25 ದಿನದಲ್ಲಿ ಕೊಲೆ ಆರೇೂಪಿಗಳನ್ನು ಬಂಧಿಸಿದ ಹರಿಹರದ ಪೊಲೀಸ್.ವೃತ್ತ ನಿರೀಕ್ಷಕ ಸತೀಶ್.ಯು ಚಾಣಾಕ್ಷತೆಯಿಂದ ಕೊಲೆ ಆರೋಪಿಗಳ ಬಂಧನ!!

ಹರಿಹರ:ನಗರದ ಮಹಾತ್ಮಗಾಂಧಿ ಕ್ರೀಡಾಂಗಣದ ಮುಂಭಾಗದಲ್ಲಿರುವ ವಾಣಿಜ್ಯ ಮಳಿಗೆ ಒಂದರ ಅಂಗಡಿಯ ಮುಂದೆ ಕಳೆದ ತಿಂಗಳು 16 ರಂದು ತಡರಾತ್ರಿ ಅಪರಿಚಿತ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು .ಇದು ಮೇಲ್ನೋಟಕ್ಕೆ ಕೊಲೆಯೋ ಅಥವಾ ಮದ್ಯದ ಅಮಲಿನಲ್ಲಿ ಕಲ್ಲಿನ ಮೇಲೆ ಬಿದ್ದು ಸತ್ತಿದ್ದಾನೋ ಎಂಬ ಅನುಮಾನ ಕಾಡುತ್ತಿತ್ತು ಇದಕ್ಕೆ ಸಂಬಂಧಿಸಿದಂತೆ ನಮ್ಮ ಮಂದಾರ ನ್ಯೂಸ್ ವೆಬ್ ಪೋರ್ಟಬಲ್ ಮತ್ತು ನಮ್ಮ ಪ್ರಜಾ ನೆರಳು ಪತ್ರಿಕೆಗಳಲ್ಲಿ ಸುದ್ದಿಯನ್ನು ಪ್ರಕಟಿಸಲಾಯಿತು.
ಇದೀಗ ಹರಿಹರ ವೃತ್ತ ನಿರೀಕ್ಷಕರಾದ ಸತೀಶ್ ಯು ಇವರ ಚಾಣಾಕ್ಷತೆಯಿಂದ ಕೇವಲ ಇಪ್ಪತ್ತೈದು ದಿನದಲ್ಲೇ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹರಿಹರ ತಾಲ್ಲೂಕಿನ ಗಂಗನರಸಿ ಗ್ರಾಮದ 25 ವರ್ಷದ ಗಿರೀಶ್ ಎಂಬ ಯುವಕ ಕೊಲೆಗೀಡಾದ ದುರ್ದೈವಿಯಾಗಿದ್ದು ಗಾಂಧಿ ಮೈದಾನದ ಮುಂಬಾಗದ ವಾಣಿಜ್ಯ ಸಂಕೀರ್ಣದ ಓಪ್ಪೋ ಮಳಿಗೆಯ ಮುಂಭಾಗದಲ್ಲಿ ಗಿರೀಶ್ ಎಂಬ ವ್ಯಕ್ತಿಯ ಶವ ಪತ್ತೆಯಾಗಿತ್ತು.ಅಂದು ಅಪರಿಚಿತ ಶವವೊಂದು ಪತ್ತೆಯಾದ ವಿಷಯ ತಿಳಿಯುತ್ತಿದ್ದಂತೆ ದಾವಣಗೆರೆ ಜಿಲ್ಲಾ ಗ್ರಾಮಾಂತರ ಡಿವೈಎಸ್ ಪಿ ಬಸವರಾಜ್, ಪ್ರೊಬೇಷನರಿ ಐಪಿಎಸ್ ಮಿಥುನ್ ,ವೃತ್ತ ನಿರೀಕ್ಷಕ ಸತೀಶ್ ಕುಮಾರ್. ಯು,ನಗರ ಠಾಣಾ ಪಿಎಸ್ಐ ಸುನೀಲ್ ಬಸವರಾಜ ತೇಲಿ ,ಗ್ರಾಮಾಂತರ ಠಾಣಾ ಪಿಎಸ್ ಐ ವೀರಬಸಪ್ಪ ಕುಸಲಾಪುರ,ಶ್ವಾನದಳ ಬೆರಳಚ್ಚು ತಜ್ಞರು ಪ್ರಯೋಗಾಲಯ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದರು.
ಹರಿಹರದ ವೃತ್ತ ನಿರೀಕ್ಷಕ ಸತೀಶ್ ಕುಮಾರ್ ಯು ಇವರಿಗೆ ಈ ಪ್ರಕರಣ ಭೇದಿಸುವುದು ಒಂದು ಸವಾಲಾಗಿತ್ತು .ಇದು ಮೇಲ್ನೋಟಕ್ಕೆ ಮದ್ಯದ ಅಮಲಿನಿಂದ ಕಲ್ಲಿನ ಮೇಲೆ ಬಿದ್ದು ಸತ್ತಿದ್ದಾರೆ ಎಂಬುದು ಕಂಡು ಬರುತ್ತಿತ್ತು .ಆದರೂ ಎಲ್ಲೋ ಒಂದು ಕಡೆ ಪೊಲೀಸ್ ಇಲಾಖೆಗೆ ಇದು ಕೊಲೆ ಎಂಬ ಅನುಮಾನ ಕಾಡುತ್ತಿತ್ತು.ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಬಿರಿಷ್ಯಂತ್ ಇವರು ಮೃತ ಪಟ್ಟ ವ್ಯಕ್ತಿಯ ಸ್ಥಳಕ್ಕೆ ಬಂದು ಪರಿಶೀಲಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಇವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಡಿವೈಎಸ್ಪಿ ಬಸವರಾಜ್ ಬಿ.ಎಸ್ ಮುಂದಾಳತ್ವದಲ್ಲಿ,ಹರಿಹರದ ವೃತ್ತ ನಿರೀಕ್ಷಕ ಸತೀಶ್ ಕುಮಾರ್. ಯು ಹಾಗೂ ಪಿಎಸ್ ಐ ಸುನಿಲ್ ಕುಮಾರ್ ತೇಲಿ ಅವರ ನೇತೃತ್ವದಲ್ಲಿ ಕೊಲೆ ಮಾಡಿರುವ ವ್ಯಕ್ತಿಗಳನ್ನು ಕೂಡಲೇ ಬಂಧಿಸುವ ನಿಟ್ಟಿನಲ್ಲಿ ಚಾಣಾಕ್ಷತೆಯಿಂದ ಕೂಡಿರುವ ತಂಡವನ್ನ ಕಟ್ಟಲಾಯಿತು.
ಹರಿಹರ ವೃತ್ತ ನಿರೀಕ್ಷಕ ಸತೀಶ್ ಕುಮಾರ್.ಯು ನೇತೃತ್ವದ ಚಾಣಾಕ್ಷತೆಯಿಂದ ಕೂಡಿರುವ ತಂಡ ಕೇವಲ ಇಪ್ಪತ್ತೈದು ದಿನದಲ್ಲೇ ಪ್ರಕರಣವನ್ನು ಭೇದಿಸಿ ಇಬ್ಬರೂ ಆರೋಪಿಗಳನ್ನು ಬಂಧಿಸಿ ಶ್ರೀಕೃಷ್ಣನ ಜನ್ಮಸ್ಥಾನಕ್ಕೆ ಕಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಲೆ ಮಾಡಿರುವ ಆರೋಪಿಗಳು ಪ್ರತಿದಿನ ಕುಡಿದು ಮೋಜು ಮಸ್ತಿ ಮಾಡುವ ವಿಕೃತ ಮನಸ್ಸನ್ನ ಹೊಂದಿದವರಾಗಿದ್ದಾರೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಈ ಕೊಲೆ ಪ್ರಕರಣವನ್ನು ಭೇದಿಸುವ ಮೂಲಕ ಹರಿಹರದ ಪೊಲೀಸ್ ಇಲಾಖೆ ಸಾರ್ವಜನಿಕರ ಪ್ರಶಂಸೆಗೆ ಒಳಗಾಗಿದೆ.ಸದ್ಯ ಹರಿಹರದ ಪೊಲೀಸ್ ಇಲಾಖೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ನಗರ ಹಾಗೂ ಗ್ರಾಮಾಂತರ ಭಾಗದ ಜನರು ನೆಮ್ಮದಿಯ ಬದುಕು ಸಾಗಿಸಲು ಸಹಕಾರಿಯಾಗಿದೆ.

ಗಿರೀಶ್ ಕೊಲೆ ಮಾಡಿರುವ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವ ಚಾಣಾಕ್ಷತೆಯ ತಂಡದಲ್ಲಿ ಸಿಬ್ಬಂದಿಗಳಾದ ಎಎಸ್ಐ ಯಾಸೀನ್ ವುಲ್ಲಾ,ನಾಗರಾಜ್, ಶಾಂತಕುಮಾರ್, ಸೈಯದ್ ಗಪಾರ್, ರಾಜ್ ಶೇಖರ್, ಶಿವರಾಜ್, ನಾಗರಾಜ್, ಸಿದ್ದೇಶ ,ಸಿ.ಸಿ.ಟಿವಿ ಮಂಜು ಇವರು ಸತೀಶ್ ವೃತ್ತ ನಿರೀಕ್ಷಕ ಸತೀಶ್ ಕುಮಾರ್ .ಯು ನೇತೃತ್ವದ ತಂಡದಲ್ಲಿ ಪ್ರಕರಣ ಭೇದಿಸುವಲ್ಲಿ ಪ್ರಮುಖರಾಗಿದ್ದಾರೆ.

ಹರಿಹರ ವೃತ್ತ ನಿರೀಕ್ಷಕ ಸತೀಶ್ ಕುಮಾರ್ ನೇತೃತ್ವದ ತಂಡ ಕೇವಲ ಇಪ್ಪತ್ತೈದು ದಿನದಲ್ಲಿ ಪ್ರಕರಣ ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಕಾರಣ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಿಬಿರಿಷ್ಯಂತ್ ಹೆಚ್ಚುವರಿ ಪೊಲೀಸ್ ಅಧೀಕ್ಷ ಕರ ಆರ್.ಬಿ ಬಸರಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಪ್ರಕಾಶ್ ಮಂದಾರ 
ಸಂಪಾದಕರು.

Post a Comment

0 Comments