ಎಲ್ ಬಿ ಕಾಲೇಜ್ ನಲ್ಲಿ ಹಲ್ಲೆ ಪ್ರಕರಣ!!ನಾಲ್ಕು ಗೋಡೆಗಳ ಮಧ್ಯೆ ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳಿ:ಶಾಸಕ ಕುಮಾರ್ ಬಂಗಾರಪ್ಪ.


ಕಳೆದ 2ದಿನದ ಹಿಂದೆ ಸಾಗರದ ಎಲ್ ಬಿ ಕಾಲೇಜಿನಲ್ಲಿ ನಡೆದ ಗಲಾಟೆಯ ಸಂಬಂಧಿಸಿದಂತೆ  ಪ್ರತಿಕ್ರಿಯೆ ನೀಡಿದ ಶಾಸಕ ಕುಮಾರ್ ಬಂಗಾರಪ್ಪ .

ಸಾಗರದಲ್ಲಿ 2ದಿನಗಳ ಹಿಂದೆ ನೆಡೆದ ಎಲ್ ಬಿ ಕಾಲೇಜಿನಲ್ಲಿ MDF ಸಂಸ್ಥೆಯ ಸರ್ವ ಸದಸ್ಯರ ಸಭೆಯ  ಗಲಾಟೆ ಬಗ್ಗೆ  ಪ್ರತಿಕ್ರಿಯೆ ನೀಡಿದ ಸೊರಬ ಶಾಸಕ ಕುಮಾರ್ ಬಂಗಾರಪ್ಪ ಇದೊಂದು ಅನಿರೀಕ್ಷಿತವಾಗಿ ಘಟನೆ ನಡೆದಿದ್ದು ಅದನ್ನು ಮತ್ತೊಂದು ರೀತಿಯಲ್ಲಿ ಬೆಳೆಸುವುದಕ್ಕೆ ನಾನು ಇಷ್ಟಪಡುವುದಿಲ್ಲ .

ಇದನ್ನು 4 ಗೋಡೆಯ ಮಧ್ಯೆ ಬಗೆಹರಿಸಿಕೊಳ್ಳುವುದಕ್ಕೆ ಅವಕಾಶವಿದೆ.ದೀರ್ಘಕಾಲದಿಂದ ಈ ಸಂಸ್ಥೆ  ಅತ್ಯುತ್ತಮ ಹೆಸರನ್ನು ಗಳಿಸಿದೆ.ಸಾವಿರಾರು ವಿದ್ಯಾರ್ಥಿಗಳು ಕಾಲೇಜಿನೊಂದಿಗೆ ಭಾವನಾತ್ಮಕ ಸಂಬಂಧವನ್ನು ಬೆಳೆಸಿಕೊಂಡಿದ್ದಾರೆ .ತನ್ನದೇ ಆದ ಇತಿಹಾಸವನ್ನು ಹೊಂದಿದೆ .ಲಾಲ್ ಬಹಾದುರ್ ಶಾಸ್ತ್ರಿ ಅವರಿಂದ ಶಂಕುಸ್ಥಾಪನೆ ಯಾದಂಥ ಕಾಲೇಜು ಇದಾಗಿದೆ .ಶಿವಮೊಗ್ಗ, ಸಾಗರ, ಸೊರಬದ ಸಾವಿರಾರು ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಕಂಡುಕೊಂಡಿದ್ದಾರೆ.ಕಾಲೇಜಿನ ಗೌರವವನ್ನು ಕಾಪಾಡಿಕೊಂಡು ಹೋಗುವುದು ಎಲ್ಲರ ಕರ್ತವ್ಯವಾಗಿದೆ .ಆ ನಿಟ್ಟಿನಲ್ಲಿ ಮೊನ್ನೆ ನಡೆದ ಗಲಾಟೆಗೆ ಸಂಬಂಧಿಸಿದಂತೆ 4ಗೋಡೆಗಳ ಮಧ್ಯೆ ಕುಳಿತು ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದು ಉತ್ತಮ. 
 
ಎಲ್ ಬಿ ಕಾಲೇಜಿನ ವಿಚಾರವಾಗಿ ಅನೇಕ ಜನ ಅತ್ಯುತ್ತಮ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದಾರೆ.ಇಂತಹ ಸಂಸ್ಥೆಯಲ್ಲಿ ಈ ರೀತಿ ಘಟನೆ ನಡೆದಿರುವುದು ನಿಜಕ್ಕೂ ದುರಾದೃಷ್ಟಕರ, ಹೀಗಾಗಿ ಆದಷ್ಟು ಬೇಗ ಈ ವಿಚಾರದ ಬಗ್ಗೆ 4 ಗೋಡೆಯ ಒಳಗೆ ಕೂತು ಬಗೆಹರಿಸಿಕೊಳ್ಳಬೇಕಾಗಿ ವಿನಂತಿಸಿಕೊಂಡಿದ್ದೇನೆ ಎಂದು ಶಾಸಕ ಕುಮಾರ್ ಬಂಗಾರಪ್ಪ ಹೇಳಿಕೆ ನೀಡಿದರು.

ಶ್ರೀಪಾದ ಹೆಗ್ಡೆ ಅವರ ಜೊತೆ ನಾನು ಉತ್ತಮ ಬಾಂಧವ್ಯ ಹೊಂದಿದ್ದೇನೆ ಅವರೊಂದಿಗೂ ಈ ವಿಚಾರ ಕುರಿತು ಸಮಾಲೋಚನೆ ನಡೆಸುತ್ತೇನೆ .ಸಮಸ್ಯೆಗೆ ತಾತ್ವಿಕ ಅಂತ್ಯ ಹಾಡಲು ಪ್ರಯತ್ನಿಸುತ್ತೇನೆ .ಇದನ್ನು ಬೆಳೆಸುವುದು ಬೇಡ,ಇಲ್ಲಿಗೇ ಬಿಟ್ಟು ಬಿಡೋಣ ಎಂದರು.ಎಲ್ಲರೂ  ಸೌಹಾರ್ದತಯುತವಾಗಿ ಕುಳಿತು ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ಎಂಬುದೇ ನನ್ನ ಕಳಕಳಿಯಾಗಿದೆ ಎಂದರು.

Post a Comment

0 Comments