ಹಲಗೇರಿ ಪೊಲೀಸ್ ಇಲಾಖೆಯಿಂದ ಅಕ್ರಮ ಮರಳು ಅಡ್ಡೆ ಮೇಲೆ ದಾಳಿ,498 ಕ್ಯೂಬಿಕ್ ಮರಳು ವಶ.!!


ರಾಣೇಬೆನ್ನೂರು:ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕು ಹಲಗೇರಿ ಪೊಲೀಸ್ ಠಾಣಾ ಸರಹದ್ದಿನ ಕೋಟಿಹಾಳ ಗ್ರಾಮದಲ್ಲಿ ತುಂಗಭದ್ರಾ ನದಿ ತೀರದಿಂದ ಅಕ್ರಮ ಮರಳು ಗಣಿಗಾರಿಕೆಯಿಂದ  ಮರಳು ಸಂಗ್ರಹಣೆ ಮಾಡಿದ ಮರಳು ಅಡ್ಡೆಯ ಮೇಲೆ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ,ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ರಾಣೆಬೆನ್ನೂರು ಗ್ರಾಮಾಂತರ ಡಿವೈಎಸ್ಪಿ ಶ್ರೀ. ಟಿ.ವಿ ಸುರೇಶ್ ಇವರ ಮುಂದಾಳತ್ವದಲ್ಲಿ ,ಸಿಪಿಐ ಶ್ರೀಮತಿ ಭಾಗ್ಯವತಿ ಬಂತಿ ಇವರ ಉಪಸ್ಥಿತಿಯಲ್ಲಿ ಹಲಗೇರಿ ಪಿಎಸ್ಸೈ ಶ್ರೀ. ಮೇಘರಾಜ್ ಎಂ.ವಿ ಹಾಗೂ ಸಿಬ್ಬಂದಿಗಳೊಂದಿಗೆ ಕೋಟೆಹಾಳ ಗ್ರಾಮದ ತುಂಗಾ ನದಿ ತೀರದಿಂದ ಸಂಗ್ರಹಣೆಯಾಗಿರುವಂತಹ ಮರಳು ಅಡ್ಡೆಯ ಮೇಲೆ ದಾಳಿ ಮಾಡಿ ಸರಿಸುಮಾರು 565200/-ಮೊತ್ತದ 498 ಕ್ಯೂಬಿಕ್ ಮೀಟರ್ ಮರಳನ್ನು ವಶಪಡಿಸಿಕೊಂಡಿರುತ್ತಾರೆ ಹಾಗೂ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ರೀತಿ ಕ್ರಮ ಕೈಗೊಂಡಿರುತ್ತಾರೆ.
ಕೋಟಿಹಾಳ ಗ್ರಾಮದಲ್ಲಿ ನಿರಂತರವಾಗಿ ಮರಳು ಗಣಿಗಾರಿಕೆ ನಡೆಯುತ್ತಿದ್ದು ಪೊಲೀಸ್ ಇಲಾಖೆ ತಡೆಯುವ ನಿಟ್ಟಿನಲ್ಲಿ ಸತತ ಪ್ರಯತ್ನ ಮಾಡುತ್ತಲೇ ಬಂದಿದೆ .ಆದರೆ ಭೂ ಮತ್ತು ಗಣಿ ಹಾಗೂ ಕಂದಾಯ ಇಲಾಖೆ ಅಕ್ರಮ ಮರಳು ಗಣಿಗಾರಿಕೆ ತಡೆಯುವ ನಿಟ್ಟಿನಲ್ಲಿ ನಿರ್ಲಕ್ಷ್ಯ ತೋರುತ್ತಿದೆ .ಪೋಲಿಸ್ ಇಲಾಖೆ ಇತರ ಕೆಲಸದ ಒತ್ತಡದ ನಡುವೆಯೂ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗುತ್ತಿದೆ.
ಅಕ್ರಮ ಮರಳು ಗಣಿಗಾರಿಕೆ ತಡೆಯುವ ಹೆಚ್ಚಿನ ಜವಾಬ್ದಾರಿ ಭೂ ಮತ್ತು ಗಣಿ ಹಾಗೂ ಕಂದಾಯ ಇಲಾಖೆಯದ್ದು .ಆದರೆ ಈ ಇಲಾಖೆಯ ಅಧಿಕಾರಿಗಳು ಅಕ್ರಮ ಮರಳು ದಂಧೆಕೋರರೊಂದಿಗೆ ಶಾಮೀಲಾಗಿ ಮರಳು ಗಣಿಗಾರಿಕೆ ನಡೆಸಿಕೊಂಡು ಹೋಗಲು ಸಹಕಾರಿಗಳಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಮರಳು ಗುತ್ತಿಗೆ ಪಡೆದ ಪಾಯಿಂಟ್ ನಲ್ಲೂ ಸಹ ಅಕ್ರಮ ಮರಳು ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದೆ .ಸರ್ಕಾರದ ಮರಳು ನೀತಿಯನ್ನು ಮೀರಿ ಮರಳು ಗುತ್ತಿಗೆದಾರರು ಅತ್ಯಧಿಕ ಯಂತ್ರಗಳ ಸಹಾಯದಿಂದ ಮರಳನ್ನು ತೆಗೆಯುತ್ತಿದ್ದಾರೆ ಹಾಗೂ ತಡರಾತ್ರಿ ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡುತ್ತಿದ್ದಾರೆ.

ಮಂಗಳವಾರ ರಾತ್ರಿ ಹಲಗೇರಿ ಪೊಲೀಸ್ ಠಾಣಾ ಸರಹದ್ದಿನ ನಾಗೇನಹಳ್ಳಿ ಮರಳು ಪಾಯಿಂಟಿನಿಂದ ತಡರಾತ್ರಿ 2ಗಂಟೆಗೆ GA.09.U.4294.ನಂಬರಿನ ಅಕ್ರಮವಾಗಿ ಮರಳು ತುಂಬಿದ ಟಿಪ್ಪರ್ ಲಾರಿಯಲ್ಲಿ ಮಾಕನೂರು ಮಾರ್ಗದ ಮೂಲಕ ಕುಮಾರಪಟ್ಟಣಂ ಪೊಲೀಸ್ ಠಾಣಾ ಸರಹದ್ದಿನಿಂದ ರಾಣೇಬೆನ್ನೂರು ಕಡೆ ಮರಳು ಸಾಗಾಣಿಕೆಯಾಗುತ್ತಿದೆ.ಅದೇ ರೀತಿ ಐರಣಿ ಮರಳು ಪಾಯಿಂಟಿನಲ್ಲಿ ಮರಳು ಗಣಿಗಾರಿಕೆ ಯಂತ್ರಗಳ ಸಹಾಯದಿಂದ ತಡರಾತ್ರಿಯವರೆಗೂ ನಡೆಯುತ್ತಿದೆ.ಇದು ರಾಣೆಬೆನ್ನೂರು ಗ್ರಾಮಾಂತರ ಪೋಲಿಸ್ ಠಾಣಾ ಸರಹದ್ದಿಗೆ ಸಂಬಂಧಿಸಿದ ಮರಳು ಪಾಯಿಂಟ್ ಆಗಿರುತ್ತದೆ .
ಗುತ್ತಿಗೆ ಆಧಾರದಲ್ಲಿ ನಡೆಯುತ್ತಿರುವ ಮರಳು ಪಾಯಿಂಟ್ ನಲ್ಲೂ ಸಹ ಅಕ್ರಮವಾಗಿ ಮರಳು ಗಣಿಗಾರಿಕೆ ನಿರಂತರವಾಗಿ ನಡೆಯುತ್ತಲೇ ಇದೆ .ಇದರ ಮಾಹಿತಿ ಭೂ ಮತ್ತು ಗಣಿ ಇಲಾಖೆ ಹಾಗೂ ಕಂದಾಯ ಇಲಾಖೆಗೆ ಇದೆ.

ಪ್ರಕಾಶ್ ಮಂದಾರ 
ಸಂಪಾದಕರು .
8880499904

Post a Comment

0 Comments