ಮಂದಾರ ನ್ಯೂಸ್, ಹರಿಹರ: ಹರಿಹರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಶಾಸಕ ಬಿ.ಪಿ ಹರೀಶ್ ಅವರು ನಾಳೆ ಮಧ್ಯಾಹ್ನ 11 ಗಂಟೆಗ ನಾಮಪತ್ರವನ್ನ ತಾಲೂಕು ಚುನಾವಣೆ ಅಧಿಕಾರಿಗಳಿಗೆ ಸಲ್ಲಿಸಲಿದ್ದಾರೆ.
ಕಾರ್ಯಕರ್ತರು ಅಪಾರ ಸಂಖ್ಯಾ ಅಭಿಮಾನಿಗಳೊಂದಿಗೆ ನಗರದ ನೀರಾವರಿ ಇಲಾಖೆಯ ಗಣೇಶನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅಲ್ಲಿಂದಲೇ ಬೃಹತ್ ಮೆರವಣಿಗೆ ನಡಸಿ ಮಧ್ಯಾಹ್ನ 11 ಗಂಟೆಗೆ ತಾಲೂಕು ಚುನಾವಣೆ ಅಧಿಕಾರಿಗಳಿಗೆ ನಾಮಪತ್ರವನ್ನು ಸಲ್ಲಿಸಲಿದ್ದಾರೆ.
ನಾಳೆಯ ನಾಮಪತ್ರ ಸಲ್ಲಿಕೆಯ ಕಾರ್ಯಕ್ರಮದಲ್ಲಿ ಸರಿಸುಮಾರು ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಸೇರುವ ನಿರೀಕ್ಷೆ ಇದೆ.
0 Comments