ಹರಿಹರ:ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿತರ ಬಂಧನ !!!


ಹರಿಹರ:ಹರಿಹರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಟಿಪ್ಪು ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿತರನ್ನು ನಿನ್ನೆ ದಿನ ಬಂಧಿಸಿದ್ದಾರೆ.

ಆರೋಪಿತರಿಂದ ಸರಿಸುಮಾರು 21.000/- ರೂ ಬೆಲೆಯ 395 ಗ್ರಾಂ ಗಾಂಜಾವನ್ನ ವಶಪಡಿಸಿಕೊಳ್ಳಲಾಗಿದ್ದು ಹರಿಹರ ನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ದಾವಣಗೆರೆ ಗ್ರಾಮಾಂತರ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಕನ್ನಿಕಾ ಸಿಕ್ರಿವಾಲ್ ಐಪಿಎಸ್ ರವರ ಮಾರ್ಗದರ್ಶನದಲ್ಲಿ.ಶ್ರೀ ಸತೀಶ್ ಕುಮಾರ್ ಯು, ಸಿಪಿಐ ಹರಿಹರ ವೃತ್ತ ರವರ ನೇತೃತ್ವದ ಶ್ರೀ ಸುರೇಶ್ ಪಿ ಎಸ್ ಐ,ಶ್ರೀಮತಿ ಲತಾ ತಾಳೇಕರ್ ಪಿಎಸ್ ಐ,  ನಾಗರಾಜ್ ಸುಣ್ಣಗಾರ್, ನಾಗರಾಜ, ದೇವರಾಜ್ ಸೂರ್ವೆ ,ಮಂಜುನಾಥ್ ಕ್ಯಾತಮ್ಮನವರ್, ಶಿವರಾಜ್ ಎಂ.ಎಸ್, ಸತೀಶ್, ಸಿದ್ಧರಾಜು ಎಸ್.ಬಿ,ಹನುಮಂತ ಗೋಪನಾಳ್, ತಿಪ್ಪೇಸ್ವಾಮಿ, ಮುರಳೀಧರ್, ನಾಗರಾಜ್, ರಿಜ್ವಾನ್ ನಾಸೂರ್, ಕರಿಬಸಪ್ಪ,ಶ್ರೀಮತಿ ನಾಜೀಮ್, ರವರುಗಳು ಆರೋಪಿತರನ್ನು ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

 ಗಾಂಜಾ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾದ ಸದರಿ ಪೊಲೀಸ್ ತಂಡಕ್ಕೆ ಮಾನ್ಯ ಪೊಲೀಸ್ ವರಿಷ್ಠಾಧಿಕಾರಿ ಸಿಬಿ.ರಿಷ್ಯಂತ್,ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಶ್ರೀ ರಾಮಗೊಂಡ ಬಸರಗಿ  ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Post a Comment

0 Comments