ಹರಿಹರದ ಗುರುಭವನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ.ಹಾಲಿ- ಮಾಜಿಗಳ ಸಂಗಮ!!


ಹರಿಹರ:-ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ.ಈ ಕಾರ್ಯಕ್ರಮವನ್ನು ಹರಿಹರದ ಗುರುಭವನದಲ್ಲಿ ಸರ್ಕಾರದ ಕೋವಿಡ್ ಮಾರ್ಗಸೂಚಿಯಂತೆ ಸರಳವಾಗಿ ಆಚರಿಸಲಾಯಿತು.

ಈ ಬಾರಿಯ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಹರಿಹರ ತಾಲ್ಲೂಕಿನ ಜನತೆಗೆ ವಿಶೇಷ ಮತ್ತು ಆಶ್ಚರ್ಯವಾದ ಘಟನೆ ನಡೆಯಿತು.

ತಾಲ್ಲೂಕಿನಲ್ಲಿ ಬಹು ವರ್ಷಗಳ ನಂತರ ಹಾಲಿ- ಮಾಜಿ ಶಾಸಕರ ಸಮಾಗಮ ಈ ಬಾರಿಯ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ವಿಶೇಷ .ಒಂದೇ ವೇದಿಕೆಯಲ್ಲಿ ತಾಲ್ಲೂಕಿನ ಅಭಿವೃದ್ಧಿಯ ಹರಿಕಾರರಾದ ತ್ರಿಮೂರ್ತಿಗಳ ದರ್ಶನ.ರಾಜಕೀಯ ಜಂಜಾಟವನ್ನು ಬದಿಗಿಟ್ಟು ಒಂದೇ ವೇದಿಕೆಯಲ್ಲಿ ಮೂವರು ಕಾಣಿಸಿಕೊಂಡಿದ್ದು ಅಪರೂಪದಲ್ಲಿ,ಅಪರೂಪ.
ಕ್ಷೇತ್ರದ ಹಾಲಿ ಶಾಸಕರಾದ ಎಚ್ ರಾಮಪ್ಪ ಹಾಗೂ ಮಾಜಿ ಶಾಸಕರುಗಳಾದ ಎಚ್ ಎಸ್ ಶಿವಶಂಕರ್, ಬಿ ಪಿ ಹರೀಶ್ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ದೀಪವನ್ನು ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ನಂತರ ಹಾಲಿ- ಮಾಜಿ ಶಾಸಕರುಗಳು ಮಹಿಳೆಯರ ಸಾಧನೆಯ ಬಗ್ಗೆ ಗುಣಗಾನ ಮಾಡಿದರು.

ಈ ಸಂದರ್ಭದಲ್ಲಿ ಹರಿಹರದ ಭವಿಷ್ಯದ ಅಭ್ಯರ್ಥಿ ಎನ್,ಎಚ್ ಶ್ರೀನಿವಾಸ್ ನಂದಿಗಾವಿ.ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಪ್ಪ,ಸೇರಿದಂತೆ ಪ್ರಮುಖ ಮಹಿಳಾ ಸಂಘದ ಪದಾಧಿಕಾರಿಗಳು,ಸದಸ್ಯರು  ಉಪಸ್ಥಿತರಿದ್ದರು.

ಹಾಲಿ-ಮಾಜಿ ಶಾಸಕರ  ಸಮಾಗಮ ಕಾರ್ಯಕ್ರಮದ ವೇದಿಕೆಗೆ ಒಂದು ಕಳಸ ಇದ್ದಂತಿತ್ತು.ನೋಡುಗರ ಕಣ್ಮನ ಸೆಳೆಯುತ್ತಿತ್ತು.

Post a Comment

0 Comments