ಹರಿಹರ:ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಗೆ ಸಂಬಂಧಿಸಿದ ಮಿಟ್ಲಕಟ್ಟೆ ಗ್ರಾಮದ ಹತ್ತಿರವಿರುವ ಸ್ಟೇಜ್ ಹೋಟೆಲ್ ಮೇಲೆ ನಿನ್ನೆ ತಡ ರಾತ್ರಿ ದಾವಣಗೇರಿ ಪೊಲೀಸರಿಂದ ದಾಳಿ ನಡೆದಿದೆ.ಪೋಲಿಸರ ಎಂಟ್ರಿಗೆ ಬೆಚ್ಚುಬಿದ್ದ ನಶೆಯಲ್ಲಿದ್ದ ಯುವಕ -ಯುವತಿಯರು ಹೋಟೆಲ್ ನಿಂದ ಕಾಲ್ಕಿತ್ತಿದ್ದಾರೆ.
ಮಧ್ಯ ರಾತ್ರಿ 2ಗಂಟೆಯಾಗಿದ್ದರೂ ಪಾರ್ಟಿ ಜೋರಾಗಿ ನಡೆಯುತ್ತಿತ್ತು. ಡಿಜಿ ಸೌಂಡ್ ಜೋರಾಗಿ ಹಾಕಿಕೊಂಡು ಯುವಕ- ಯುವತಿಯರು ಮದ್ಯದ ನಶೆಯಲ್ಲಿ ಮೈಮರೆತು ಕುಣಿದು ಕುಪ್ಪಳಿಸುತ್ತಿದ್ದರು.ವಿಚಿತ್ರ ನೋಡಿ ಈ ಹೋಟೆಲ್ ಇರುವುದು ಹರಿಹರ ತಾಲ್ಲೂಕಿನ ಮಿಟ್ಲಕಟ್ಟೆ ಗ್ರಾಮದಲ್ಲಿ.
ಈ ಹೋಟೆಲ್ ನಲ್ಲಿ ತಡರಾತ್ರಿ ವರೆಗೂ ಇದೇ ರೀತಿ ಮದ್ಯದ ಪಾರ್ಟಿ ನಡೆಯುತ್ತಿದೆ ಎಂಬ ಮಾಹಿತಿಯನ್ನು ಅದೇ ಗ್ರಾಮದ ನಿವಾಸಿಗಳು ಪೊಲೀಸರಿಗೆ ತಿಳಿಸಿದ್ದಾರೆ.ಗ್ರಾಮಸ್ಥರ ಖಚಿತ ಮಾಹಿತಿಯ ಮೇಲೆ ಪೊಲೀಸರು ನಿನ್ನೆ ತಡ ರಾತ್ರಿ ದಾಳಿ ನಡೆಸಿದ್ದಾರೆ.
ಒಂದು ಅನುಮಾನದ ಪ್ರಕಾರ ಈ ಪಾರ್ಟಿಯಲ್ಲಿ ಯುವಕ-ಯುವತಿಯರು ನಶೆಯಲ್ಲಿದ್ದರು ಅಂದರೆ ಇವರು ಮಾದಕ ವಸ್ತುವನ್ನ ಬಳಸಿದ್ದರು ಎಂಬ ಶಂಕೆ ವ್ಯಕ್ತವಾಗಿದೆ.
ಹಾಗಾದರೆ ಇವರಿಗೆ ಮಾದಕ ವಸ್ತು ದೊರೆತಿದ್ದು ಹೇಗೆ ? ಇವರಿಗೆ ಮಾದಕ ವಸ್ತುವನ್ನು ಪೂರೈಕೆ ಮಾಡುತ್ತಿರುವುದು ಯಾರು? ಈ ಬಗ್ಗೆ ಸ್ಥಳೀಯ ಪೊಲೀಸ್ ಇಲಾಖೆಯವರಿಗೆ ಮಾಹಿತಿ ಇಲ್ಲವೇ ?ಇದ್ದರು ಇದುವರೆಗೂ ಸುಮ್ಮನಿದ್ದರೆ?
ಕಾನೂನನ್ನು ಉಲ್ಲಂಘಿಸಿ ತಡರಾತ್ರಿವರೆಗೂ ಮದ್ಯದ ನಶೆಯಲ್ಲಿ ಡಿಜಿ ಸೌಂಡ್ ಜೋರಾಗಿ ಬಳಸಿಕೊಂಡು ಯುವಕ- ಯುವತಿಯರು ಕುಣಿದು ಕುಪ್ಪಳಿಸುತ್ತಿದ್ದರು ಇವರನ್ನ ಬಂಧಿಸದೆ ಕೇವಲ ಎಚ್ಚರಿಕೆ ನೀಡಿ ಕಳುಹಿಸಿರುವ ಹಿಂದಿನ ಮರ್ಮವೇನು ?ಕೂಡಲೇ ಇವರೆಲ್ಲರನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು ಅಲ್ಲವೇ ?ಏಕೆಂದರೆ ಮಾದಕ ವಸ್ತು ಬಳಕೆ ಆಗಿದೆ ಎಂಬ ಶಂಕೆ ವ್ಯಕ್ತವಾಗಿರುವ ಕಾರಣ ಇವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು.ಮತ್ತು ಇವರಿಗೆ ಮಾದಕ ವಸ್ತು ಹೇಗೆ ಎಲ್ಲಿಂದ ಪೂರೈಕೆಯಾಗುತ್ತಿದೆ ಎಂಬುದನ್ನು ತನಿಖೆ ಒಳಪಡಿಸಬೇಕು ಇದು ಪೊಲೀಸ್ ಇಲಾಖೆಯ ಜವಾಬ್ದಾರಿಯಾಗಿದೆ.
ಹಲವು ಮಠಗಳ ಸಂಗಮ, ದೇವ ನಗರಿ,ಸುಸಂಸ್ಕೃತರು ವಾಸಮಾಡುವಂಥ ದಾವಣಗೇರಿ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇಂತಹ ಘಟನೆ ನಡೆದಿದ್ದು ಮಾತ್ರ ಅತ್ಯಂತ ಅಸಹ್ಯವೆನಿಸುತ್ತಿದೆ.
ಪ್ರತಿ ವೀಕೆಂಡ್ ನಲ್ಲಿ ಅಂದರೆ ಶುಕ್ರವಾರ ಶನಿವಾರ ಭಾನುವಾರ ಈ ಮೂರು ರಾತ್ರಿಗಳು ಕಾನೂನುಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಪಾರ್ಟಿಯನ್ನ ನಡೆಸಲಾಗುತ್ತಿದೆ ಎಂಬ ಮಾಹಿತಿಯನ್ನು ಸ್ಥಳೀಯರು ನಮ್ಮ ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ .ಈ ಪಾರ್ಟಿಯ ಆಯೋಜಕರು ಹೋಟೆಲ್ ನವರೇ ಆಗಿದ್ದಾರೆ.ಕೇವಲ ಜೋಡಿಗಳಿಗೆ ಮಾತ್ರ ಪಾರ್ಟಿಗೆ ಪ್ರವೇಶ ನೀಡಲಾಗುತ್ತಿತ್ತು ಎಂಬ ವಿಷಯ ತಿಳಿದು ಬಂದಿದೆ.
ಸಂಬಂಧಿಸಿದ ಇಲಾಖೆಯ ಮೇಲಾಧಿಕಾರಿಗಳು ನಿನ್ನೆ ನಡೆದ ಘಟನೆಗೆ ಸಂಬಂಧಿಸಿದಂತೆ ಸಮಗ್ರವಾದ ತನಿಖೆಯನ್ನು ನಡೆಸಬೇಕು .ಏಕೆಂದರೆ ಪಾರ್ಟಿಯಲ್ಲಿ ಮಾದಕವಸ್ತು ಬಳಕೆಯಾಗಿದೆ ಎಂಬ ಶಂಕೆ ವ್ಯಕ್ತವಾದ ಕಾರಣ .ಮಾದಕ ವಸ್ತು ಪೂರೈಕೆ ಮಾಡುತ್ತಿರುವ ರನ್ನ ಪತ್ತೆಹಚ್ಚಬೇಕಾದರೆ ನಿನ್ನೆ ದಿನ ಪಾರ್ಟಿಯಲ್ಲಿ ಪಾಲ್ಗೊಂಡವರನ್ನು ಕೂಡಲೇ ವೈದ್ಯಕೀಯ ಪರೀಕ್ಷೆ ನಡೆಸಬೇಕು ಹಾಗೂ ಮಾದಕ ವಸ್ತು ಪೂರೈಕೆ ಆಗುತ್ತಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಬೇಕು ಆ ಮೂಲಕ ದೇವನಗರಿಯ ಸಂಸ್ಕೃತಿಯನ್ನು ಉಳಿಸಬೇಕು ಆ ಜವಾಬ್ದಾರಿ ಸಂಬಂಧಿಸಿದ ಇಲಾಖೆಯ ಮೇಲಿದೆ .
ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 Comments