ತುರ್ತು ನಿಗಾ ಘಟಕದಲ್ಲಿ(ಸಂಬಳ ಇಲ್ಲದೆ) 108 ಸಿಬ್ಬಂದಿಗಳು!!

ತುರ್ತು ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 108 ಸಿಬ್ಬಂದಿಗಳು - 03 ತಿಂಗಳಿಂದ ಸಂಬಳವಿಲ್ಲದೇ ತುರ್ತು ನಿಗಾ ಘಟಕದಲ್ಲಿ 108 ಸಿಬ್ಬಂದಿಗಳ ಕುಟುಂಬ*

*108 ಕಥೆ - ವ್ಯಥೆ:-* ತುರ್ತು ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 108 ಸಿಬ್ಬಂದಿಗಳ ಸೇವೆ ನಿಜಕ್ಕೂ ಶ್ಲಾಘನೀಯ, ಆದ್ರೇ ಕರ್ನಾಟಕ ಘನ ಸರ್ಕಾರ ಬರೀತಾ ಧರ್ಮ ವಿಚಾರದಲ್ಲಿ ಕಾಲಹರಣ ಮಾಡುತ್ತಿದ್ದೂ ರಾಜ್ಯದ ಅಭಿವೃದ್ಧಿ ಹಿತದೃಷ್ಟಿ ಕಳೆದುಕೊಂಡಿದೆ. ಹತ್ತಾರು ಕೋಟಿ ವೆಚ್ಚದಲ್ಲಿ ನೆಡೆದ ವಿಧಾನಸಭೆ ಕಲಾಪ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳು ಕೇವಲ ಧರ್ಮಾಧರಿತ ವಿಷಯಕ್ಕೆ ಕಾಲಹರಣ ಮಾಡಿದ್ದೂ ಕೋಟಿಗಟ್ಟಲೆ ಸಾರ್ವಜನಿಕ ತೆರಿಗೆ ಹಣ ಕರ್ನಾಟಕ ಘನ ಸರ್ಕಾರ ನೀರಲ್ಲಿ ಹೋಮ ಮಾಡಿದೆ.

*108 ಸಿಬ್ಬಂದಿಗಳಿಗೆ ಸಂಬಳ ನೀಡದೇ 03 ತಿಂಗಳು ಕಳೆಯುತ್ತಾ ಬಂದಿದ್ದು ಇದನ್ನೇ ನಂಬಿಕೊಂಡ 108 ಸಿಬ್ಬಂದಿಗಳ ಕುಟುಂಬ ಜೀವ - ಜೀವನ ನಿರ್ವಹಣೆ ಮಾಡಲು ಆಕಾಶ ನೋಡುವಂತಾಗಿರುವುದು ಸರ್ಕಾರದ ಬೇಜವಾಬ್ದಾರಿತನಕ್ಕೆ 108 ಸಿಬ್ಬಂದಿಗಳ ಕುಟುಂಬ ಹಿಡಿಶಾಪ ಹಾಕುತ್ತಿದೆ.*

*ಕೊರೊನಾ ಸಂದರ್ಭದಲ್ಲಿ ಸಾವಿರಾರು ಕೋಟಿ ಲೆಕ್ಕ ನೀಡುತ್ತಿರುವ ಕರ್ನಾಟಕ ಘನ ಸರ್ಕಾರ ಸಾರ್ವಜನಿಕ ತೆರಿಗೆ ಹಣ ಸಾರ್ವಜನಿಕರಿಗೆ ಮುಕ್ತವಾಗಿ ಪಾರದರ್ಶಕವಾಗಿ ಜಮಾ ಖರ್ಚು ನೀಡಲು ಕರ್ನಾಟಕ ಸರ್ಕಾರ ವಿಫಲವಾಗಿದೆ. ಯಾರದ್ದೋ ದುಡ್ಡು ಯಲಮ್ಮನ ಜಾತ್ರೆಯಾಗಿದೆ*

*ಇನ್ನಾದರೂ ಕೂಡಲೇ ಕರ್ನಾಟಕ ಘನ ಸರ್ಕಾರ 108 ಸಿಬ್ಬಂದಿಗಳಿಗೆ ತುರ್ತಾಗಿ ವೇತನ ನೀಡುವರೋ ಕಾದು ನೋಡೋಣಾ ✒️ಓಂಕಾರ ಎಸ್. ವಿ. ತಾಳಗುಪ್ಪ*

Post a Comment

0 Comments