ಸಾಗರದ ಗಣಪತಿ ಜಾತ್ರೆಗೆ ದೇವರ ದರ್ಶನಕ್ಕೆ ಬಂದಿದ್ದ 70 ವರ್ಷದ ವೃದ್ಧ ಮಹಿಳೆಯ ಚಿನ್ನದ ಸರ ಕಳ್ಳತನವಾಗಿದೆ ಎಂದು ಸೈದೂರಿನ ಚಂದ್ರಮ್ಮ ಪೇಟೆ ಪೋಲೀಸ್ ಠಾಣೆಗೆ ಮಂಗಳವಾರ ದೂರು ನೀಡಿದ್ದಾರೆ.
ಗಣಪತಿ ಜಾತ್ರೆಯ ತೇರಿನ ಬಳಿ ಪ್ರಸಾದ ಸ್ವೀಕರಿಸುತ್ತಿದ್ದಾಗ ಯಾರೋ ನನ್ನ ಕುತ್ತಿಗೆಯಲ್ಲಿದ್ದ ಸರ ಅಪಹರಿಸಿದ್ದಾರೆ ಎಂದು ತಿಳಿಸಿದ್ದಾರೆ.
20 ಗ್ರಾಂ ತೂಕದ 1 ಲಕ್ಷ ಮೌಲ್ಯದ ಚಿನ್ನದ ಸರ ಇದಾಗಿದ್ದು,ಪೋಲೀಸರು ಪತ್ತೆ ಹಚ್ಚಿಕೊಡುವಂತೆ ಚಂದ್ರಮ್ಮ ಮನವಿ ಮಾಡಿದ್ದಾರೆ.
ಸರ ಕಳೆದುಕೊಂಡ ವೃದ್ಧ ಮಹಿಳೆ ಚಂದ್ರಮ್ಮ ಸೈದೂರಿನಿಂದ ಒಬ್ಬರೇ ಸಾಗರದ ಗಣಪತಿ ಜಾತ್ರೆಗೆ ಆಗಮಿದಿದ್ದರು.
ಪೋಲೀಸರು ಸಿಸಿ ಕ್ಯಾಮೆರಾ ಪರಿಶೀಲಿಸುತ್ತಿದ್ದು ಶೀಘ್ರದಲ್ಲಿ ಸರ ಪತ್ತೆ ಹಚ್ಚುವ ಭರವಸೆ ನೀಡಿದ್ದಾರೆ.
ಸದ್ಯ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

0 Comments