ಪೊಲೀಯೋ ಮುಕ್ತ ಭಾರತ : ಬಿ. ಪಿ ಹರೀಶ್.


ಮಂದಾರ ನ್ಯೂಸ್, ಹರಿಹರ : ಹರಿಹರದ  ಗುರುಭವನ ದಿಂದ ತಾಲೂಕು ಆಡಳಿತ ಮತ್ತು ತಾಲೂಕ ಪಂಚಾಯತಿ  ಆರೋಗ್ಯ ಇಲಾಖೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ನಗರಸಭೆ. ಇವರ ಸಂಯುಕ್ತಾಶ್ರಾಯದಲ್ಲಿ ಪ್ರಾರಂಭವಾದ ರಾಷ್ಟ್ರೀಯ ಪಲ್ಸ್ ಪೋಲಿಯೋ ಜಾಥ ಕಾರ್ಯಕ್ರಮದ ಚಾಲನೆಯನ್ನು ಮಾನ್ಯ ಶಾಸಕರಾದ ಬಿ ಪಿ ಹರೀಶ್ ರವರು ನೆರವೇರಿಸಿ ಮಾತನಾಡಿ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ದೇಶಗಳಲ್ಲಿ ಪೋಲಿಯೋ ಪ್ರಕರಣಗಳು ಇರುವುದರಿಂದ ಆ ದೇಶದಿಂದ ಪೋಲಿಯೋ ಯುಕ್ತ ಮಗು ನಮ್ಮ ದೇಶಕ್ಕೆ ಬಂದು ಪೋಲಿಯೋ ಹರಡುವ ಸಾಧ್ಯತೆಗಳಿವೆ ಆದುದರಿಂದ ತಪ್ಪದೇ ಐದು ವರ್ಷದ ಒಳಗಿನ ಎಲ್ಲಾ ಮಕ್ಕಳಿಗೂ ಪೋಲಿಯೋ ಹನಿ ಹಾಕಿಸಿ. ನಮ್ಮ ದೇಶ ಪೋಲಿಯೋ ಮುಕ್ತ ದೇಶವಾಗಿದೆ ಇದೇ ರೀತಿ ಮುಂದುವರಿಸಿಕೊಂಡು ಹೋಗೋಣ ಎಂದು ಹೇಳಿದರು.
            ಈ ಕಾರ್ಯಕ್ರಮದಲ್ಲಿ ತಹಸಿಲ್ದಾರಾದ ಗುರುಬಸವರಾಜ್. ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾಕ್ಟರ್ ಅಬ್ದುಲ್ ಖಾದರ್. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಿ ದುರುಗಪ್ಪ. ಸಿ ಡಿ ಪಿ ಓ  ರವರದ ಶ್ರೀಮತಿ ಪ್ರಿಯದರ್ಶಿನಿ. ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು. ಶಾಲಾ ಮಕ್ಕಳು ಉಪಸ್ಥಿತರಿದ್ದರು

Post a Comment

0 Comments