21 ದಿನಗಳ ಕಾಲ ಹರಿಹರದಲ್ಲಿ ಹಿಂದೂ ಮಹಾಗಣಪತಿ ಸಂಭ್ರಮ! ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ; ಅದ್ದೂರಿ ವಿಸರ್ಜನಾ ಶೋಭಾಯಾತ್ರೆಗೆ ಸಿದ್ಧತೆ.



ಹರಿಹರ, ಸೆ.14: ನಗರದ ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಹಿಂದೂ ಜಾಗರಣ ವೇದಿಕೆ–ಹಿಂದೂ ಮಹಾಗಣಪತಿ, ಹರಿಹರ ವತಿಯಿಂದ 7ನೇ ವರ್ಷದ ಹಿಂದೂ ಮಹಾಗಣಪತಿ ಪ್ರತಿಷ್ಠಾಪನಾ ಕಾರ್ಯಕ್ರಮ ಸೋಮವಾರ ನಡೆಯಲಿದೆ.

ಸೆ.14ರಿಂದ ಅ.4ರವರೆಗೆ ಒಟ್ಟು 21 ದಿನಗಳ ಕಾಲ ಹಿಂದೂ ಮಹಾಗಣಪತಿಯನ್ನು ಪ್ರತಿಷ್ಠಾಪಿಸಲಾಗುತ್ತಿದ್ದು, ಈ ಅವಧಿಯಲ್ಲಿ ಪ್ರತಿದಿನ ದೇಶೀಯ ಸಂಸ್ಕೃತಿ, ಪರಂಪರೆ ಹಾಗೂ ಸಾಂಪ್ರದಾಯಿಕ ಕಲೆಯನ್ನು ಬಿಂಬಿಸುವ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಬಾರಿ ವಿಶೇಷವಾಗಿ ಹೆಚ್ಚಿನ ಸಂಖ್ಯೆಯ ಸ್ಥಳೀಯ ಕಲಾವಿದರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಸೆ.19ರಂದು ಮಹಾಗಣಪತಿ ಹೋಮ

ಸೆ.19ರಂದು ಶನಿವಾರ ಬೆಳಗ್ಗೆ 8 ಗಂಟೆಗೆ ನಗರದ ಹೆಟ್ಟಿ ದೇವತೆಗಳ ಸಮ್ಮುಖದಲ್ಲಿ ಮಹಾಗಣಪತಿ ಹೋಮ ಹಾಗೂ ಮಹಾ ಮೃತ್ಯುಂಜಯ ಹೋಮ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಮಿತಿ ಮನವಿ ಮಾಡಿದೆ.
ಈ ಬಾರಿಯ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸುರೇಶ್ ಪೈಲ್ವಾನ್ ಅವರು ಕಾರ್ಯಕ್ರಮದ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾಹಿತಿ ಹಂಚಿಕೊಂಡರು.

ಅದ್ದೂರಿ ವಿಸರ್ಜನಾ ಶೋಭಾಯಾತ್ರೆ

ವಿಸರ್ಜನಾ ಮೆರವಣಿಗೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಡಿಜೆ ವಿಚಾರದಲ್ಲಿ ಇನ್ನೂ ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ. ಜಿಲ್ಲಾಡಳಿತದ ಹೇಳಿಕೆಗಳಲ್ಲಿ ಗೊಂದಲವಿರುವ ಹಿನ್ನೆಲೆಯಲ್ಲಿ ಅಂತಿಮ ನಿರ್ಧಾರದ ಕುರಿತು ಸ್ಪಷ್ಟತೆ ಬಂದಿಲ್ಲ. ಆದರೂ, ಅನೇಕ ಕಲಾ ತಂಡಗಳೊಂದಿಗೆ ವಿಸರ್ಜನಾ ಮೆರವಣಿಗೆಯ ಶೋಭಾಯಾತ್ರೆಯನ್ನು ಅದ್ದೂರಿಯಾಗಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪ್ರಸಾದ ಸಮಿತಿಯ ಅಧ್ಯಕ್ಷ ರಾಜು ರೋಖಡೆ ತಿಳಿಸಿದರು.

₹30 ಲಕ್ಷ ವೆಚ್ಚದಲ್ಲಿ ವೈಭವದ ಗಣೇಶೋತ್ಸವ

ಈ ವರ್ಷದ ಹಿಂದೂ ಮಹಾಗಣಪತಿ ಕಾರ್ಯಕ್ರಮಗಳಿಗೆ ಸುಮಾರು ₹30 ಲಕ್ಷ ವೆಚ್ಚವಾಗಲಿದ್ದು, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಈಗಾಗಲೇ ಪ್ರತಿಷ್ಠಾಪನೆಗೆ ಸಿದ್ಧವಾಗಿರುವ ಗಣಪತಿ ಮೂರ್ತಿಯು ಭಕ್ತರಲ್ಲಿ ವಿಶೇಷ ಭಕ್ತಿ ಮತ್ತು ಆಕರ್ಷಣೆಯನ್ನು ಮೂಡಿಸಿದೆ. ಅದ್ದೂರಿಯಾಗಿ ನಿರ್ಮಿಸಿರುವ ಕಲಾ ಮಂಟಪದಲ್ಲಿ ಪ್ರಥಮ ಪೂಜಿತ ಶ್ರೀ ಗಣೇಶ ಮಹಾರಾಜರನ್ನು ಮಹಾರಾಜರಂತೆ ವಿಶೇಷವಾಗಿ ಅಲಂಕರಿಸಲಾಗಿದ್ದು, ಮಂಟಪದ ಅಲಂಕಾರ ಭಕ್ತರ ಗಮನ ಸೆಳೆಯುತ್ತಿದೆ.

21 ದಿನಗಳ ಕಾಲ ನಡೆಯಲಿರುವ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಮತ್ತು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.
 
ಪತ್ರಿಕಾಗೋಷ್ಠಿಯಲ್ಲಿ...
ಉತ್ಸವ ಸಮಿತಿ ಅಧ್ಯಕ್ಷರಾದ ಸುರೇಶ್ ಪೈ ಚಂದಾಪೂರ್
ಪ್ರಸಾದ ಸಮಿತಿ ಅಧ್ಯಕ್ಷ
ರಾಜು ರೋಖಡೆ
ಪ್ರಚಾರ ಸಮಿತಿ ಅಧ್ಯಕ್ಷ
ಸಂತೋಷ ಗುಡಿಮನಿ
ಗೌರವ ಸಲಹೆಗಾರ ಶೇಖರಗೌಡ ಪಾಟೀಲ್
ಪೂಜಾ ಸಮಿತಿ ಅಧ್ಯಕ್ಷ
ನಾಗರಾಜ್ ಭಂಡಾರಿ
ಮಹಿಳಾ ಸಮಿತಿ ಅಧ್ಯಕ್ಷೆ
ರಶ್ಮಿ ಮೆಹರ್ವಾಡೆ
ಹಿಂದೂ ಮಹಾಗಣಪತಿ ಮುಖಂಡರಾದ
ದಿನೇಶ್ ಹೆಚ್
ಸ್ವಾತಿ ಹನುಮಂತಪ್ಪ
ನಿತ್ಯಾನಂದ
ಸುಧಾ ಸೋಳಂಕಿ
ಮಂಜುನಾಥ ರಟ್ಟಿಹಳ್ಳಿ
ಚಿದಾನಂದ ಕಂಚಿಕೇರಿ
ರವಿಶಂಕರ್
ಆರ್.ಮಂಜುನಾಥ
ಕೃಷ್ಣ ರಾಜೋಳಿ
ಪ್ರಶಾಂತ್ ಹಾರ್ನೆ.ಚಂದನ್ ಮೂರ್ಕಲ್.ಶಿವು.ಅದ್ವೈತ್.ಭರತ್.ಸಚಿನ್.ಮೊಬೈಲ್ ಶಿವು.ಆದಿತ್ಯ.ಮೆಹರ್ವಾಡೆ. ಕಾರ್ತಿಕ್.ಯೋಗೇಶ್.ಸಾಮ್ರಾಟ್.ಸಂತೋಷ್ ಟೈಲ್ಸ್. ಅರುಣ್ ಕುಮಾರ್..ತಿಪ್ಪೇಶ್.ಪಾಲಣ್ಣ.ವಿನಯ್.ವಿನಾಯಕ. ಉಪಸ್ಥಿತರಿದ್ದರು.

Post a Comment

0 Comments