ಮಂದಾರ ನ್ಯೂಸ್, ರಾಣೆಬೆನ್ನೂರು : ಹಾವೇರಿ ರಾಣೆಬೆನ್ನೂರು ತಾಲೂಕ ದಂಡಾಧಿಕಾರಿಗಳಾದ ಹನುಮಂತಪ್ಪ ಶಿರಹಟ್ಟಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ, ಮರಳು, ಮಣ್ಣು, ಕಲ್ಲು ಕಡಿ ರಾಣೆಬೆನ್ನೂರು ಗ್ರಾಮಾಂತರ ಭಾಗದಲ್ಲಿ ರಾಜಾರೋಷವಾಗಿ ಯಾರ ಭಯವಿಲ್ಲದೆ ನಡೆಯುತ್ತಿದ್ದರೂ ತಾಲೂಕು ಡಂಡಾಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿದ್ದರು.
ಮಣ್ಣು ಸಾಗಾಟ ಮಾಡುವ ಲಾರಿಯ ಮಾಲೀಕನಿಗೆ ಹಾಗೂ ಚಾಲಕನಿಗೆ 20 ಸಾವಿರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದು ಇಂದು ತಾಲೂಕ ದಂಡಾಧಿಕಾರಿ ಹನುಮಂತಪ್ಪ ಶಿರಹಟ್ಟಿ ಇಂದು ಲಾರಿಯ ಚಾಲಕನಿಕದ 12 ಸಾವಿರ ರೂಪಾಯಿಗಳನ್ನು ಹಣವನ್ನು ಪಡೆಯುವ ಸಮಯದಲ್ಲಿ, ಲೋಕಾಯುಕ್ತರು ಬಲೆಗೆ ಬಿದ್ದಿದ್ದಾರೆ ಎಂಬ ಮಾಹಿತಿ ಬಂದಿದೆ.
0 Comments