ಯುವಕರೇ ಎಚ್ಚರ.! ಹರಗನಹಳ್ಳಿ ಚೆಕ್ ಡ್ಯಾಮ್ ಕಡೆ ತೆರಳಬೇಡಿ.

ಹರಿಹರ :ಹರಿಹರ ತಾಲ್ಲೂಕು ಹರಗನಹಳ್ಳಿ ಗ್ರಾಮದ ಹತ್ತಿರವಿರುವ ಚೆಕ್ ಡ್ಯಾಂ ಅತ್ಯಂತ ಅಪಾಯಕಾರಿಯಾಗಿದ್ದು ಇಲ್ಲಿ ಪ್ರತಿವರ್ಷ ಸಾವುಗಳು ಸಂಭವಿಸುತ್ತಿವೆ .

ಸೆಲ್ಪಿ ತೆಗೆದುಕೊಳ್ಳುವ ಹುಚ್ಚಾಟದಿಂದ ಈ ಚೆಕ್ ಡ್ಯಾಂ ಮೇಲೆ ಭೋರ್ಗರೆದು ಹರಿಯುತ್ತಿರುವ ನೀರಿನ ರಭಸದ ಮುಂದೆ ನಿಂತು ಫೋಟೊ ಕ್ಲಿಕ್ಕಿಸಿಕೊಳ್ಳುವ ಆತುರದಲ್ಲಿ ತಮ್ಮ ಅಮೂಲ್ಯವಾದ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ.

ಚೆಕ್ ಡ್ಯಾಮ್ ನ ಮೇಲೆ ವರ್ಷಪೂರ್ತಿ ನೀರು ಹರಿಯುತ್ತಿರುವ ಕಾರಣ ಪಾಚಿ ಕಟ್ಟಿದಂತಾಗಿ ಕಾಲಿಟ್ಟರೆ ಜಾರುವಂತಹ ಪರಿಸ್ಥಿತಿಯಿದೆ ಅಂಥದರಲ್ಲೇ ಯುವಕರು ಸೆಲ್ಫಿ ಹುಚ್ಚಾಟದಿಂದ ಇಲ್ಲದ ಮಂಗಾಟವನ್ನು ಮಾಡುವ ಮೂಲಕ ತಮ್ಮ ಜೀವಕ್ಕೆ ಅಪಾಯ ತಂದುಕೊಳ್ಳುತ್ತಿದ್ದಾರೆ .ಅಪಾಯದಿಂದ ಪಾರಾಗಿ ಬಂದವರ ಮೇಲೆ ಅನುಮಾನಗಳು ಹುಟ್ಟುವಂತೆ ಮಾಡುತ್ತಿದ್ದಾರೆ .ಸ್ನೇಹಿತರ ಜತೆ ತೆರಳಿದ್ದೆ ತಪ್ಪು ಎನ್ನುವಂತಾಗುತ್ತದೆ ಇವರ ಸೆಲ್ಪಿ  ಹುಚ್ಚು.
ಈ ಚೆಕ್ ಡ್ಯಾಂ ಬಳಿ ಪ್ರತಿವರ್ಷ ಸಾವು ನೋವುಗಳು ಸಂಭವಿಸುತ್ತಿವೆ ಹದಿಹರೆಯದ ಯುವಕರು ತಮ್ಮ ಅಮೂಲ್ಯ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ.ತಂದೆ ತಾಯಿಗೆ ಆಸರೆಯಾಗಿ ಬದುಕಿ ಬಾಳಬೇಕಾದ  ಯುವಕರು ಸೆಲ್ಫಿ ಹುಚ್ಚಿನ ವ್ಯಾಮೋಹಕ್ಕೆ ಸಿಲುಕಿ ಪಾಚಿ ಕಟ್ಟಿದ ಚೆಕ್ ಡ್ಯಾಮಿನ ಮೇಲೆ ನಿಂತು ಕಾಲು ಜಾರಿ ತದನಂತರ ತಮ್ಮ ಪ್ರಾಣವನ್ನ ಕಳೆದುಕೊಳ್ಳುತ್ತಿದ್ದಾರೆ.ಜೊತೆಗೆ ಹೋದವರ ಮೇಲೆ ಸಮಾಜ ಬೊಟ್ಟು ತೋರಿಸಿ ಮಾತನಾಡುವಂತೆ ಮಾಡುತ್ತಿದ್ದಾರೆ.

ಈಗಾಗಲೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮುಂಜಾಗ್ರತ ಕ್ರಮವಾಗಿ ಈ ಚೆಕ್ ಡ್ಯಾಂ ಸುತ್ತ ಪ್ರದೇಶವನ್ನು ನಿಷೇಧಿತ ವಲಯ ಎಂದು ನಾಮಫಲಕ ಹಾಕಬೇಕು .ಸಾರ್ವಜನಿಕರಿಗೆ ಪ್ರವೇಶ ನಿಷೇಧ ಎಂಬ ಎಚ್ಚರಿಕೆಯ ನೀಡುವಂತಹ ಜಾಗೃತಿ ಫಲಕ ಹಾಕಬೇಕು,ಹರಗನಹಳ್ಳಿ ಗ್ರಾಮದಲ್ಲಿ ಚೆಕ್ ಡ್ಯಾಂ ನೀರಿನಲ್ಲಿ ಬಿದ್ದ ವ್ಯಕ್ತಿ ರಕ್ಷಿಸುವಂಥ ಮುಂಜಾಗ್ರತಾ ಸಾಮಗ್ರಿಗಳನ್ನೊಳಗೊಂಡ ರಕ್ಷಣಾ ಕಿಟ್ ಗಳನ್ನು ಸದಾ ಜಾಗೃತವಾಗಿ ಇಡಬೇಕು.ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ಇಡುವ ಮೂಲಕ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಬಹುದು ಎಂಬುದು ನಮ್ಮ ಮಾಧ್ಯಮದ ಆಶಯವಾಗಿದೆ .
ಇನ್ನು ಮುಂದಾದರೂ ಸಂಬಂಧಿಸಿದ ಜವಾಬ್ದಾರಿ ಸ್ಥಾನದಲ್ಲಿರುವ  ಇಲಾಖೆಯ ಅಧಿಕಾರಿಗಳು ಹರಗನಹಳ್ಳಿ ಚೆಕ್ ಡ್ಯಾಂ ಸುತ್ತ ನಿಷೇಧಿತ ವಲಯ ಎಂಬ ಎಚ್ಚರಿಕೆಯ ನಾಮಫಲಕವನ್ನೂ ಹಾಕುವತ್ತ ಮತ್ತು ನೀರಿಗೆ ಬಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡುವ ಸಲಕರಣೆಗಳನ್ನು ಇಡುವತ್ತ  ಕಾರ್ಯಪ್ರವೃತ್ತರಾಗುತ್ತಾರೆ ಕಾದು ನೋಡಬೇಕಾಗಿದೆ.

ಕಳೆದ ಒಂದು ವಾರಗಳ ಹಿಂದೆ ಬದುಕಿ ಬಾಳುವಂತಹ ಯುವಕರು ಸೆಲ್ಫಿ ಹುಚ್ಚಾಟ ದಿಂದಲೋ ಅಥವಾ -- ತಮ್ಮ ಅತ್ಯಮೂಲ್ಯವಾದ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.ಇವರ ಸಾವಿನ ಹಿಂದೆ ಅನೇಕ ಅನುಮಾನಗಳನ್ನು ಸಾರ್ವಜನಿಕರ ವಲಯದಲ್ಲಿ ಹುಟ್ಟುಹಾಕಿದ್ದಾರೆ .ಮುಂದಿನ ದಿನದಲ್ಲಿ ಈ ರೀತಿ ಆಗದಂತೆ  ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮುಂಜಾಗ್ರತ ಕ್ರಮ ತೆಗೆದುಕೊಳ್ಳುವುದು ಅವಶ್ಯಕವಾಗಿದೆ.


Post a Comment

0 Comments