108 ವಾಹನ ಅಪಘಾತ - ತಪ್ಪಿದ ಬಾರಿ ಅನಾಹುತ!!!


*ತುಮರಿ :-* ಏನೆಂದು ಹೇಳಲಿ...
ಮತ್ತೊಂದು ಸಾವಾಗಿದೆ.....

ದ್ವೀಪದ 108 ನೋವಿನ ಕಥನ ಮುಗಿಯುವುದಿಲ್ಲ ಅನ್ನಿಸುತ್ತದೆ. ಬಹಳ ಕಾಕತಾಳೀಯ ಎನ್ನುವ ಹಾಗೆ ಈ ಘಟನೆಗಳು ನಡೆಯುತ್ತಾ ಇವೆ.
ಆಂಬುಲೆನ್ಸ್  ಇಲ್ಲದೆ ಅವಳಿ ಸಾವಾಯಿತು. ದ್ವೀಪದ ವೆಂಟಿಲೇಟರ್ ಇರುವ 108 ಬೇಕು ಎಂದು ನೆಲದಲ್ಲಿ ಹೋರಾಟ ನಡೆಯಿತು. ನಮ್ಮ ಶಾಶಕರಾದ ಹರತಾಳು ಹಾಲಪ್ಪನವರು ನಮ್ಮ ದ್ವನಿಗೆ ಜತೆ ಆದರು. ವೆಂಟಿಲೇಟರ್ ಇರುವ 108 ವಾಹನ ಬಂತು. ಮೊನ್ನೆ  ಜಿ ಪಂ ಅನುದಾನದಿಂದ ಆರೋಗ್ಯ ಇಲಾಖೆಗೆ ನೀಡಿದ ಆಂಬುಲೆನ್ಸ್ ಗೆ  ಶಾಶಕರು ಹಸಿರು ನಿಶಾನೆ ತೋರಿಸಿ ತುಮರಿ ಆಸ್ಪತ್ರೆಗೆ ಆಂಬುಲೆನ್ಸ್  ಒದಗಿಸಲಾಯಿತು. ನೆಲದ ಅಗತ್ಯ ಪೂರೈಕೆಯ ಖುಷಿ ಇದ್ದೆವು. 
ನಿನ್ನೆ ಸಂಜೆ ತುಮರಿ 108 ತಡ ರಾತ್ರಿ ವಕ್ಕೋಡಿ ಬಳಿ ಅಫಘಾತವಾಗಿದೆ. ಗಾಡಿ ಒಂದು ಭಾಗ ಜಕುಂ ಆಗಿದೆ. 

ಈ ನಡುವೆ ನನ್ನ ಶಿಷ್ಯ ಮಿತ್ರ ಸಂದೀಪ್ ಬೇರಾಳರವರ ತಂದೆ ಬೆಳಗ್ಗೆ 10 ಗಂಟೆಗೆ ಗ್ರಾ ಪಂ ಬಂದವರು ಕುಸಿದು ಬಿದ್ದಿದ್ದಾರೆ. ಹೃದಯಾಘಾತ ಕಾರಣ ಎನ್ನಿಸುತ್ತಿದೆ. ಆದರೆ 108 ಲಭ್ಯ ಆಗಿದ್ದು 12 ಗಂಟೆಗೆ. ನಾವೆಲ್ಲ ಬ್ಯಾಕೊಡು ಆಸ್ಪತ್ರೆಯಲ್ಲಿ ಇದ್ದೆವು. ವೆಂಟಿಲೇಟ್ ರ್ ಇರುವ 108 ಕೊನೆಗೂ ಸಿಗಲಿಲ್ಲ. ನಗರ ಆಂಬುಲೆನ್ಸ್ ತರಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರ ಕಳಿಸಿದ್ದೇವೆ. ಅವರು ಚೇತರಿಸಿಕೊಳ್ಳಲ್ಲಿ ಎಂದು ಹಾರೈಸುವೆ.

ಆದರೆ ನಮಗೆ 108 ತರಿಸಲು 2 ಗಂಟೆ ಬೇಕಾಯಿತು. ಹೆಚ್ಚುವರಿ ತುಮರಿ ಆಂಬುಲೆನ್ಸ್ ಚಾಲಕ ಕೀ ಎತ್ತಿಕೊಂಡು ಸಾಗರ ಹೋದ ಕಾರಣ ಸೇವೆ ಸಿಗಲಿಲ್ಲ. ಬ್ಯಾಕೋಡು ಆಸ್ಪತ್ರೆಯಲ್ಲಿ ಕುದುರೂರು ಗ್ರಾ ಪಂ ಅಧ್ಯಕ್ಷರಾದ ಬೊಬ್ಬಿಗೆ ನಾಗರಾಜ್, ಮಂಜಯ್ಯ ಜೈನ್, ಅನಿಲ್ ಜೈನ್, ಲೋಕಪಾಲ್, ಸಂತೋಷ ಶೆಟ್ಟಿ, ಗಣಪತಿ ಹೆಗಡೆ, ಯುವರಾಜ್, ವಿನಾಯಕ ಸೆಟ್, ಅಕ್ಷಯ್ ಜೈನ್ ಹೀಗೆ ನೂರಾರು ಸ್ನೇಹಿತರು ಸೇರಿದ್ದೆವು. 

ಬ್ಯಾಕೊಡು ಆಸ್ಪತ್ರೆಯ ಸಿಬ್ಬಂದಿ ಡಾ ಅನನ್ಯ ವೈದ್ಯರ ನೇತೃತ್ವದಲ್ಲಿ 108 ಬರುವ ವರೆಗೆ ಹಾರ್ಟ್ ಪಂಪ್ ಮಾಡುವ ನಿರಂತರ ಚಿಕಿತ್ಸೆ ನೀಡಿದರು. 

ಆದರೆ ಅಸಹಾಯಕತೆ ನಮ್ಮ ಕಟ್ಟಿ ಹಾಕಿತ್ತು.

ಬಹಳ ಬೇಸರ ಆಯ್ತು. ಆಗುತ್ತಿದೆ. 

ಈ ನಡುವೆ ನಿನ್ನೆ ಅಫಘಾತವಾದ 108 ವಾಹನ ಚಾಲಕ ಬಗ್ಗೆ ಡ್ರಿಂಕ್ and ಡ್ರೈವ್ ಆರೋಪ ಕೇಳಿ ಬಂದಿದೆ. ಕುಡಿತ ವ್ಯಸನದ ಅಪಾಯ ಬಗ್ಗೆ ಸ್ಥಳೀಯ ಪ್ರಮುಖರು ಬುದ್ದಿ ಹೇಳಿದರೂ ಮುಂದುವರಿಸಿದ ಬಗ್ಗೆ ನಾಗರಿಕರು ಮಾತಾಡಿಕೊಳ್ಳುತ್ತಾ ಇದ್ದಾರೆ. ಈ ಬಗ್ಗೆ ಇಲಾಖೆ ತನಿಖೆ ನಡೆಯಲಿ. ಇವರು ಎಂತ ಬೇಜವಾಬ್ದಾರಿಗಳು ಎಂದರೆ ಅಫಗಾತವಾದ ವಾಹನದ ಬಳಿ ಇಬ್ಬರಲ್ಲಿ ಒಬ್ಬರು ಇರುವುದು ಬಿಟ್ಟು ಇಬ್ಬರೂ ತುಮರಿಯಲ್ಲಿ ಇದ್ದಾರೆ. ಒಂದು ಸಾರ್ವಜನಿಕ ಅಸ್ತಿ ಹೀಗಾಯ್ತು ಎನ್ನುವ ಪಶ್ಚಾತಾಪ ಭಾವ ಕೂಡ ಚಾಲಕ ಮುಖದಲ್ಲಿ ಇಲ್ಲದಿರುವುದು ಬೇಸರ ತಂದಿತು.

108 ಅಫಘಾತ ಸ್ಥಳ ಹೋಗಿ ಬಂದೆವು. ಬಹಳ ಬೇಸರ ಆಯ್ತು. ರೋಗಿಗಳು ಇಲ್ಲದೆ ಇರುವ ಖಾಲಿ ವಾಹನ ಅಫಘಾತವಾಗಿದೆ. ವಾಹನದಲ್ಲಿ ಇದ್ದ ಚಾಲಕ ಮತ್ತು ಸ್ಟಾಫ್ ಗೆ ಯಾವ ಅಪಾಯವೂ ಆಗಿಲ್ಲ ಎನ್ನುವುದು ಸಮಾಧಾನ.

( ಈ ಬರಹ ಬರೆದು ಮುಗಿಸುವ ಹೊತ್ತಿಗೆ ಶಿಷ್ಯ ಸಂದೀಪ್ ಜೈನ್ ತಂದೆ ಡಾಕಪ್ಪ ಜೈನ್  ತೀರಿ ಹೋಗಿದ್ದಾರೆ ಎನ್ನುವ ಮಾಹಿತಿ ಬಂದಿದೆ. ) 

ಕ್ಷಮಿಸಿ ಮುಂದೆ ಬರೆಯಲಾರೆ....
ನಾವು ಡಾಕಪ್ಪ ಗೌಡರನ್ನು ಉಳಿಸಿಕೊಳ್ಳಲಾಗಲಿಲ್ಲ
ನಮ್ಮ 108 ಸರಿ ಇದ್ದಿದ್ದರೆ ಎನ್ನುವ ಸಾಧ್ಯತೆಯ ಪ್ರಶ್ನೆ ಉಳಿದುಹೋಗಿದೆ.

- ಜಿ. ಟಿ ತುಮರಿ
11-04-2022

✒️ *ಓಂಕಾರ ಎಸ್. ವಿ. ತಾಳಗುಪ್ಪ*

Post a Comment

0 Comments