ಹರಿಹರ:ಹರಿಹರ ತಾಲೂಕು ಕೊಕ್ಕನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಡ್ಡದ ತುಮ್ಮಿನಕಟ್ಟೆ ಗ್ರಾಮದಲ್ಲಿ ಹಾದುಹೋಗಿರುವ ಪಾಳ್ಯ -ಮೂಗಿನ ಗೊಂದಿ ರಸ್ತೆ ಹಾಳಾಗಿದ್ದು ಈ ರಸ್ತೆಯು ಎಸ್ ಎಂ ಕೃಷ್ಣ ಅವರ ಸರ್ಕಾರದಲ್ಲಿ ಶಾಸಕರಾಗಿದ್ದ ಡಾಕ್ಟರ್ ನಾಗಪ್ಪನವರ ಅವಧಿಯಲ್ಲಿ ನಿರ್ಮಾಣವಾಗಿದ್ದು ಇಲ್ಲಿಗೆ 22 ವರ್ಷ ವಾಗಿರುತ್ತದೆ.
ತದನಂತರ 2009-10ರಲ್ಲಿ ಆದ ಮಹಾಮಳೆಗೆ ರಸ್ತೆಯು ತೀರಾ ಹಾಳಾಗಿದ್ದು ನಂತರ ಚುನಾಯಿತರಾದ ಶಾಸಕರುಗಳು ಸಂಸದರು ಚುನಾಯಿತ ಜನಪ್ರತಿನಿಧಿಗಳ ನಿರ್ಲಕ್ಷಕ್ಕೆ ಒಳಗಾಗಿರುತ್ತದೆ.
ಗುಡ್ಡದ ತುಮ್ಮಿನಕಟ್ಟೆ ಗ್ರಾಮವು ಗಡಿ ಗ್ರಾಮ ವಾಗಿದ್ದು ಅರಣ್ಯ ಪ್ರದೇಶದಿಂದ ಸುತ್ತುವರಿದಿದೆ ಹಾಗೂ ಹೊನ್ನಾಳಿ, ಹರಿಹರ, ದಾವಣಗೆರೆ ಪಟ್ಟಣಕ್ಕೆ ಹೋಗಲು ಇದೊಂದೇ ರಸ್ತೆಯನ್ನು ಅವಲಂಬಿತವಾಗಿದೆ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆಯು ಸರಿಯಾದ ಸಮಯದಲ್ಲಿ ತಲುಪದಿರುವುದರಿಂದ ಶೈಕ್ಷಣಿಕ ವ್ಯವಸ್ಥೆಗೆ ಹಿನ್ನಡೆಯಾಗಿದೆ ಮತ್ತು ಕೃಷಿ ಆರೋಗ್ಯ ಸಮಸ್ಯೆಗಳಿಗೆ ದಿನಂಪ್ರತಿ ಓಡಾಡುವ ಸಾರ್ವಜನಿಕರು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ, ಸರ್ಕಾರಕ್ಕೆ ಹಿಡಿಶಾಪ ಹಾಕಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಸಂಬಂಧಪಟ್ಟವರು ಈ ಕೂಡಲೇ ಗಮನಹರಿಸಬೇಕು ಇಲ್ಲದೆ ಹೋದರೆ ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ ..
ಇಂತಿ
ಗುಡ್ಡದ ತುಮ್ಮಿನಕಟ್ಟೆ ಗ್ರಾಮಸ್ಥರು
0 Comments