ಬೆಂಗಳೂರು ಪೊಲೀಸರಿಂದ ತಪ್ಪಿಸಿಕೊಂಡ ಆರೋಪಿ ಗೃಹ ಸಚಿವರ ಕ್ಷೇತ್ರದಲ್ಲಿ ಪ್ರತ್ಯಕ್ಷ.ಮತ್ತೆ ಪೋಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಖದೀಮ.

ತೀರ್ಥಹಳ್ಳಿ :--ತಾಲ್ಲೂಕಿನ ಗಂಟೆ ಹಕ್ಕಲ ನಿವಾಸಿ ಗೀತಾ ಎಂಬುವರ ಪುತ್ರ ಮೋಹಿತ್ ಎಂಬುವನು ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಕಳ್ಳತನ ಮತ್ತು ದರೋಡೆ ಪ್ರಕರಣಗಳು ಹೊಂದಿದ್ದು ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಈತನ ಮೇಲೆ ದರೋಡೆ ಪ್ರಕರಣ ದಾಖಲಾಗಿದ್ದು  ಹಾಗೂ ರೌಡಿಶೀಟರ್ ಆಗಿದ್ದು .ಕೆಲವು ವರ್ಷಗಳಿಂದ ಕಾಣೆಯಾಗಿದ್ದ ಆರೋಪಿಯಾಗಿದ್ದಾನೆ .ಈತನ  ಮೇಲೆ ಬೆಂಗಳೂರು ಪೊಲೀಸರು ವಾರೆಂಟ್ ಪಡೆದು ನಿನ್ನೆ ಸಂಜೆ ತೀರ್ಥಹಳ್ಳಿ ಪಟ್ಟಣದ ಅಜಾದ್ ರಸ್ತೆಯ ತೃಪ್ತಿ ಬೇಕರಿ ಎದುರು ಮಾರುತಿ ಸ್ವಿಫ್ಟ್ ಕಾರಿನಲ್ಲಿದ್ದ ಆರೋಪಿಯನ್ನು ಪೊಲೀಸರು ಹಿಡಿಯಲು ಪ್ರಯತ್ನಿಸಿದಾಗ ಕಾರನ್ನು ಬಿಟ್ಟು ಪರಾರಿಯಾಗಿದ್ದಾನೆ .ಈತನ ಮೇಲೆ ತೀರ್ಥಹಳ್ಳಿ ನಗರ ಪೊಲೀಸ್ ಠಾಣೆಗಳಲ್ಲೂ ಪ್ರಕರಣಗಳಿದ್ದು ತೀರ್ಥಹಳ್ಳಿಯಲ್ಲಿ ಅನೇಕ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.ಇದೀಗ ತೀರ್ಥಹಳ್ಳಿಯಲ್ಲಿ ದರೋಡೆ ಪ್ರಕರಣ ಕಳ್ಳತನದ ಪ್ರಕರಣಗಳು ಹೆಚ್ಚಾಗಿದ್ದು ಇಂತಹ ಆರೋಪಿಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಡಬೇಕಾದ ಅನಿವಾರ್ಯತೆ ಗೃಹಸಚಿವರ ಕ್ಷೇತ್ರದಲ್ಲಿದೆ.
ಬೆಂಗಳೂರು ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಮಾಡಿದ್ದು ಇವನನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ .

Post a Comment

0 Comments