಾಡು ಹಗಲೇ ನಿರ್ಧಾಕ್ಷಿಣ್ಯವಾಗಿ ಕೊಂದರು,ಅಂದಿನ ಕೇಂದ್ರ ಗೃಹ ಸಚಿವರಾಗಿದ್ದ ಮುಫ್ತಿ ಮೊಹಮ್ಮದ್ ಸಯ್ಯದ್ ಮಗಳು ರೂಬಿಯಾ ಸೈಯದ್ ನನ್ನು ಅಪಹರಣ ಮಾಡಿದರು.(ಜಮ್ಮು ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿಯ ಸಹೋದರಿ ಈಕೆ ) ಈ ಅಪಹರಣದ ಬಳಿಕವಂತೂ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಕಾಶ್ಮೀರ ಪಂಡಿತರನ್ನು ಭಾರತೀಯ ಸೈನ್ಯದ ಮಾಹಿತಿದಾರರು ಎಂದು ಮೌಲ್ವಿಯೊಬ್ಬ ಘೋಷಿಸಿಬಿಟ್ಟ,ಅಷ್ಟೇ ಸಾಕಾಯಿತು ಹಿಂದೂಗಳ ವಿರುದ್ಧ ಸತತ ದಾಳಿಗಳು ಪ್ರಾರಂಭವಾಗಲು.

ಈ ಸಮಯದಲ್ಲಿ ಕೇಂದ್ರದಲ್ಲಿ ವಿ ಪಿ ಸಿಂಗ್ ಪ್ರಧಾನಿಯಾಗಿದ್ದರು. ಬಿಜೆಪಿ ಸೇರಿದಂತೆ ಇತರೆ ಕೆಲವು ಪಕ್ಷಗಳ ಬೆಂಬಲ ವಿ ಪಿ ಸಿಂಗ್ ಇವರಿಗಿತ್ತು .ಜಮ್ಮು ಕಾಶ್ಮೀರದಲ್ಲಿ ಫಾರೂಖ್ ಅಬ್ದುಲ್ ಸಿಎಂ ಆಗಿದ್ದರು. ರಾಜ್ಯದಲ್ಲಿ ಪರಿಸ್ಥಿತಿ ಕೈಮೀರುತ್ತಿದೆ ಎನಿಸಿದಾಗ ಅಲ್ಲಿ ರಾಜ್ಯಪಾಲರ ಆಡಳಿತ ಹೇರಲಾಯ್ತು. ಆಗ ರಾಜ್ಯಪಾಲರಾಗಿದ್ದು ಬಿಜೆಪಿಯ ಜಗಮೋಹನ್ ಮಲ್ಹೋತ್ರಾ .ಯಾವ ರಾಜಕಾರಣಿಗಳು ಸರ್ಕಾರಗಳು ಹಿಂದೂಗಳ ವಲಸೆಯನ್ನು ಅವರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯಲಾಗಲಿಲ್ಲ .

1990 ರ ಆರಂಭದಲ್ಲಿ ಲಕ್ಷಾಂತರ ಮಂದಿ ಕಾಶ್ಮೀರ ಪಂಡಿತರು ಜಮ್ಮು ಕಾಶ್ಮೀರ ಬಿಟ್ಟು ವಲಸೆ ಹೊರಟರು.ಹಲವರನ್ನು ಕೊಲ್ಲಲಾಯಿತು ಕಾಶ್ಮೀರಿ ಪಂಡಿತ್ ಸರಸಂಘ ಪರಿಷದ್ 2007 ರಲ್ಲಿ ನಡೆಸಿದ ಸಮೀಕ್ಷೆಯಂತೆ ಸುಮಾರು339 ಮಂದಿ ಕಾಶ್ಮೀರಿ ಪಂಡಿತರನ್ನು ಹತ್ಯೆ ಮಾಡಲಾಯಿತು.'650 ಮಂದಿ ಕಾಶ್ಮೀರಿ ಪಂಡಿತರ ಹತ್ಯೆ ಆಗಿರಬಹುದು ಎಂಬ ಅಂದಾಜು ನಮಗಿದೆ'ಎಂದು ಕಾಶ್ಮೀರಿ ಪಂಡಿತ್ ಸರಸಂಘ ಪರಿಷದ್ ಅಧ್ಯಕ್ಷ ಸಂಜಯ್ ಟಿಕೂ ಹೇಳಿದರು.3000-4000 ಮಂದಿ ಕಾಶ್ಮೀರಿ ಪಂಡಿತರು ಹತ್ಯೆಯಾಗಿತ್ತು ಎಂಬ ಸುಳ್ಳು ಸುದ್ದಿಯನ್ನು ನಾವು ಒಪ್ಪುವುದಿಲ್ಲ ಎಂದು ಸಂಜಯ್ ಹೇಳಿದರು. ಕಾಶ್ಮೀರದಲ್ಲಿ ಹತ್ಯೆಯಾದ ಹಿಂದೂಗಳ ಸಂಖ್ಯೆ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳುತ್ತಾರೆ.

ಈಗ ಬಿಡುಗಡೆಯಾಗಿರುವ "ದಿ ಕಾಶ್ಮೀರ್ ಫೈಲ್" ಸಿನಿಮಾ ಕಾಶ್ಮೀರ ಪಂಡಿತರ ಮೇಲೆ ಆದ ದೌರ್ಜನ್ಯದ ಕಥೆ ಹೊಂದಿದೆ.ಸಿನಿಮಾದಲ್ಲಿ ಭಾವುಕತೆಯನ್ನು ಹೊಂದಿದೆ.ಅನುಪಮ್ ಖೇರ್ ಅದ್ಭುತ ನಟನೆ ಸಿನಿಮಾಕ್ಕೆ ಕಳಸಾ. ಆದರೆ ಇದು ನೈಜ ಇತಿಹಾಸ ಅಥವಾ ಇದ್ದಷ್ಟೇ ಇತಿಹಾಸ ಎಂಬ ಅಂಬೋಣ  ಮತ್ತೊಮ್ಮೆ ಮಗದೊಮ್ಮೆ ಓರೆಗೆ ಹಚ್ಚಿ ನೋಡಬೇಕಾಗಿದೆ.

ಹರಿಹರ ತಾಲ್ಲೂಕಿನ ಸುತ್ತಮುತ್ತಲಿನ ಸಮಸ್ತ ರಾಷ್ಟ್ರ ಭಕ್ತರಿಗಾಗಿ ದಿನನಿತ್ಯ 1ವಾರಗಳ ಕಾಲ "ದಿ ಕಾಶ್ಮೀರ್ ಫೈಲ್ಸ್ "4ಪ್ರದರ್ಶನದಂತೆ ಉಚಿತವಾಗಿ ತೋರಿಸಲು ಮುಂದಾಗಿರುವ ಹರಿಹರದ ಪ್ರಬಲ ಬಿಜೆಪಿ ಆಕಾಂಕ್ಷಿ ಚಂದ್ರಶೇಖರ್ ಪೂಜಾರ್ ಹನಗವಾಡಿ ಇವರ ಕಾರ್ಯವನ್ನು ತಾಲ್ಲೂಕಿನ ಸಮಸ್ತ ಜನರೂ ಮುಕ್ತಕಂಠದಿಂದ ಸಾಮಾಜಿಕ ಜಾಲತಾಣದ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ದಿನಾಂಕ 18/3/2022 ರಿಂದ ದಿನದ 4ಪ್ರದರ್ಶನದಂತೆ ಒಂದು ವಾರಗಳ ಕಾಲ ನಗರದ ಶ್ರೀಕಾಂತ ಚಿತ್ರಮಂದಿರದಲ್ಲಿ ವೀಕ್ಷಣೆ ಮಾಡಬಹುದು .ಚಿತ್ರ ವೀಕ್ಷಣೆಗೆ ಬರುವ ದೇಶ ಭಕ್ತರಿಗಾಗಿ ಸೂಕ್ತ ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ .

ಪ್ರಕಾಶ್ ಮಂದಾರ 
ಸಂಪಾದಕರು 
8880499904

Post a Comment

0 Comments