ಹರಿಹರ:ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದನ್ವಯ ಹರಿಹರನಗರ ಗ್ರಾಮದೇವತೆ ಜಾತ್ರೆಯಲ್ಲಿ ಪ್ರಾಣಿ ಬಲಿ ಸಂಪೂರ್ಣ ನಿಷೇಧ ಮಾಡಿ ಈಗಾಗಲೇ ಪೊಲೀಸ್ ಇಲಾಖೆ ಆದೇಶ ಹೊರಡಿಸಿತ್ತು.
ಅದರಂತೆ ನಿನ್ನೆ ದಿನ ಹರಿಹರ ಊರಮ್ಮ ದೇವಿಗೆ ಬಲಿಕೊಡುವ ಕೋಣವನ್ನು ಪೊಲೀಸ್ ಇಲಾಖೆ ವಶಕ್ಕೆ ಪಡೆದು ಠಾಣಾ ಮುಂಭಾಗದಲ್ಲಿ ಕಟ್ಟುವ ಮೂಲಕ ಪ್ರಾಣಿ ಬಲಿ ತಡೆಯುವಲ್ಲಿ ದಿಟ್ಟ ಹೆಜ್ಜೆಯನ್ನು ಇಡಲಾಯಿತು .
1959 ಕರ್ನಾಟಕ ಪ್ರಾಣಿಬಲಿಗಳ ಪ್ರತಿಬಂಧಕ ಅಧಿನಿಯಮ ಪ್ರಕಾರ ಕರ್ನಾಟಕದಲ್ಲಿ ದೇವರು- ಧರ್ಮದ ಹೆಸರಿನಲ್ಲಿ,ಹರಕೆಯ ರೂಪದಲ್ಲಿ ಜಾತ್ರಾ ಪರಿಸರಗಳಲ್ಲಿ,ಧಾರ್ಮಿಕ ಸಮಾವೇಶ, ಸಾರ್ವಜನಿಕ ಪ್ರದೇಶ, ದೇವಾಲಯದ ಪ್ರಾಂಗಣ- ಮುಂಭಾಗ ,ಸುತ್ತ- ಮುತ್ತಲಿನ ಪ್ರದೇಶಗಳಲ್ಲಿ, ರಸ್ತೆಗಳಲ್ಲಿ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ, ಮೆರವಣಿಗೆಯ ಹಿಂದೆ -ಮುಂದೆ, ಎಲ್ಲೂ ಯಾರೂ ಕುರಿ, ಕೋಳಿ, ಕೋಣ ಆಡು ಮೊದಲಾದ ಯಾವುದೇ ಪ್ರಾಣಿಗಳ ಬಲಿ ಕೊಡುವುದು, ಬೇಟೆಯಾಡುವುದು, ರಕ್ತತರ್ಪಣ ಮಾಡುವುದು, ಪ್ರಾಣಿಗಳ ಅಂಗಾಂಗಗಳ ಪ್ರದರ್ಶನ ,ಮಾಂಸ ಮತ್ತು ಮಾಂಸಹಾರ ನೈವೇದ್ಯ ಮಾಡುವುದು ನಿಷೇದಿಸಲಾಗಿದ್ದು ಈ ಪ್ರಾಣಿ ಬಲಿಯು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ.
ಈ ಕಾನೂನಿನ ಅನ್ವಯ ಜಿಲ್ಲಾಧಿಕಾರಿಗಳ ಆದೇಶದಂತೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಅವರ ಮಾರ್ಗದರ್ಶನದಲ್ಲಿ ಅಡಿಷನಲ್ ಎಸ್.ಪಿ. ಬಸವರಾಜ್ ಆರ್.ಬಿ.ಸೂಚನೆಯಂತೆ,ಗ್ರಾಮಾಂತರ ಡಿವೈಎಸ್ಪಿ B.S.ಬಸವರಾಜ್ ಮುಂದಾಳತ್ವದಲ್ಲಿ.ಹರಿಹರ ವೃತ್ತ ನಿರೀಕ್ಷಕರಾದ ಸತೀಶ್ ಯು.ಕರ್ತವ್ಯದಲ್ಲಿ,ನಗರ ಠಾಣಾಧಿಕಾರಿ ಸುನೀಲ್ ತೇಲಿ ಹಾಗೂ ವೀರಬಸಪ್ಪ ಕುಸಲಾಪುರ ಮತ್ತು ಪೊಲೀಸ್ ಸಿಬ್ಬಂದಿಯೊಂದಿಗೆ ಊರಮ್ಮ ದೇವಿಗೆ ಬಲಿಕೊಡಲು ಉದ್ದೇಶಿಸಿದ್ದ ಕೋಣವನ್ನು ವಶಕ್ಕೆ ಪಡೆಯಲಾಯಿತು.
ಇದೇ ಸಂದರ್ಭದಲ್ಲಿ ಹಬ್ಬದ ಆಚರಣೆ ಯಲ್ಲಿರುವ ಭಕ್ತರಿಗೆ ಪ್ರಾಣಿ ಬಲಿ ನಿಷೇದಿಸುವಂತೆ ಹಾಗೂ ಕಾನೂನಿನಲ್ಲಿ ಅಡಕವಾಗಿರುವ ಕೆಲವು ನಿಬಂಧನೆಗಳನ್ನು ಬಿಡಿಸಿ ಹೇಳುವ ಪ್ರಯತ್ನವನ್ನು ಮಾಡಲಾಯಿತು .
ಹದಿ3ವರ್ಷದೊಳಗಿನ ಕೋಣ, ಎಮ್ಮೆ ಹಾಗೂ ಕರುಗಳನ್ನು ಕೊಲ್ಲುವುದಾಗಲೀ, ಪ್ರಾಣಿಬಲಿ ನೀಡುವದಾಗಲಿ ಮಾಡಿದ್ದಲ್ಲಿ ಐವತ್ತು ಸಾವಿರ ರಿಂದ ಹತ್ತು ಲಕ್ಷದ ವರೆಗೆ ದಂಡ ಹಾಗೂ ಮೂರರಿಂದ 7ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು .ಇದು 2020 ರ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮವಾಗಿದೆ.ಎಂದು ಹರಿಹರದ ವೃತ್ತ ನಿರೀಕ್ಷಕರಾದ ಸತೀಶ್ .ಯು ಸಾರ್ವಜನಿಕರಲ್ಲಿ ಕಾನೂನಿನ ಅರಿವು ಮೂಡಿಸುವ ಪ್ರಯತ್ನ ಮಾಡಿದರು.
ಇದೇ ಸಂದರ್ಭದಲ್ಲಿ ದಯವಿಟ್ಟು ಭಕ್ತಾದಿಗಳು ಸಾರ್ವಜನಿಕರು ಹರಿಹರ ನಗರದ ಗ್ರಾಮದೇವತೆ ಜಾತ್ರೆ ಪ್ರಯುಕ್ತ ಪ್ರಾಣಿಬಲಿ ಮಾಡಬಾರದೆಂದು ಹಾಗೂ ಕಾನೂನು ಪಾಲನೆಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಸಹಕರಿಸಿ ಎಂದು ವಿನಂತಿಸಿಕೊಂಡರು.
ಪ್ರಕಾಶ್ ಮಂದಾರ
ಸಂಪಾದಕರು.
0 Comments