ಸಾಗರ ಗ್ರಾಮಾಂತರ ಪೊಲೀಸರ ಮಿಂಚಿನ ಕಾರ್ಯಾಚರಣೆ:ಅಡಿಕೆ ಕಳ್ಳರ ಬಂಧನ...!



ಸಾಗರ ಸುತ್ತಮುತ್ತ ಅಡಿಕೆ ಕಳ್ಳತನ ಮಾಡುತ್ತಿದ್ದ ಎಂಟು ಮಂದಿ ಕಳ್ಳರ ಜಾಡು ಹಿಡಿದ ಗ್ರಾಮಾಂತರ ಠಾಣೆಯ "ವೇರ್ರೀ ಇಂಟಲಿಜೆಂಟ್ &ಬ್ರಿಲಿಯೆಂಟ್  ಆರಕ್ಷಕರು...!

ಸುಮಾರು 8,35,000/- ರೂ ಹಾಗೂ ಕೃತ್ಯಕ್ಕೆ ಬಳಸಿದ 2.00.000 ಲಕ್ಷ ಮೌಲ್ಯದ ಒಂದು ಒಮಿನಿ. ಎರೆಡು ಬೈಕ್ ವಶಕ್ಕೆ....!


ಸಾಗರ: ಇತ್ತೀಚೆಗೆ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಹಲವು ಅಡಿಕೆ ಕಳ್ಳತನ ಬಗ್ಗೆ ಪ್ರಕರಣಗಳು ದಾಖಲಾಗಿದ್ದು. ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.* ಈ ಪ್ರಕರಣದ ತನಿಖೆಯನ್ನು *ಸಾಗರ ಗ್ರಾಮಾಂತರದ "ವೇರ್ರೀ ಇಂಟಲಿಜೆಂಟ್ & ಬ್ರಿಲಿಯೆಂಟ್" ಪೊಲೀಸರು ಇದನ್ನು ಸವಾಲಾಗಿ ಸ್ವೀಕರಿಸಿ ಇದೀಗ ಮಾಲು ಮತ್ತು ಆರೋಪಿಗಳ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.* ಕಾರ್ಯಚರಣೆಗೆ ವಿಶೇಷವಾಗಿ *ಶಿವಮೊಗ್ಗ ಜಿಲ್ಲಾಪೊಲೀಸ್ ಅಧೀಕ್ಷಕರಾದ  ಶ್ರೀ ಲಕ್ಷ್ಮೀ ಪ್ರಸಾದ್ (I.P.S)  ಮತ್ತು ಶಿವಮೊಗ್ಗ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶ್ರಿ ವಿಕ್ರಮ್ ಅಮಟೆ (K.S.P.S) ರವರ ಮಾರ್ಗದರ್ಶದಲ್ಲಿ.ಸಹಾಯಕ ಪೊಲೀಸ್ ಅಧೀಕ್ಷಕರಾದ, (ಸಾಗರ ಉಪವಿಭಾಗ) ಶ್ರೀಯುತ ರೋಹನ್‌ ಜಗದೀಶ್(I.P.S)* ರವರ ಸೂಚನೆಯಂತೆ .ಸಾಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಇತ್ತೀಚೆಗೆ ನೂತನವಾಗಿ ಅಧಿಕಾರ ವಹಿಸಿಕೊಂಡ ಪೊಲೀಸ್ ಇನ್ಸ್‌ಪೆಕ್ಟರ್ ವಿ. ಪ್ರವೀಣ್ ಕುಮಾರ್, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಶ್ರೀಮತಿ ಸುಜಾತ,* ರವರ ನೇತೃತ್ವದಲ್ಲಿ ಒಂದು ವಿಶೇಷ ಪೊಲೀಸ್ ತಂಡವನ್ನು ರಚಿಸಿಕೊಂಡು. ಮಿಂಚಿನ ವೇಗದಲ್ಲಿ ಕಾರ್ಯಾಚರಣೆ ನಡೆಸಿ. *ಸಾಗರ ಗ್ರಾಮಾಂತರ ಠಾಣೆಯ 07 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸಾಗರ ಗ್ರಾಮಾಂತರ ವ್ಯಾಪ್ತಿಯ ಏಳು ಮಂದಿ ಹಾಗೂ ಸಾಗರ ಪಟ್ಟಣ ವ್ಯಾಪ್ತಿಯ ಒಬ್ಬ ಸೇರಿದಂತೆ ಎಂಟು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ದಸ್ತಗಿರಿ ಮಾಡಿದ್ದಾರೆ*. ಆರೋಪಿಗಳಿಂದ ಸುಮಾರು 8,35,000/-ರೂ ಮೌಲ್ಯದ *ಸಿಪ್ಪೆಗೋಟು, ಚಾಲಿ ಹಾಗೂ ಕೆಂಪು ಅಡಿಕೆಯನ್ನು,ಮತ್ತು ಕೃತ್ಯಕ್ಕೆ ಬಳಸಿದ 2,00,000/-ರೂ ಮೌಲ್ಯದ ಒಂದು ಓಮ್ಮಿ ಹಾಗೂ ಎರಡು ಬೈಕ್‌ಗಳನ್ನು* ಅಮಾನತ್ತು ಪಡಿಸಿಕೊಂಡಿದ್ದಾರೆ. *ಕಾರ್ಯಾಚರಣೆಯಲ್ಲಿ PSI ಶ್ರೀ ರಘುವೀರ್, (ಪ್ರೊ..) ಕ್ರೈಮ್ ನ ವೇರಿ ಬ್ರಿಲಿಯೆಂಟ್. ಪೊಲೀಸ್ ಸಿಬ್ಬಂಧಿಗಳಾದ ಪೊಲೀಸ್ ಸಿಬ್ಬಂಧಿಗಳಾದ ತಾರನಾಥ, ಅಶೋಕ್. ರವಿಕುಮಾರ್,ಈರಯ್ಯ ಮಠಪತಿ.ಪ್ರವೀಣ್ ಕುಮಾರ್.  ಶ್ರೀನಿವಾಸ್,ನರೇಂದ್ರ. ದಿನೇಶ್. ಕಾರ್ಯಾಚರಣೆ ನಡೆಸಿದ್ದರು. ಈ ಬಗ್ಗೆ ಆರೋಪಿ ಮತ್ತು ಮಾಲು ಪತ್ತೆ ಕಾರ್ಯದಲ್ಲಿ ಪಾಲ್ಗೊಂಡ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಮಾನ್ಯ ಪೊಲೀಸ್ ಅಧೀಕ್ಷಕರು ಅಭಿನಂದಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Post a Comment

0 Comments