ಹಸು ಮೈ ತೊಳೆಯಲು ಹೋದ ಬಾಲಕ ನೀರುಪಾಲು !!!


ಸಾಗರ:ಹಸು ಮೈ ತೊಳೆಯಲು ಹೋದ ಬಾಲಕ ಕಾಲು ಜಾರಿ ಬಿದ್ದು ನೀರು ಪಾಲಾದ ಮನಕಲಕುವ ಘಟನೆ ಸಾಗರ ತಾಲೂಕು ಹಿರೇಬಿಲಗುಂಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಂತೆ ಗ್ರಾಮದಲ್ಲಿ ನಿನ್ನೆ ಸಂಜೆ 4 ಗಂಟೆಗೆ ಈ ಘಟನೆ ಸಂಭವಿಸಿದೆ.

ಮೃತ ಬಾಲಕ ಅದೇ ಗ್ರಾಮದ ರಮೇಶ್ ಹಾಗೂ ಸುಧಾ  ದಂಪತಿಗಳ ಮಗ ಸಂದೇಶ್(15) ಎಂದು ಗುರುತಿಸಲಾಗಿದೆ.

ರಮೇಶ್ ಹಾಗೂ ಸುಧಾ ಇವರು ಬೇರೆ ಊರಿಗೆ ತೆರಳಿದ್ದರು ಆ ಸಂದರ್ಭದಲ್ಲಿ ಸಂದೇಶ ಹಸುಗಳನ್ನ ಮೈ ತೊಳಸಿಕೊಂಡು ಬರಲು ಗ್ರಾಮದ ಬೆಲೆಸಿನಕೆರೆ ಕೆರೆಗೆ ತೆರಳಿದ್ದ. ಮೈತಳೆಯುವ ಸಂದರ್ಭದಲ್ಲಿ ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ.ಜತೆಗೆ ಇನ್ನೂ ಇಬ್ಬರು ಬಾಲಕರಿದ್ದು ಅವರು ಕೂಡಲೇ ಗ್ರಾಮಸ್ಥರಿಗೆ ವಿಶಯ ತಿಳಿಸಿದ್ದಾರೆ .ಗ್ರಾಮಸ್ಥರು ಅಗ್ನಿಶಾಮಕ ದಳದವರಿಗೆ ಮಾಹಿತಿಯನ್ನು ತಿಳಿಸಿ ಅಗ್ನಿಶಾಮಕ ದಳದ ಸಹಾಯದಿಂದ ಮೃತ ಬಾಲಕನ ಶವವನ್ನು ಕೆರೆಯಿಂದ ಮೇಲಕ್ಕೆತ್ತಿದ್ದಾರೆ.

Post a Comment

0 Comments