ಅಕ್ರಮ ಮರಳು ಗಣಿಗಾರಿಕೆ ತಡೆಯುವಲ್ಲಿ ರಾಣೆಬೆನ್ನೂರು ಪೊಲೀಸ್ ಇಲಾಖೆ ಸತತ ಪ್ರಯತ್ನ!? ಭೂ-ಗಣಿ &ಕಂದಾಯ ಇಲಾಖೆ ಸಂಪೂರ್ಣ ವಿಫಲ.


ರಾಣಿಬೆನ್ನೂರು :-ರಾಣೆಬೆನ್ನೂರು ತಾಲ್ಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ತಡೆಯುವಲ್ಲಿ ರಾಣೆಬೆನ್ನೂರು ಪೊಲೀಸ್ ಇಲಾಖೆ ಸತತ ಪ್ರಯತ್ನ ಪಡುತ್ತಿದೆ.ಆದರೆ ಇದರ ನಿಯಂತ್ರಣದ ಸಂಪೂರ್ಣ ಜವಾಬ್ದಾರಿ ಹೊತ್ತ  ಭೂ ಮತ್ತು ಗಣಿ ಹಾಗೂ ಕಂದಾಯ ಇಲಾಖೆ ಸಂಪೂರ್ಣ ವಿಫಲವಾಗಿದ್ದು ಅಕ್ರಮ ಮರಳು ದಂಧೆಕೋರರಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ.

ಪೊಲೀಸ್ ಇಲಾಖೆ ತನ್ನ ಕರ್ತವ್ಯವನ್ನು ನಿಭಾಯಿಸುವಲ್ಲಿ ಯಶಸ್ವಿಯಾಗುತ್ತಿದ್ದರು ಎಲ್ಲೋ ಒಂದು ಕಡೆ ಸಾರ್ವಜನಿಕರಿಂದ ಟೀಕೆ- ಟಿಪ್ಪಣಿಗಳನ್ನು ಎದುರಿಸಬೇಕಾಗಿದೆ.

ಅಕ್ರಮಗಳು ಎಲ್ಲೇ ಕಂಡು ಬಂದರು,ಮೊದಲು ಕಣ್ಣಿಗೆ ಬೀಳುವುದು, ನೆನಪಾಗೋದು ಪೊಲೀಸ್ ಇಲಾಖೆ.
ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲ ಎಂಬ ನಾಮಾಂಕಿತದಿಂದ ಪೊಲೀಸ್ ಇಲಾಖೆ ವಿರುದ್ಧ ಸಾರ್ವಜನಿಕರಿಂದ ಟೀಕೆ ಟಿಪ್ಪಣಿಗಳು ಪ್ರಾರಂಭವಾಗುತ್ತದೆ .ಸಾರ್ವಜನಿಕರ ಟೀಕೆ ಟಿಪ್ಪಣಿಗಳಿಗೆ ಪ್ರತ್ಯುತ್ತರ ಕೊಡುವ ನಿಟ್ಟಿನಲ್ಲಿ ಸಾಗಬೇಕಾದರೆ ಇಲಾಖೆಯಲ್ಲಿ  ಸಿಬ್ಬಂದಿಗಳ ಕೊರತೆ ಎದ್ದು ಕಾಣುತ್ತದೆ.

ಇರುವಂಥ ಸಿಬ್ಬಂದಿಗಳ ಸಹಾಯದಿಂದಲೇ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಬೇಕು.ಗಣ್ಯಾತಿ ಗಣ್ಯರಿಗೆ ಭದ್ರತೆ ಒದಗಿಸಬೇಕು.ಕೋಮು ದಳ್ಳುರಿಯಂತಹ ಘಟನೆಗಳು ಸಂಭವಿಸಿದಾಗ ಸೂಕ್ತ ಬಂದೋಬಸ್ತ್ ಕೈಗೊಳ್ಳಬೇಕು.ಇನ್ನೂ ಇಲಾಖೆಯ ಮೀಟಿಂಗ್ ನಲ್ಲಿ ಭಾಗವಹಿಸಬೇಕು,ಸಾರ್ವಜನಿಕರ ಕುಂದುಕೊರತೆಗಳತ್ತ ಗಮನ ಹರಿಸಬೇಕು.ಇಷ್ಟೆಲ್ಲಾ ಒತ್ತಡದ ನಡುವೆ ಪೊಲೀಸ್ ಇಲಾಖೆ ದಿನದ 24ಗಂಟೆ ತಮ್ಮ ಹಾಗೂ ತಮ್ಮ ಕುಟುಂಬವನ್ನು ಮರೆತು ಕರ್ತವ್ಯ ನಿರ್ವಹಿಸಬೇಕು.

ಅಪಾಯದ ಸಂದರ್ಭದಲ್ಲಿ ಜೀವದ ಹಂಗನ್ನು ತೊರೆದು ಮುನ್ನುಗ್ಗಬೇಕು.ಶಿಸ್ತಿಗೆ ಹೆಸರಾದ ಇಲಾಖೆಯಲ್ಲಿ ತಮ್ಮ ಸ್ವ ಆಶೆ- ಆಕಾಂಕ್ಷೆಗಳನ್ನು ತ್ಯಾಗ ಮಾಡಬೇಕು .ಇಷ್ಟೆಲ್ಲ ಮಾಡಿದರೂ ಪೋಲಿಸ್ ಇಲಾಖೆ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂಬ ಟೀಕೆ- ಟಿಪ್ಪಣಿಗಳನ್ನು ಆಗಿಂದಾಗೆ ಎದುರಿಸುತ್ತಾ ಇರಬೇಕು .

ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂದರೆ ಅದರ ಸಂಪೂರ್ಣ ಜವಾಬ್ದಾರಿ ಭೂ ಮತ್ತು ಗಣಿ ಇಲಾಖೆ .ಇದರ ಜತೆಗೆ ಕಂದಾಯ ಇಲಾಖೆ ಹೊರಬೇಕಾಗುತ್ತದೆ .ಆದರೆ ಭೂ ಮತ್ತು ಗಣಿ ಹಾಗೂ ಕಂದಾಯ ಇಲಾಖೆ ಅಕ್ರಮ ಮರಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿ ಬಾರಿಯೂ ನಿರ್ಲಕ್ಷ್ಯ ವಹಿಸುತ್ತ ಬಂದಿದೆ .ಅದರಲ್ಲೂ ಮುಖ್ಯಮಂತ್ರಿಯವರ ತವರು ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನಾದ್ಯಂತ ನಡೆಯುವಂಥ ಅಕ್ರಮ ಮರಳು ಗಣಿಗಾರಿಕೆ ತಡೆಯುವಲ್ಲಿ ಭೂ ಮತ್ತು ಗಣಿ ಇಲಾಖೆ ಕಂದಾಯ ಇಲಾಖೆ ಪರೋಕ್ಷವಾಗಿ ಅಕ್ರಮ ದಂಧೆಕೋರರೊಂದಿಗೆ ಕೈಜೋಡಿಸಿದ ಪರಿಣಾಮ ತಡೆಯುವ ಗೋಜಿಗೆ ಹೋಗುತ್ತಿಲ್ಲ .
ಹಾವೇರಿ ಜಿಲ್ಲಾ ಎಸ್.ಪಿ ಹನುಮಂತರಾಯ ಅವರ ಮಾರ್ಗದರ್ಶನದಲ್ಲಿ ರಾಣೇಬೆನ್ನೂರು ಡಿವೈಎಸ್ಪಿ ಡಿ.ಸುರೇಶ್ ಅವರ ಮುಂದಾಳತ್ವದಲ್ಲಿ ತಾಲ್ಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ತಡೆಯುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟು ಸತತ ಪ್ರಯತ್ನ ಪಡುತ್ತಲೇ ಇದೆ .ಆದರೆ ಅಕ್ರಮ ಮರಳು ಗಣಿಗಾರಿಕೆ ಮಾತ್ರ ನಿಲ್ಲುತ್ತಿಲ್ಲ .

ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬರುವಂಥ ತುಂಗಾಭದ್ರ ನದಿಯ ದಡದ ಮೇಲೆ ಇರುವ ಗ್ರಾಮಗಳಲ್ಲಿ ನಡೆಯುವ ಅಕ್ರಮ ಮರಳು ಗಣಿಗಾರಿಕೆಯ ಸಂಪೂರ್ಣ ಪಕ್ಷಿನೋಟ ಅವರ ಬಳಿ ಇರುತ್ತದೆ .ಆದರೆ ಅವರು ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಯಲು ಮುಂದಾಗುತ್ತಿಲ್ಲ ಏಕೆ ?ಇನ್ನೂ ಭೂ ಮತ್ತು ಗಣಿ ಇಲಾಖೆಯ ಕೆಲಸ ಅಕ್ರಮ ಮರಳು ಗಣಿಗಾರಿಕೆಯ ಮೇಲೆ ಕಣ್ಣಿಡುವುದು.ಆದರೆ ಆ ಕೆಲಸವನ್ನ ಭೂ ಮತ್ತು ಗಣಿ ಇಲಾಖೆ ಸಮರ್ಪಕವಾಗಿ ಮಾಡುತ್ತಿಲ್ಲ ಇದರ ಪರಿಣಾಮ ರಾಣೇಬೆನ್ನೂರು ತಾಲ್ಲೂಕಿನ ತುಂಗಭದ್ರಾ ನದಿ ದಡದಲ್ಲಿ ನಿರಂತರವಾಗಿ ಅಕ್ರಮ ಮರಳು ಗಣಿಗಾರಿಕೆ ಯಾರ ಭಯವಿಲ್ಲದೆ ರಾಜಾರೋಷವಾಗಿ ಹಗಲು ಹೊತ್ತಿನಲ್ಲೇ ನಡೆಯುತ್ತಿದೆ .ಒಂದು ವೇಳೆ ಅಕ್ರಮ ಮರಳು ಗಣಿಗಾರಿಕೆ ಮೇಲೆ ಪೋಲಿಸ್ ಇಲಾಖೆ ದಾಳಿ ನಡೆಸಿದರೂ ಆ ಮರಳನ್ನು ಸೀಜ್ ಮಾಡುವ ಹಕ್ಕು ಭೂ ಮತ್ತು ಗಣಿ ಇಲಾಖೆ ದ್ದಾಗಿರುತ್ತದೆ .ಅವರ ಅನುಮತಿ ಇಲ್ಲದೆ ಅಕ್ರಮ ಮರಳು ಗಣಿಗಾರಿಕೆ ಸೀಜ್ ಮಾಡಲು ಸಾಧ್ಯವಾಗುವುದಿಲ್ಲ .ಆದರೆ ಭೂ ಮತ್ತು ಗಣಿ ಇಲಾಖೆಯವರು ಪೊಲೀಸ್ ಇಲಾಖೆಯ ಜೊತೆ ಮರಳು ಗಣಿಗಾರಿಕೆ ನಿಯಂತ್ರಿಸುವ ವಿಚಾರದಲ್ಲಿ  ಕೈಜೋಡಿಸದ ಪರಿಣಾಮ ರಾಣೆಬೆನ್ನೂರು ತಾಲ್ಲೂಕಿನಾದ್ಯಂತ ಅಕ್ರಮ ಮರಳು ಗಣಿಗಾರಿಕೆ ತಡೆಯಲು ಸಾಧ್ಯವಾಗುತ್ತಿಲ್ಲ .

ರಾಣೆಬೆನ್ನೂರು ತಾಲ್ಲೂಕಿನಾದ್ಯಂತ ಅಕ್ರಮ ಮರಳು ಗಣಿಗಾರಿಕೆ ಜೊತೆ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಅದು ಸತ್ಯವಾದ ಮಾತು .

ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ರವಾನೆಯಾಗುತ್ತಿದೆ ಇದನ್ನ ತಡೆಯುವುದು ಆಹಾರ ಇಲಾಖೆಯ ಕರ್ತವ್ಯ ಅಲ್ಲವೇ?ಇನ್ನು ಅಕ್ರಮ ಮದ್ಯ ಮಾರಾಟವಾಗುತ್ತಿದೆ ಇದರ ನಿಯಂತ್ರಣದ ಜವಾಬ್ದಾರಿ ಅಬಕಾರಿ ಇಲಾಖೆ  ಅಲ್ಲವೇ?ಅಕ್ರಮ ಮಟ್ಕಾ ದಂಧೆ ನಡೆಯುತ್ತಿದೆ ಇದನ್ನು ತಡೆಯಬೇಕಾಗಿದ್ದು ಪೊಲೀಸ್ ಮತ್ತು ಅಬಕಾರಿ ಇಲಾಖೆ ಅಲ್ಲವೇ ?ಅಕ್ರಮವಾಗಿ ಮಣ್ಣು ಸಾಗಾಣಿಕೆಯಾಗುತ್ತಿದೆ ಇದನ್ನ ತಡೆಯಬೇಕಾದ್ದು ಕಂದಾಯ ಇಲಾಖೆ ಅಲ್ಲವೇ ?ಪ್ರತಿಯೊಂದು ಇಲಾಖೆಯ ಅಕ್ರಮಗಳನ್ನ ತಡೆಯಬೇಕಾಗಿದ್ದು ಮೊದಲು ಆ ಇಲಾಖೆಯ ಅಧಿಕಾರಿಗಳು.ಆದರೆ ಇವರ್ಯಾರೂ ತಮ್ಮ ಕರ್ತವ್ಯವನ್ನು ಸರಿಯಾಗಿ ಪಾಲನೆ ಮಾಡದ ಕಾರಣ ರಾಣೆಬೆನ್ನೂರು ತಾಲ್ಲೂಕಿನಾದ್ಯಂತ ಅಕ್ರಮ ಚಟುವಟಿಕೆಗಳು ನಿಯಂತ್ರಣಕ್ಕೆ ಸಿಗದೆ ಮಿತಿ ಮೀರಿ ಹೋಗುತ್ತಿದೆ .ಆದರೆ ಪೊಲೀಸ್ ಇಲಾಖೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ಸರಿ ?
ಪೋಲಿಸ್ ಇಲಾಖೆಯ ಮೊದಲ ಕರ್ತವ್ಯ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು .ಶಾಂತಿ ಭಂಗವಾಗದಂತೆ ನಗರ ಜನರಿಗೆ ನೆಮ್ಮದಿಯ ಬದುಕನ್ನು ಸಾಗಿಸಲು ಜನಸಾಮಾನ್ಯರಿಗೆ ಉತ್ತಮ ವಾತಾವರಣ ನಿರ್ಮಾಣ ಮಾಡಿಕೊಡುವುದು ಪೊಲೀಸ್ ಇಲಾಖೆ.ಆದರೂ ಯಾರೇ ಪೊಲೀಸ್ ಇಲಾಖೆಗೆ ಬೇರೆ ಯಾವುದೇ  ಇಲಾಖೆಯ ಅಕ್ರಮಕ್ಕೆ ಸಂಬಂಧಿಸಿದಂತೆ ಫೋನ್ ಕರೆ ಮಾಡಿದಾಗ ತಾವು ಕರ್ತವ್ಯದಿಂದ ನುಣುಚಿಕೊಳ್ಳದೆ ಫೋನ್ ಮಾಡಿದ್ದ ವ್ಯಕ್ತಿಗೆ ಅಥವಾ ದೂರು ನೀಡಿದ ವ್ಯಕ್ತಿಗೆ ಸಮಾಧಾನಚಿತ್ತದಿಂದ ಉತ್ತರ ನೀಡಿ ಅಕ್ರಮವನ್ನು ತಡೆಯುವ ನಿಟ್ಟಿನಲ್ಲಿ ಸದಾ ಕಾರ್ಯಪ್ರವೃತ್ತರಾಗಿರುತ್ತಾರೆ .ಆದರೂ ಪೊಲೀಸ್ ಇಲಾಖೆ ಸಾರ್ವಜನಿಕರಿಂದ ಟೀಕೆ -ಟಿಪ್ಪಣಿ ಎದುರಿಸಬೇಕು .

ರಾಣೆಬೆನ್ನೂರು ತಾಲ್ಲೂಕಿನಾದ್ಯಂತ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ ಅದರಲ್ಲೂ ಸರ್ಕಾರದಿಂದ ಅನುಮತಿ ಪಡೆದಂತಹ ಮರಳು ಪಾಯಿಂಟ್ ನಲ್ಲೇ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವುದು.ಬೇಕಾದರೆ ಒಮ್ಮೆ ಗಮನಿಸಿ ಸರ್ಕಾರದ ಅನುಮತಿಯ ಮೇಲೆ ನಡೆಯುತ್ತಿರುವ ಮರಳು ಪಾಯಿಂಟಿನಲ್ಲಿ ಕೋಟ್ಯಂತರ₹ಅಕ್ರಮ ಮರಳು ದಾಸ್ತಾನು ಆಗಿದೆ .ಸರ್ಕಾರದ ಮರಳು ನೀತಿಯನ್ನು ಉಲ್ಲಂಘಿಸಿ ತಡರಾತ್ರಿಯವರೆಗೂ ತುಂಗಭದ್ರಾ ನದಿಯನ್ನು ಯಂತ್ರಗಳ ಸಹಾಯದಿಂದ ಬಯ್ಯುತ್ತಿದ್ದಾರೆ.ಇಷ್ಟೇ ಅಲ್ಲದೆ ತಮ್ಮ ಮರಳು ಪಾಯಿಂಟಿನಲ್ಲಿ ದಾಸ್ತಾನು ಮಾಡಿದ ಮರಳನ್ನ ತಡರಾತ್ರಿ ಅಕ್ರಮವಾಗಿ ಟಿಪ್ಪರ್ ಮತ್ತು ಟೆನ್ ವೀಲ್  ಲಾರಿಗಳ ಮೂಲಕ ಸಾಗಾಣಿಕೆ ಮಾಡುತ್ತಿದ್ದಾರೆ .ಉದಾಹರಣೆಯಾಗಿ ಐರಣಿ ಮರಳು ಪಾಯಿಂಟ್,ಬೇಲೂರು ಗ್ರಾಮದಲ್ಲಿರುವ ಮರಳು ಪಾಯಿಂಟ್. ಹೀಗೆ ತಾಲ್ಲೂಕಿನಾದ್ಯಂತ ಇರುವ ಸರ್ಕಾರದ ಅನುಮತಿ ಮೇಲೆ ನಡೆಯುತ್ತಿರುವ ಮರಳು ಪಾಯಿಂಟಿನ ಮೇಲೆ ಒಮ್ಮೆ ಕಣ್ಣಾಡಿಸಿ .
ನಿಮಗೆ ನೆನಪಿರಬೇಕು ಜನವರಿ ಹತ್ತು ರಾಣೇಬೆನ್ನೂರು ಟೋಲ್ ಗೇಟ್ ಬಳಿ ಕೆ.ಆರ್.ಎಸ್ ಪಕ್ಷ ಮತ್ತು ಪತ್ರಕರ್ತೆಯ ಮೇಲೆ ಹಲ್ಲೆಯಾಗಿತ್ತು .ಹಲ್ಲೆಯಾದ ಸಮಯ ತಡರಾತ್ರಿ ಹನ್ನೊಂದು ಮೂವತ್ತು .ಮರಳು ಸಾಗಾಣಿಕೆ ಯಾಗಿದ್ದು ಐರಣಿ ಮರಳು ಪಾಯಿಂಟ್ ನಿಂದ .ಅಷ್ಟೊತ್ತಿಗೆ ಐರಣಿ ಮರಳು ಪಾಯಿಂಟಿನಿಂದ ಮರಳು ಸಾಗಾಣಿಕೆಯಾಗಿದು ಏಕೆ ?ಇನ್ನು ಈ ಮರಳು ಪಾಯಿಂಟ್ ಬ್ಲಾಕ್ ಲಿಸ್ಟ್ ಗೆ ಸೇರಿತ್ತು.ಆದರೂ ಗಣಿ ಇಲಾಖೆಯವರು ಬೆಂಬಲದಿಂದ ಬ್ಲಾಕ್ ಲಿಸ್ಟ್ ಗೆ ಸೇರಿದ ಮರಳು ದಿನೇದಿನೇ ಖಾಲಿಯಾಗುತ್ತಿತ್ತು ತಡರಾತ್ರಿ ಅಕ್ರಮವಾಗಿ ಸಾಗಾಣಿಕೆ ಮೂಲಕ.

ಈಗಲೂ ಕೆಲವು ಮರಳು ಪಾಯಿಂಟ್ ಗಳಲ್ಲಿ ತಡರಾತ್ರಿ ಅಕ್ರಮವಾಗಿ ಮರಳು ಸಾಗಾಣಿಕೆಯಾಗುತ್ತಿದೆ .ಇದನ್ನ ಮೊದಲು ತಡೆಯಬೇಕಾದ್ದು ಭೂ ಮತ್ತು ಗಣಿ ಹಾಗೂ ಕಂದಾಯ ಇಲಾಖೆ ಅಲ್ಲವೇ ?ಏಕೆ ತಡೆಯುತ್ತಿಲ್ಲ ?ಅದು ನಮಗಂತೂ ಪ್ರಶ್ನೆ ಮಾಡಬೇಡಿ .

ಒಮ್ಮೆ ತಾಲ್ಲೂಕಿನ ನಾಗರಿಕರೇ ಯೋಚನೆ ಮಾಡಿ ಹೇಳಿ ಕೇಳಿ ಮುಖ್ಯಮಂತ್ರಿಯವರ ತವರು ಜಿಲ್ಲೆಯ ತಾಲ್ಲೂಕು.ಆಗ್ಗಿಂದಾಗೆ ಮುಖ್ಯಮಂತ್ರಿಗಳು ತವರು ಜಿಲ್ಲೆಗೆ ಬರುತ್ತಿರುತ್ತಾರೆ .ಅವರಿಗೆ ಸೂಕ್ತ ಬಂದೋಬಸ್ತ್ ಕಲ್ಪಿಸುವ ಜವಾಬ್ದಾರಿ ಪೊಲೀಸ್ ಇಲಾಖೆಯದ್ದು ಅಲ್ಲವೇ ?ಇನ್ನೂ ಉಕ್ರೇನ್ ನಲ್ಲಿ ಮೃತಪಟ್ಟ ನವೀನ್  ಇವರ ಕುಟುಂಬಕ್ಕೆ ಸಾಂತ್ವನ ಹೇಳಲು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಾಯಕರು ಪ್ರತಿದಿನ  ಚಳಿಗೇರಿ ಗ್ರಾಮಕ್ಕೆ ಬರುತ್ತಿದ್ದರು.ಸರಿಸುಮಾರು ತಿಂಗಳುಗಟ್ಟಲೆ ಗ್ರಾಮದಲ್ಲಿ ಪೊಲೀಸ್ ಇಲಾಖೆ ಬೀಡುಬಿಟ್ಟಿತ್ತು.ಇದರ ಜೊತೆಗೆ ಹಬ್ಬ- ಹರಿದಿನಗಳು ಜಾತ್ರೆಗಳು ಮಠಾಧೀಶರ ಧರ್ಮ ಸಭೆಗಳು ನಡೆಯುತ್ತಿದ್ದವು.ಈ ಸಂದರ್ಭದಲ್ಲಿ ಸಹ ಪೊಲೀಸ್ ಇಲಾಖೆ ತನ್ನ ಕರ್ತವ್ಯವನ್ನು ನಿಭಾಯಿಸಬೇಕಾಗಿತ್ತು .ಇಷ್ಟೆಲ್ಲಾ ಒತ್ತಡದ ನಡುವೆ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲೂ ಸತತ ಪ್ರಯತ್ನ ಪಡುತ್ತಿದ್ದರು  ಎಂಬುದನ್ನು ನಾವು ಅರಿತುಕೊಳ್ಳಬೇಕು ಅಲ್ಲವೇ ?ಪೋಲಿಸ್ ಇಲಾಖೆ ದೂರುವ ಬದಲು ಸಂಬಂಧಪಟ್ಟ ಇಲಾಖೆಗಳಿಗೆ ದೂರಿದ್ದರೆ ಇಷ್ಟೊತ್ತಿಗೆ ಅದೆಷ್ಟೋ ಅಕ್ರಮ ಚಟುವಟಿಕೆಗಳು ನಿಯಂತ್ರಣಕ್ಕೆ ಬರುತ್ತಿದ್ದೆವು .
ಈಗಲೂ ಕಾಲ ಮಿಂಚಿಲ್ಲ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಯವರು ಪ್ರಾಮಾಣಿಕವಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸಲಿ "ಅಪರಾಧಮುಕ್ತ ರಾಣೇಬೆನ್ನೂರು" ನಗರವನ್ನಾಗಿ ಮಾಡಲಿ.

ಪ್ರಕಾಶ್ ಮಂದಾರ 
ಸಂಪಾದಕರು 
8880499904

Post a Comment

0 Comments