ಸಾಗರ ವಿಧಾನಸಭಾ ಕ್ಷೇತ್ರದಿಂದ ಕಾಗೋಡು ಸ್ಪರ್ಧೆ.ಸುಳಿವು ಕೊಟ್ಟಿದ್ದು"ಮಂದಾರ ನ್ಯೂಸ್"


ಸಾಗರ:ಸಾಗರ ವಿಧಾನಸಭಾ ಕ್ಷೇತ್ರದಿಂದ ಹಿರಿಯ ರಾಜಕಾರಣಿ ಕಾಂಗ್ರೆಸ್ ಮಾಜಿ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪನವರು ಮತ್ತೊಮ್ಮೆ ಸಾಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಸುದ್ದಿಯನ್ನು ಬಿತ್ತರಿಸಿದ್ದು ನಮ್ಮ ಮಂದಾರ ನ್ಯೂಸ್.

ಕಳೆದ 1ವಾರದ ಹಿಂದೆ ಕೆಲವರೊಂದಿಗೆ ಕಾಗೋಡು ತಿಮ್ಮಪ್ಪನವರು ಸಾಗರ ವಿಧಾನಸಭಾ ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧೆ ಮಾಡುತ್ತಾರೆ ಬೇಕಾದರೆ ಈ ವಿಚಾರವನ್ನು ಬರೆದಿಟ್ಟುಕೊಳ್ಳಿ ಎಂಬ ಮಾತನ್ನ ಕೆಲವರೊಂದಿಗೆ ಹಂಚಿಕೊಳ್ಳಲಾಯಿತು.
ಅಷ್ಟೇ ಅಲ್ಲದೇ ಇಂದು "ಬಿಗ್ ಬ್ರೇಕಿಂಗ್" ಸುದ್ದಿಯಾಗಿ ಸಾಗರ ತಾಲ್ಲೂಕಿನಲ್ಲೇ ಪ್ರಪ್ರಥಮ ಕಾಗೋಡು ತಿಮ್ಮಪಪ್ಪನವರು ಸಾಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಾರೆ ಎಂಬ ಸುದ್ದಿಯನ್ನು ಬಿತ್ತರಿಸಿದ್ದು, ಇನ್ನು ಕೆಲವೇ ಕ್ಷಣದಲ್ಲಿ ಅಧಿಕೃತ ಮಾಹಿತಿ ಹೊರಬೀಳಲಿದೆ ಎಂಬ ಸುದ್ದಿಯನ್ನ ನಮ್ಮ ಮಂದಾರ ನ್ಯೂಸ್ ವೆಬ್ ಪೋರ್ಟಬಲ್ ಸುದ್ದಿ ವಾಹಿನಿ ಮೂಲಕ ಪ್ರಸಾರ ಮಾಡಲಾಯ್ತು.ಅದರಂತೆ ಕಾಗೋಡು ತಿಮ್ಮಪ್ಪನವರ ಪುತ್ರಿ ಡಾಕ್ಟರ್ ರಾಜನಂದಿನಿ ಅವರು ಇಂದು ಪತ್ರಿಕಾಗೋಷ್ಠಿ ನಡೆಸಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ "ಸಾಗರ ಕ್ಷೇತ್ರದಿಂದ ಕಾಗೋಡು ತಿಮ್ಮಪ್ಪ"ನವರು ಮತ್ತೊಮ್ಮೆ ಸ್ಪರ್ಧೆ ಮಾಡುತ್ತಾರೆ ಎಂಬ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದರು.

ಮಂದಾರ ನ್ಯೂಸ್ ಸುದ್ದಿವಾಹಿನಿ ನೈಜ,ನಿಖರ  ಮತ್ತು ಸತ್ಯಕ್ಕೆ ಹತ್ತಿರವಾದ ಸುದ್ದಿಯನ್ನ ಭಿತ್ತರಿಸುತ್ತದೆ ಎಂಬುದು ಈ ಮೂಲಕ ಮತ್ತೊಮ್ಮೆ ಸಾಬೀತಾಯಿತು.
ಕಳೆದ ಹದಿನೈದು ದಿನದಿಂದ ಸಾಗರ ತಾಲ್ಲೂಕಿನಾದ್ಯಂತ  ಮಂದಾರ ನ್ಯೂಸ್ ವೆಬ್ ಪೋರ್ಟಬಲ್ ಸುದ್ದಿ ವಾಹಿನಿ ಹೊಸ ಸಂಚಲನವನ್ನೇ ಸೃಷ್ಟಿಸಿದೆ.ಅತಿ ಹೆಚ್ಚು ಓದುಗರ ಬಳಗವನ್ನು ಹೊಂದುವದರ ಜೊತೆಗೆ ಜನಸಾಮಾನ್ಯರಿಗೆ ಹತ್ತಿರವಾಗುತ್ತಿದೆ.

ಮಂದಾರ ನ್ಯೂಸ್ ವೆಬ್ ಪೋರ್ಟಬಲ್ ಸುದ್ದಿವಾಹಿನಿಯು ಪಕ್ಷಾತೀತವಾಗಿ,ಜಾತ್ಯತೀತವಾಗಿ ಯಾವುದೇ ಅಂಜಿಕೆ ಅಳುಕಿಲ್ಲದೆ ನೇರ-ನಿಖರ ಸುದ್ದಿಯನ್ನು ಬಿತ್ತರಿಸುವ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಇಟ್ಟ ಹೆಜ್ಜೆಯನ್ನು ಹಿಂದಿಡುವುದಿಲ್ಲ.
ಈಗಾಗಲೇ ಮಧ್ಯ ಕರ್ನಾಟಕದಲ್ಲಿ ಮನೆಮಾತಾಗಿರುವ ಮಂದಾರ ನ್ಯೂಸ್ ಹಾಗೂ ಜನಾಕ್ರೋಶ ಪತ್ರಿಕೆಯು ಇನ್ನುಮುಂದೆ ಮಳೆನಾಡಿನಲ್ಲೂ ತನ್ನ ಸುದ್ದಿಯ ಮೂಲಕ ಮನೆಮಾತಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ನಮ್ಮ ಸುದ್ದಿವಾಹಿನಿಯು ಜನಸಾಮಾನ್ಯರ ಧ್ವನಿಯಾಗಿ ಸುದ್ದಿಗೆ ಆದ್ಯತೆ ನೀಡುತ್ತದೆ.ವಿಶಿಷ್ಟ ಬರಹದ ಮೂಲಕ ಓದುಗರ ಮನವನ್ನು ತಣಿಸುತ್ತಿದೆ.

ಸದಾ ತಾಜಾತನದ ಸುದ್ದಿಯನ್ನ ನಿಮ್ಮ ಮುಂದೆ ಇಡಲು ಪ್ರಯತ್ನ ಪಡುತ್ತೇವೆ. ನಮ್ಮೆಲ್ಲರ ಓದುಗರ ಮಿತ್ರರ ಆಶೀರ್ವಾದ ಮಂದಾರ ನ್ಯೂಸ್ ವೆಬ್ ಪೋರ್ಟಬಲ್ ಹಾಗೂ ಜನ ಆಕ್ರೋಶ ಮತ್ತು ಪ್ರಜಾ ನೆರಳು ಪತ್ರಿಕೆಗೆ ಸದಾ ಇರಲಿ.

ಮತ್ತೊಮ್ಮೆ ನಮ್ಮೆಲ್ಲಾ ಓದುಗರ ಮಿತ್ರರಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳೊಂದಿಗೆ 

ಪ್ರಕಾಶ್ ಮಂದಾರ 
ಸಂಪಾದಕರು.
8880499904.

Post a Comment

0 Comments