ಕುಮಾರಪಟ್ಟಣಂ ಪಿಎಸ್ ಐ ಸಂಜೀವ್ ಕುಮಾರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ !?


ಹರಿಹರ :ಕುಮಾರಪಟ್ಟಣಂ ಪಿಎಸ್ ಐ ಸಂಜೀವ್ ಕುಮಾರ ಪ್ರಯಾಣಿಸುತ್ತಿದ್ದ ಕಾರು ಹರಿಹರ ಬೈಪಾಸ್ ಸಮೀಪ ಹರಗನಹಳ್ಳಿ ಕ್ರಾಸ್ ಬಳಿ ರಸ್ತೆ ಅಪಘಾತವಾಗಿದೆ.
ಪಿಎಸ್ಐ ಸಂಜೀವ ಕುಮಾರ್ ಇವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಭಾರಿ ಮಳೆ ಬಂದ ಕಾರಣ ರಸ್ತೆ ಮಧ್ಯದಲ್ಲಿ ನೀರು ನಿಂತಿದ್ದು ಮತ್ತು ಜೋರಾಗಿ ಮಳೆ ಬರುತ್ತಿದ್ದು ನೀರು ರಸ್ತೆ ಮಧ್ಯೆ ನಿಂತಿರುವುದು ಕಾಣಿಸದೆ ಕಾರು ಆಯತಪ್ಪಿ ಅಪಘಾತವಾಗಿದೆ.
ಕಾರಿನಲ್ಲಿ ಸಂಜೀವಕುಮಾರ್ ಒಬ್ಬರೇ ಇದ್ದು ಅವರೇ ಕಾರನ್ನು ಚಾಲನೆ ಮಾಡುತ್ತಿದ್ದರು ಎಂಬ ಮಾಹಿತಿ ನಮ್ಮ ಮಾಧ್ಯಮಕ್ಕೆ ಲಭ್ಯವಾಗಿದೆ.
 ಸಂಜೀವ್ ಕುಮಾರ್ ಅವರು ಕುಮಾರಪಟ್ಟಣಂ ಪೊಲೀಸ್ ಠಾಣೆಗೆ ಪಿಎಸ್ಸೈ ಆಗಿ ಅಧಿಕಾರ ವಹಿಸಿಕೊಂಡಿದ್ದರು .ಅಧಿಕಾರ ವಹಿಸಿಕೊಂಡ ದಿನದಿಂದ ಎಲ್ಲರೊಂದಿಗೂ ಪ್ರೀತಿ, ವಿಶ್ವಾಸ,ಸ್ನೇಹಮಾಯವಾಗಿ ಎಲ್ಲರ ಅಚ್ಚುಮೆಚ್ಚಿನ ಠಾಣಾಧಿಕಾರಿಯಾಗಿ ಜನಮನ್ನಣೆ ಗಳಿಸಿದ್ದರು.ಸದ್ಯ ಭಗವಂತನ ಹಾಗೂ ಜನಸಾಮಾನ್ಯರ ಆಶೀರ್ವಾದದಿಂದ ಪಿಎಸ್ಸೈ ಸಂಜೀವ್ ಕುಮಾರ್  ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Post a Comment

0 Comments