ಸಾವಿನ ಸುತ್ತ ಅನುಮಾನದ ಹುತ್ತ !?ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಭೇಟಿ ಪರಿಶೀಲನೆ.

ಹರಿಹರ:ಇಂದು ಬೆಳಿಗ್ಗೆ ಹರಿಹರದ ಗಾಂಧಿಮೈದಾನದ ಕಾಂಪ್ಲೆಕ್ಸ್ ನಲ್ಲಿ ಅನಾಮೇಧಯ ವ್ಯಕ್ತಿಯೊಬ್ಬನ್ನು ಮೃತಪಟ್ಟಿದ್ದನು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಹರ ವೃತ್ತ ನಿರೀಕ್ಷಕರು ಹಾಗೂ ಹರಿಹರ ನಗರ ಠಾಣೆಯ ಠಾಣಾಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನೆಡೆಸಿ,ಮೃತ ವ್ಯಕ್ತಿಯ ಸಾವಿನ ತನಿಖೆ ಚುರುಕುಗೊಳಿಸಿದ್ದು ಕೊಲೆಯೇ? ಅಥವಾ ಮದ್ಯದ ಅಮಲಿನಲ್ಲಿ ಬಿದ್ದು ಸತ್ತಿದ್ದಾನೆ? ಎಂಬ ಪ್ರಾಥಮಿಕ ತನಿಖೆಯನ್ನು ಕೈಗೊಂಡಿದ್ದರು.

ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆ ಹಚ್ಚಲಾಗಿದ್ದು ಗಂಗನರಸಿ ಗ್ರಾಮದ ಗಿರೀಶ್ ಎಂದು ತಿಳಿದುಬಂದಿದೆ.ಪ್ರಥಮ ನೋಟದಲ್ಲಿ ಕೊಲೆ ಮಾಡಿರಬಹುದು ಎಂಬ ಅನುಮಾನ ಕಂಡು ಬಂದಿದ್ದರೂ ಪೊಲೀಸ್ ತನಿಖೆ ಹಾಗೂ ಮೆಡಿಕಲ್ ರಿಪೋರ್ಟ್ ಪ್ರಕಾರ ಮೃತ ವ್ಯಕ್ತಿ ವಿಪರೀತ ಮದ್ಯಪಾನ ಮಾಡಿದ್ದು, ಮದ್ಯದ ಅಮಲಿನಲ್ಲಿ ಕಲ್ಲಿನ ಮೇಲೆ ಬಿದ್ದಿದ್ದಾನೆ. ಬಿದ್ದ ರಭಸಕ್ಕೆ ತಲೆಗೆ ಬಲವಾದ ಪೆಟ್ಟು ಬಿದ್ದು, ಅಧಿಕ ರಕ್ತಸ್ರಾವವಾಗಿದ್ದ ಕಾರಣ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ .
ಪೊಲೀಸರು ಮೃತ ವ್ಯಕ್ತಿಯ ಸಾವು ಮದ್ಯದ ಅಮಲಿನಿಂದಲೇ ?ಅಥವಾ ಕೊಲೆಯೇ? ಎಂಬುದನ್ನು  ಇನ್ನಷ್ಟು ತನಿಖೆ ಕೈಗೊಳ್ಳುವ ಮೂಲಕ ತಿಳಿದುಕೊಳ್ಳಬೇಕಾಗಿದೆ.
ದಾವಣಗೆರೆ ಜಿಲ್ಲಾ ಪೊಲೀಸ್ 
ಅಧೀಕ್ಷಕರವರಾದ ಶ್ರೀ  ಸಿ.ಬಿ.ರಿಷ್ಯಂತ್ ಐಪಿಎಸ್ ರವರಿಂದು ಹರಿಹರ ನಗರದ ಗಾಂಧಿ ಮೈದಾನದ ಬಳಿ ಅನಾಮಧೇಯ ವ್ಯಕ್ತಿಯ ಸಾವಿನ  ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ  ಭೇಟಿ ನೀಡಿ ಪರಿಶೀಲಿಸಿದರು. ಅಧಿಕಾರಿಗಳಿಗೆ ಸೂಕ್ತ ತನಿಖಾ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಡಿವೈಎಸ್ಪಿ ಶ್ರೀ ಬಸವರಾಜ್ ಬಿ.ಎಸ್., ಎ ಎಸ್ ಪಿ ಶ್ರೀ ಮಿಥುನ್, ಐಪಿಎಸ್,ಸಿಪಿಐ ಸತೀಶ್ ಕುಮಾರ್ ಹಾಗೂ ಪಿಎಸೈ ಹರಿಹರ ನಗರ ಉಪಸ್ಥಿತರಿದ್ದರು.

ವರದಿ:ತಿಪ್ಪೇಶ್.ಎಲ್

Post a Comment

0 Comments