ಮಂದಾರ ಜ್ವಾಲೆ : ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಶಂಕಿತ ಉಗ್ರರ ಬಂಧನ ಕಾರ್ಯಾಚರಣೆಯಲ್ಲಿ ದಾವಣಗೆರೆ ಪೊಲೀಸರು ಮತ್ತು ಗುಪ್ತಚರ ಇಲಾಖೆಯು ಕಾರ್ಮಿಕ ಸೋಗಿನಲ್ಲಿ ಇದ್ದ ಸುಹೇಲ್ (20) ಶಂಕಿತ ಉಗ್ರನನ್ನು ಬಂಧಿಸಿದ್ದಾರೆ.
ಪಾಕಿಸ್ತಾನ ಮೂಲದ ವ್ಯಕ್ತಿಗಳೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕದಲ್ಲಿದ್ದು, ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ಹೂಡಿದ್ದರು ಎಂಬ ಆರೋಪದ ಮೇಲೆ ಈ ಬಂಧನ ನಡೆದಿದೆ.
*ಪ್ರಮುಖ ಮಾಹಿತಿಗಳು:*
ಬಂಧಿತ: ಯುಪಿ ಮೂಲದ ಸುಹೇಲ್ (20) ಶಂಕಿತ ಉಗ್ರನನ್ನು ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿ ಬನ್ನಿಕೊಡು ಗ್ರಾಮದ ಹತ್ತಿರ ಬಂಧಿಸಲಾಗಿದೆ. *ಆರೋಪ:* ಇನ್‌ಸ್ಟಾಗ್ರಾಮ್ ಸೇರಿದಂತೆ ಇತರೆ ಜಾಲತಾಣಗಳ ಮೂಲಕ ಪಾಕಿಸ್ತಾನ ಮೂಲದ ‘ರಾಣಾಭಾಯ್’ ಎಂಬಾತನ ಸಂಪರ್ಕದಲ್ಲಿದ್ದ ರಾಜ್ಯದಲ್ಲಿ ಯುವಕರನ್ನು ಪ್ರಚೋದಿಸಿ, ರಾಷ್ಟ್ರ ವಿರೋಧಿ ಚಟುವಟಿಕೆಗಳಿಗೆ ಸಂಚು ರೂಪಿಸಿದ್ದ.
*ಕಾರ್ಯಾಚರಣೆ:* ಕೇಂದ್ರ ಗುಪ್ತಚರ ಸಂಸ್ಥೆಗಳಿಂದ (NIA) ದೊರೆತ ಖಚಿತ ಮಾಹಿತಿಯ ಮೇರೆಗೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶೇಖರ್ ಹೆಚ್ ಟಿ. ಅವರ ಮಾರ್ಗದರ್ಶನದಲ್ಲಿ ಹರಿಹರ ಗ್ರಾಮಾಂತರ ಡಿವೈಎಸ್ಪಿ ಬಿ ಎಸ್ ಬಸವರಾಜ್ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ,
ಜೂನ್ ಮೊದಲ ವಾರದಲ್ಲಿ ದಾವಣಗೆರೆಯಲ್ಲಿ ಇಬ್ಬರೂ ಉಗ್ರರನ್ನು ಬಂಧಿಸಿದ್ದರು. ಇದೀಗ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದು ಬನ್ನಿಕೊಡ ಗ್ರಾಮದಲ್ಲಿ ಉತ್ತರ ಪ್ರದೇಶ ಮೂಲದ ವ್ಯಕ್ತಿ ಒಬ್ಬನನ್ನು ಬಂಧಿಸುವ ಮೂಲಕ ಒಟ್ಟು ಮೂರು ಜನ ಶಂಕಿತ ಉಗ್ರನನ್ನು ಬಂಧಿಸಿದಂತಾಗಿದೆ.
0 Comments