ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲರ ಆಮ್ ಆದ್ಮಿ ಪಕ್ಷ ಕರ್ನಾಟಕದಲ್ಲಿ ರೈತ ಸಂಘದ ಪ್ಲಾಟ್ ಪಾರಂ ಮೇಲೆ ಮೊನ್ನೆ ಸರಿಯಾಗಿ ಪ್ರತಿಷ್ಟಾಪನೆ ಆಗಿದೆ.
ಹಾಲಿ ಕರ್ನಾಟಕದ ರಾಜಕೀಯ ಮಾಡುತ್ತಿರುವ ಪಕ್ಷಗಳು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿದರು AAP ಗೆ ರಾಜ್ಯದಾದ್ಯಂತ 42 ವರ್ಷದ ಬಲಿಷ್ಟ ಸಂಘಟನೆಯ ಅಡಿಪಾಯ ಸುಲಭವಾಗಿ ದೊರೆತಿದೆ.
ರಾಜ್ಯದ ರೈತ ಸಂಘಟನೆಗೂ ದೆಹಲಿ ಮತ್ತು ಪಂಜಾಬ್ ನ ವಿದಾನಸಬೆಯಲ್ಲಿ ಕಮಾಲ್ ಮಾಡಿರುವ AAP ಕರ್ನಾಟಕದ ರಾಜಕಾರಣದಲ್ಲಿ ಚಿಮ್ಮು ಹಲಗೆಯಾಗಿ ಬಂದಿದೆ ಇದನ್ನು ಸರಿಯಾಗಿ ಬಳಸಿಕೊಳ್ಳುವ ದೂರದೃಷ್ಟಿ ರೈತ ಸಂಘ ಹೊಂದಿದರೆ ರಾಜ್ಯ ರಾಜಕಾರಣದಲ್ಲಿ ಕೆಲವು ಬದಲಾವಣೆಗೆ ಸಾಧ್ಯವಿದೆ.
ಕಾಂಗ್ರೇಸ್ ಅಥವ ಬಿಜೆಪಿ ಟಿಕೇಟ್ ವಂಚಿತರಿಗೆ JDS ಖೆಡ್ಡಾ ಹಾಕಿ ಕಾಯುತ್ತಿದ್ದ ಕಾಲ ಕರ್ನಾಟಕದಲ್ಲಿ ಮುಂದಿನ ಚುನಾವಣೆಯಲ್ಲಿ ಇಲ್ಲವಾಗಿಸಿದೆ AAP, ಜಾಗೃತ ಮತದಾರರಲ್ಲಿ ಈ ಪಾರ್ಟಿ ಬಗ್ಗೆ ಕುತೂಹಲ ಇದೆ ಅದು ಮತವಾಗಿ ಪರಿವರ್ತನೆ ಬಗ್ಗೆ ಕಾಲ ನಿರ್ದರಿಸಬೇಕು.
ಇದರ ಸ್ಪರ್ಧೆಯಿಂದ ಬಿಜೆಪಿ ಮತ್ತು ಕಾಂಗ್ರೇಸ್ ಗೆ ಕೆಲವು ಪರ್ಸೆಂಟ್ ಮತ ವಿಭಜನೆಯೂ ಪಲಿತಾಂಶದ ಮೇಲೆ ಪರಿಣಾಮ ಬೀರಬಹುದು.
ಕರ್ನಾಟಕ ರಾಜಕಾರಣದಲ್ಲಿ ಕಾಂಗ್ರೇಸ್, ಬಿಜೆಪಿ ಮತ್ತು JDS ಮೂರು ಪಕ್ಷಕ್ಕೂ AAP ಬಂದಿರುವುದು ಅವರವರ ಪಕ್ಷದಲ್ಲಿ ಹೊಸ ತಂತ್ರ ಹೆಣೆಯಲು ಕೆಲಸ ಕೊಟ್ಟಿದೆ.
ಕರ್ನಾಟಕ ರಾಜಕಾರಣದಲ್ಲಿ ರೈತ ಸಂಘಟನೆಯ ಎರೆಡೂ ಬಣಗಳು ಒಂದಾಗುವ ಸಾಧ್ಯತೆ ಇಲ್ಲ ಕೋಡಿಹಳ್ಳಿ ಚಂದ್ರಶೇಖರರ ಬಲಿಷ್ಟ ಬಣ AAP ಮುಖವಾಣಿ ಆದರೆ ಇವರ ಗುರು ಪ್ರೋಪೆಸರ್ ನಂಜುಂಡ ಸ್ವಾಮಿ ಮಗ ಪಚ್ಚೆ ನಂಜುಂಡಸ್ವಾಮಿ JDS ಜೊತೆ 15 MLA ಕ್ಷೇತ್ರ ಹಂಚಿಕೊಂಡಿದ್ದಾರೆ.
ಮುಂದಿನ ದಿನದಲ್ಲಿ ರೈತಸಂಘ ತನ್ನ ಎಲ್ಲಾ ಶಕ್ತಿ ಬಳಸಿ AAP ರಾಜ್ಯದಲ್ಲಿ ಬೆಳೆಸುವ ಹುಮ್ಮಸ್ಸಿನಲ್ಲಿದೆ ಇದಕ್ಕೆ ಕರ್ನಾಟಕದ ಪ್ರಸಕ್ತ ಸನ್ನಿವೇಶ ಅನುಕೂಲವೂ ಆಗಿದೆ. '
0 Comments