ಹರಿಹರ : ನಗರದ ಐತಿಹಾಸಿಕ ಪ್ರಸಿದ್ದ ಗ್ರಾಮದೇವತೆ ಶ್ರೀ ಊರಮ್ಮ ದೇವಿಯ ಜಾತ್ರೆಗೆ ಇಂದು ಬೆಳಗ್ಗೆಯಿಂದ ಶಿವಮೊಗ್ಗ ಸರ್ಕಲ್ ನಲ್ಲಿರುವ ಮಾಚೇನಹಳ್ಳಿ ಗ್ರಾಮದೇವತೆ ದೇವಸ್ಥಾನದಲ್ಲಿ ಊರಮ್ಮ ದೇವಿಗೆ ಪೂಜೆ ಸಲ್ಲಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಸರಿದ ಪರದೆ, ಮೊಳಗಿದ ಘೋಷಣೆ:
ನಗರದ ಹೃದಯಭಾಗವಾದ ಶಿವಮೊಗ್ಗ ಸರ್ಕಲ್ ನ ಮಾಚೇನಹಳ್ಳಿಯ ಗ್ರಾಮದೇವತೆ ದೇವಸ್ಥಾನ ತಾಯಿಯ ತವರು ಮನೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಮಂಟಪ ನಿರ್ಮಿಸಿ ಊರಮ್ಮ ದೇವಿಯನ್ನು ಪ್ರತಿಷ್ಠಾಪಿಸಲಾಗಿದೆ. ಈ ಸಂದರ್ಭ ಭಕ್ತರು ಘೋಷಣೆಗಳು ಮುಗಿಲುಮುಟ್ಟಿತು.
ಪ್ರಥಮ ಪೂಜೆಯೊಂದಿಗೆ ಪುನೀತರಾದ ಭಕ್ತ ಸಮೂಹ:ಈ ಸಂದರ್ಭದಲ್ಲಿ ದೇವಿಗೆ ಮಂಗಳಾರತಿ ಬೆಳಗುತ್ತಿರುವುದನ್ನು ಕಂಡು ಭಕ್ತರು ಪುನೀತರಾದರು. ನಂತರ ಸರದಿಸಾಲಿನಲ್ಲಿ ಬಂದು ದೇವಿಗೆ ಪ್ರಾರ್ಥನೆ ಸಲ್ಲಿಸಿದರು.
ಹರಿದು ಬಂತು ಭಕ್ತಸಾಗರ:
ಅಮ್ಮನವರ ದೇವಿಯ ದರ್ಶನ ಪಡೆಯಲು ರಾಜ್ಯದ ವಿವಿಧೆಡೆಗಳಿಂದ ಭಕ್ತಸಾಗರ ಹರಿದು ಬಂದಿದೆ. ಇಂದು ಬೆಳಗಿನ ಜಾವದಿಂದಲೇ ಸರತಿಯಲ್ಲಿ ನಿಂತಿರುವ ಜನರು, ದೇವಿಯ ದರ್ಶನ ಪಡೆದು ಪುನೀತರಾದರು.
ನಗರದ ವಿವಿಧೆಡೆ
ರಸ್ತೆ ಸಂಚಾರದಲ್ಲಿ ಬದಲಾವಣೆ:
ಹರಿಹರ ಊರಮ್ಮ ಜಾತ್ರೆ ಹಿನ್ನಲೆ ರಸ್ತೆ ಸಂಚಾರ ಮಾರ್ಗದಲ್ಲಿ ಬದಲಾವಣೆ.!?
ಇದೇ ದಿನಾಂಕ 22 ರಿಂದ ನಡೆಯಲಿರುವ ಹರಿಹರ ಊರಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ನಗರಕ್ಕಾಗಮಿಸುವ ಕಾರಣ ಸಾರ್ವಜನಿಕರ ಅನುಕೂಲ ಹಾಗೂ ಸುಗಮ ಸಂಚಾರಕ್ಕೆ ರಸ್ತೆ ಸಂಚಾರ ಮಾರ್ಗದಲ್ಲಿ ಕೆಲವು ತಾತ್ಕಾಲಿಕ ಮಾರ್ಪಾಡು ಮಾಡಲಾಗಿದೆ.
ಹರಿಹರ ನಗರ ಹಾಗೂ ಹರಪನಹಳ್ಳಿ ,ಹೊಸಪೇಟೆ ಕಡೆ ಹೋಗುವ ಲಾರಿ ಮತ್ತು ಬಸ್ ಗಳು ಬೈಪಾಸ್ ನಿಂದ ಕೆಪಿಎಂ ಕಡೆಯಿಂದ ಹರಿಹರ ನಗರಕ್ಕೆ ಬಂದು ಹೋಗೋದು.
ಹೊನ್ನಾಳಿ, ಶಿವಮೊಗ್ಗ ಹಾಗೂ ರಾಣೇಬೆನ್ನೂರು,ಹಾವೇರಿ ಕಡೆ ಹೋಗುವ ಎಲ್ಲಾ ವಾಹನಗಳು K.P.M ಮಾರ್ಗವಾಗಿ NH-4 ಹೋಗುವುದು.
ಊರಮ್ಮ ದೇವಿಯ ದರ್ಶನಕ್ಕೆ ಆಗಮಿಸುವ ಹರಪ್ಪನಳ್ಳಿ ಹಾಗೂ ದಾವಣಗೆರೆ ಕಡೆಯಿಂದ ಬರುವಂತಹ ಭಕ್ತರು ತಮ್ಮ ತಮ್ಮ ವಾಹನಗಳನ್ನು ಗಾಂಧಿ ಮೈದಾನ ಹಾಗೂ SJVP ಕಾಲೇಜು ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗಿದೆ.
ಹೊನ್ನಾಳಿ, ಶಿವಮೊಗ್ಗ ಕಡೆಯಿಂದ ಬರುವಂತಹ ಭಕ್ತರು ಗಿರಿಯಮ್ಮ ಕಾಲೇಜು ಹಾಗೂ ಡಿ.ಆರ್.ಎಂ ಕಾಲೇಜು ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಬೈಕ್ ಮತ್ತು ಕಾರುಗಳ ಮೂಲಕ ನಗರಕ್ಕೆ ಆಗಮಿಸುವ ಪ್ರಯಾಣಿಕರು ಗಿರಿಯಮ್ಮ ಕಾಲೇಜ್ ಮುಖಾಂತರವಾಗಿ (J.C ಬಡಾವಣೆ 5 ಮೇನ್ )ಪ್ರಶಾಂತ್ ನಗರ, ಬೆಂಕಿನಗರ, ಚಾನೆಲ್ ರಸ್ತೆ ಮೂಲಕ ಹಳೆ ಪಿಬಿ ರಸ್ತೆ ಮುಖಾಂತರ ಹರಿಹರ ನಗರಕ್ಕೆ ದಾವಣಗೆರೆ ಕಡೆ ಹೋಗೋದು.
ಅದೇ ರೀತಿ ಹರಿಯರ ನಗರದಿಂದ ಹೊನ್ನಾಳಿ, ಶಿವಮೊಗ್ಗ ಹಾಗೂ ರಾಣೇಬೆನ್ನೂರು ಕಡೆ ದ್ವಿಚಕ್ರ ಹಾಗೂ ಕಾರುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಬೆಂಕಿನಗರ ಚಾನೆಲ್ ರಸ್ತೆಯ ಮುಖಾಂತರ ಪ್ರಶಾಂತ್ ನಗರದ ಐದನೇ ಮೇನ್ ಮುಖಾಂತರ ಹಾದು ಶಿವಮೊಗ್ಗ ಹಾಗೂ ಹರಪನಹಳ್ಳಿ ರಾಜ್ಯ ಹೆದ್ದಾರಿ ಸೇರುವುದು, ಮುಂದೆ ಪ್ರಯಾಣ ಬೆಳೆಸುವುದು.
ಇದು ಜಾತ್ರೆಯ ಪ್ರಯುಕ್ತ ತಾತ್ಕಾಲಿಕ ಸಂಚಾರ ಮಾರ್ಗವಾಗಿದ್ದು ಪ್ರಯಾಣಿಕರು ಸಹಕರಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿಕೊಂಡಿದೆ .ಅದೇ ರೀತಿ ಜಾತ್ರೆಯ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಈಗಾಗಲೇ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಕೈಗೊಂಡಿದೆ.
ಪೊಲೀಸ್ ವಾಹನಗಳು, ಅತಿಗಣ್ಯ ವ್ಯಕ್ತಿಗಳ ವಾಹನಗಳು, ಅಂಬ್ಯುಲೆನ್ಸ್ ಹಾಗೂ ಮೂಲಭೂತ ಸೌಕರ್ಯ ಒದಗಿಸುವ ವಾಹನಗಳನ್ನು ಅನುಕೂಲಕ್ಕೆ ತಕ್ಕಂತೆ ಹೊರತುಪಡಿಸಿ ಸಂಚರಿಸ ಬಹುದಾಗಿದೆ ಎಂದು ಹರಿಹರದ ತಹಶೀಲ್ದಾರ್ ಕೆ .ಬಿ. ರಾಮಚಂದ್ರಪ್ಪನವರು ಆದೇಶದಲ್ಲಿ ಸೂಚಿದ್ದಾರೆ.
ಪೊಲೀಸ್ ಕಣ್ಗಾವಲು:
ನಗರದ ಹೊರವಲಯ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾ ಗಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸ್ ಕಣ್ಗಾವಲು ಹಾಕಲಾಗಿದೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಸಾರ್ವಜನಿಕರು ಸಹಕರಿಸುವಂತೆ ಶಾಂತಿ ಸುವ್ಯವಸ್ಥೆ ಕಾಪಾಡಲು ನೆರವಾಗುವಂತೆ ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್ ಅವರು ಕೋರಿದ್ದಾರೆ.
ಪ್ರಕಾಶ್ ಮಂದಾರ.
0 Comments