ಹರಿಹರ:ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ದೇಶನದಂತೆ ಅಭಿಯಾನ ಅನುಷ್ಠಾನದ ಬಗ್ಗೆ ಜಾಗೃತಿ ಮೂಡಿಸಲು ಹರಿಹರ ತಾಲ್ಲೂಕು ಮಟ್ಟದ ಎಲ್ಲಾ ಸರ್ಕಾರಿ ಕಚೇರಿ, ಶಾಲಾ-ಕಾಲೇಜು, ಗ್ರಾಮಪಂಚಾಯ್ತಿ, ಅಂಗನವಾಡಿ, ಸಂಘ- ಸಂಸ್ಥೆಗಳು ಪತ್ರಿಕಾ ಮತ್ತು ದೃಶ್ಯ ಮಾಧ್ಯಮದ ಸಹಯೋಗದೊಂದಿಗೆ ಇಂದು ಬೆಳಿಗ್ಗೆ 8.39 ಕ್ಕೆ ಹರಿಹರ ನಗರದ ಗಾಂಧಿ ಮೈದಾನದಿಂದ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
"ಹರ್ ಘರ್ ತಿರಂಗಾ" ಅಭಿಯಾನ ಅನುಷ್ಟಾನದ ಜಾಥಾ ಕಾರ್ಯಕ್ರಮವು ನಗರದ ಪಿ.ಬಿ ರಸ್ತೆ ಮೂಲಕ ಕೆ.ಇ.ಬಿ ಬೆಸ್ಕಾಂ ಕಚೇರಿ ಮಾರ್ಗವಾಗಿ ಹರಿಹರೇಶ್ವರ ದೇವಸ್ಥಾನದ ವರೆಗೆ.
ಹರಿಹರೇಶ್ವರ ದೇವಸ್ಥಾನದಿಂದ ಬೊಂಗಾಳೆ ವೃತ್ತ ತಲುಪಿ ಆ ಮಾರ್ಗವಾಗಿ ಎಸ್.ಜೆ.ವಿ.ಪಿ ಕಾಲೇಜು ವರೆಗೆ ತೆರಳಿ ಅಲ್ಲಿಂದ ಹಳೇ ಪಿ.ಬಿ ರಸ್ತೆ ಮಾರ್ಗದಿಂದ ಮತ್ತೆ ಗಾಂಧಿ ಮೈದಾನದವರೆಗೆ ತಾಲ್ಲೂಕು ಮಟ್ಟದ ಎಲ್ಲ ಅಧಿಕಾರಿಗಳ ಉಪಸ್ಥಿತಿಯಲ್ಲಿ ಅಭಿಯಾನ ಜಾಥಾವನ್ನು ನಡೆಸಲಾಯಿತು.
ಈ ಅಭಿಯಾನ ಜಾಥಾ ಕಾರ್ಯಕ್ರಮದ ಸಂದರ್ಭದಲ್ಲಿ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು,ಶಾಲಾ- ಕಾಲೇಜು ಅಧಿಕಾರಿಗಳು/ಶಿಕ್ಷಕರು/ವಿದ್ಯಾರ್ಥಿಗಳು /ನಗರಸಭೆಯ ಅಧ್ಯಕ್ಷರು ಸೇರಿದಂತೆ ಸರ್ವ ಸದಸ್ಯರು ಮತ್ತು ಮಾಜಿ ಸದಸ್ಯರು.ಆಶಾ ಅಂಗನವಾಡಿ ಕಾರ್ಯಕರ್ತರು,ಪೌರ ಕಾರ್ಮಿಕರು,ಕನ್ನಡಪರ ಸಂಘಟನೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು,ವಿವಿಧ ಸಂಘಟನೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಮತ್ತು ಸಮಸ್ಯೆ ದೇಶಾಭಿಮಾನಿಗಳು ಈ ಅಭಿಯಾನ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
"ಹರ್ ಘರ್ ತಿರಂಗಾ" ಅಭಿಯಾನ ಅನುಷ್ಠಾನದ ಜಾಥಾ ಕಾರ್ಯಕ್ರಮ ಸಮಸ್ತ ದೇಶಭಕ್ತರು ತಮ್ಮ ಕಣ್ಣುಗಳಲ್ಲಿ ಪುಷ್ಪ ನಮನ ಸಲ್ಲಿಸುತ್ತಿರುವುದು ದೃಶ್ಯ ಕಂಡುಬಂದಿತ್ತು.ಅತ್ಯಂತ ಯಶಸ್ವಿಯಾಗಿ ಅಭಿಯಾನ ಜಾಥಾ ಕಾರ್ಯಕ್ರಮ ನಡೆಯಿತು.
0 Comments