ಬಿಜೆಪಿ ಜಿಲ್ಲಾ ಎಸ್ ಸಿ ಮೋರ್ಚಾ ಉಪಾಧ್ಯಕ್ಷ ರಾಘವೇಂದ್ರ ಕೊಂಡಜ್ಜಿ ಮೇಲೆ ಮಾರಣಾಂತಿಕ ಹಲ್ಲೆ,ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ!


ಹರಿಹರ :-ದಾವಣಗೆರೆ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಉಪಾಧ್ಯಕ್ಷರಾದ ರಾಘವೇಂದ್ರ ಕೊಂಡಜ್ಜಿ ಇವರ ಮೇಲೆ ಅದೇ ಪಕ್ಷದ ಮತ್ತೊಂದು ಬಣದ ಕಾರ್ಯಕರ್ತರಿಂದ ಮಾರಣಾಂತಿಕ ಹಲ್ಲೆಯಾಗಿದ್ದು ,ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ .ಸದ್ಯ ಪ್ರಕರಣ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ .

ಕಳೆದ ಒಂದು ವಾರದ ಹಿಂದೆ ವಾಟ್ಸಪ್ ಗ್ರೂಪಿನ ಮೆಸೇಜ್ ಹಾಕಿರುವ  ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ವಿಪರೀತ ಹಂತಕ್ಕೆ ತಲುಪಿ ಒಬ್ಬರೇ ಒಬ್ಬರು ಮಾತಿನ ವಾಗ್ವಾದ ರಾಘವೇಂದ್ರ ಕೊಂಡಜ್ಜಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಯುವ ಮಟ್ಟಕ್ಕೆ ಹೋಯಿತು.
ಹರಿಹರ ವಿಧಾನಸಭಾ ಕ್ಷೇತ್ರದ ಪ್ರಬಲ ಬಿಜೆಪಿ ಆಕಾಂಕ್ಷಿಯ ಅಭ್ಯರ್ಥಿ ಬಣದ ಕಾರ್ಯಕರ್ತರಾದ ಚೇತನ್ ಬಿ.ಟಿ,ಮತ್ತು ಮಂಜುನಾಥ್ (ನಲ್ಲಿ)ಇವರು ರಾಘವೇಂದ್ರ ಕೊಂಡಜ್ಜಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ .ಇದಕ್ಕೆ ಸಂಬಂಧಿಸಿದಂತೆ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಇವರ ಮೇಲೆ ಜಾತಿ ನಿಂದನೆ ಮತ್ತು ಮಾರಣಾಂತಿಕ ಹಲ್ಲೆ ನಡೆಸಿದ ದೂರು ದಾಖಲಾಗಿದೆ .ಸದ್ಯ ಹಲ್ಲೆ ನಡೆಸಿದವರು ಹುಡುಕಾಟ ನಡೆಯುತ್ತಿದೆ .

ತೀವ್ರತರದ ಹಲ್ಲೆಗೆ ಒಳಗಾದ ರಾಘವೇಂದ್ರ ಕೊಂಡಜ್ಜಿ ಇವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.ಇನ್ನೂ ಆರೋಗ್ಯದಿಂದ ಚೇತರಿಸಿಕೊಂಡಿಲ್ಲ .ಬೆನ್ನಿನ ಮೂಳೆ ಮುರಿದಿದ್ದು ಪಕ್ಕೆಲುಬಿಗೆ ತೀವ್ರತರದ ಪೆಟ್ಟಾಗಿದೆ .ಲಿವರ್ ಗೂ ಹೆಚ್ಚಿನ ಹಾನಿಯಾಗಿದೆ ಎಂಬ ಮಾಹಿತಿ ಕುಟುಂಬಸ್ಥರಿಂದ ಪತ್ರಿಕಾ ಮಾಧ್ಯಮಕ್ಕೆ ನೀಡಿದ್ದಾರೆ .
ಚುನಾವಣೆ ಇನ್ನೂ 1ವರ್ಷ ಬಾಕಿ ಇರುವಾಗಲೇ ಆಕಾಂಕ್ಷಿ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಎರಡೂ ಬಣದ ಕಾರ್ಯಕರ್ತರ ನಡುವೆ ಮಾರಾಮಾರಿ ಶುರುವಾಗಿದೆ.ಒಂದೇ ಪಕ್ಷದ ಇಬ್ಬರು ಅಭ್ಯರ್ಥಿಗಳ ಬಣ ರಾಜಕೀಯ ಹೊಡೆದಾಟ ಮಟ್ಟಕ್ಕೆ ಹೋಗಿದ್ದು ಮಾತ್ರ ಅತ್ಯಂತ ಬೇಸರದ ಸಂಗತಿ .
ವಿಚಾರ ಚರ್ಚೆಗಳು ಕೇವಲ ಮಾತಿನಲ್ಲಿ ರಬೇಕು ಹಲ್ಲೆಯಂಥ ಪ್ರಯತ್ನಕ್ಕೆ ಹೋಗಬಾರದು .ಮುಂದೆ ನಾಯಕರು ಒಂದೇ ಕಾರ್ಯಕರ್ತರು ಮಾತ್ರ ಹೊಡೆದಾಡಿಕೊಂಡು ಬಡಿದಾಡುಕೊಂಡು ಬೀದಿಗೆ ಬರಬೇಕಾಗುತ್ತದೆ .ನಿಮ್ಮನ್ನೇ ನಂಬಿರುವ ಕುಟುಂಬ ಕಣ್ಣೀರ ಹಾಕಬೇಕಾಗುತ್ತದೆ.

ರಾಘವೇಂದ್ರ ಕೊಂಡಜ್ಜಿ ಬಿಜೆಪಿ ಜಿಲ್ಲಾ ಎಸ್ ಸಿ ಮೋರ್ಚಾದ  ಉಪಾಧ್ಯಕ್ಷರಾಗಿದ್ದು ಅವರ ಮೇಲೆ ಹಲ್ಲೆ ನಡೆದಿದೆ .ಇನ್ನು ಸಾಮಾನ್ಯ ಕಾರ್ಯಕರ್ತನ ಪಾಡು ಹೇಳತೀರದು .

ಬಿಜೆಪಿ ಪಕ್ಷದ ಹೈಕಮಾಂಡ್ ದಾವಣಗೆರೆ ಜಿಲ್ಲೆಯಲ್ಲಿ ಸ್ವಪಕ್ಷದ ಕಾರ್ಯಕರ್ತರಿಂದಲೇ ಜಿಲ್ಲಾ ಎಸ್ಸಿ ಮೋರ್ಚಾ ಉಪಾಧ್ಯಕ್ಷ ರ ಮೇಲೆ ನಡೆದ ಮಾರಣಾಂತಿಕ ಹಲ್ಲೆಯ ಹಲ್ಲೆ ಸಂಬಂಧ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ .ಈ ಕುರಿತು ವರದಿಯನ್ನು ಪಡೆದು ತಪ್ಪಿತಸ್ಥರು ಯಾರೇ ಕಂಡು ಬಂದರೂ ಕ್ರಮ ಕೈಗೊಳ್ಳಬೇಕು .ಇಲ್ಲವಾದರೆ ಮುಂದಿನ ದಿನದಲ್ಲಿ ಪಕ್ಷದ ವರ್ಚಸ್ಸಿಗೆ ಧಕ್ಕೆ ಬರುತ್ತದೆ .ಹಾಗಾಗದಂತೆ ಬಿಜೆಪಿ ಹೈಕಮಾಂಡ್ ದಾವಣಗೆರೆ ಜಿಲ್ಲೆಯಲ್ಲಿ ನಡೆದ ಘಟನೆಯ ಸಂಬಂಧ ಸಮಗ್ರ ಮಾಹಿತಿಯನ್ನು ಪಡೆದು ಪಕ್ಷದ ಚೌಕಟ್ಟಿನ ಒಳಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು .

ಸದ್ಯ ಮಾರಣಾಂತಿಕ ಹಲ್ಲೆಗೊಳಗಾದ ರಾಘವೇಂದ್ರ ಕೊಂಡಜ್ಜಿ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ .ಅವರು ಶೀಘ್ರವಾಗಿ ಆರೋಗ್ಯದಿಂದ ಚೇತರಿಸಿಕೊಳ್ಳಲಿ ಎಂದು ಅವರ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ .

ವರದಿ.ತಿಪ್ಪೇಶ್. ಎಲ್

Post a Comment

0 Comments