4 ಲಕ್ಷದ 29 ಸಾವಿರ ರೂಪಾಯಿಯ ಉಳಿತಾಯ ಬಜೆಟ್ ಮಂಡಿಸಿದ ನಗರಸಭಾಧ್ಯಕ್ಷೆ ಶಾಹೀನಾ ಬಾನು ದಾದಾಪೀರ್ .


ಹರಿಹರ :-ನಗರಸಭೆ ಕಾರ್ಯಾಲಯ ಹರಿಹರ.2022-23 ನೇ ಸಾಲಿನ ಆಯ-ವ್ಯಯವನ್ನು ನಗರಸಭೆಯ ಅಧ್ಯಕ್ಷೆ ಶಾಹೀನಾ ಬಾನು ದಾದಾ ಪೀರ್  ಮಂಡಿಸಿದರು.ಬರೋಬ್ಬರಿ 4 ಲಕ್ಷದ 29 ಸಾವಿರ ರೂಪಾಯಿಗಳ ಉಳಿತಾಯ ಬಜೆಟ್ ಅನ್ನು ಮಂಡಿಸಲಾಯಿತು.
ಹರಿಹರ ನಗರವನ್ನು ಸುಂದರ ನಗರವನ್ನಾಗಿ ಮಾಡುವ ನಿಟ್ಟಿನಲ್ಲಿ ನಗರದ ಪ್ರತಿ ವಾರ್ಡ್ ಗಳಿಗೂ ಅಗತ್ಯ ಮೂಲಭೂತ ಸೌಲಭ್ಯಗಳಾದ ನೀರು, ದೀಪ,ರಸ್ತೆ ,ಚರಂಡಿ,ನೈರ್ಮಲ್ಯ ,ಸಾರ್ವಜನಿಕ ಆಸ್ತಿಪಾಸ್ತಿಯ ರಕ್ಷಣೆ,ನಗರದ ಎಲ್ಲಾ ವೃತ್ತಗಳು ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಕೆ,ಬಯಲು ಶೌಚಾ ಮುಕ್ತ ನಗರವನ್ನಾಗಿ ಮಾಡುವ ಉದ್ದೇಶ,ವಿವಿಧ ಸಮುದಾಯದ ಸ್ಮಶಾಣಗಳ ಕಾಂಪೌಂಡ್ ನಿರ್ಮಾಣ,ಎಲ್ಲಾ ವಾರ್ಡ್ ಗಳಲ್ಲಿ ವಾರ್ಡ್ ಗಳ ವಿವರವನ್ನೊಳಗೊಂಡ ನಾಮಫ ಲಕಗಳನ್ನು ಅಳವಡಿಸುವುದು,ಬೀದಿ ಬದಿ ವ್ಯಾಪಾರಸ್ಥರಿಗೆ ಹೊಸ ಮಾರ್ಕೆಟ್ ನಿರ್ಮಾಣ,ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಹಾಗೂ ಅಂಗವಿಕಲರ ಕಲ್ಯಾಣ ಅಭಿವದ್ಧಿ,ನಗರದಲ್ಲಿ ಹಂದಿಗಳ ನಿರ್ಮೂಲನೆ,ನಗರದ ಪ್ರಮುಖ ರಸ್ತೆಗಳ ಫುಟ್ ಪಾತ್ ನಿರ್ಮಾಣ ,ಕಸ ವಿಲೇವಾರಿ ಮಾಡಲು ಹೊಸ ವಾಹನಗಳ ಖರೀದಿ,ದೇವಸ್ಥಾನ ರಸ್ತೆಗೆ ಲೈಟಿಂಗ್ಸ್ ವ್ಯವಸ್ಥೆ,ಕನ್ನಡ ಭವನ, ಸಾಂಸ್ಕೃತಿಕ ಭವನ, ಕ್ರೀಡಾಭವನ, ಪತ್ರಿಕಾ ಭವನ ನಿರ್ಮಾಣ, ಸೇರಿದಂತೆ ಬರೋಬ್ಬರಿ 4326.73 ಲಕ್ಷಗಳ ಬಜೆಟ್ ಅನ್ನು ಮಂಡಿಸಲಾಯಿತು.
ವಿರೋಧ ಪಕ್ಷದವರ ಯಾವುದೇ ಗದ್ದಲ- ಗೊಂದಲವಿಲ್ಲದೆ ಎಲ್ಲರ ವಿಶ್ವಾಸದಂತೆ ಸಮಗ್ರ ಹರಿಹರ ನಗರ ಅಭಿವೃದ್ಧಿಗೆ ಪೂರಕವಾಗುವಂತಹ ಬಜೆಟ್ ಮಂಡಿಸುವ ಮೂಲಕ "ಹರಿಹರ ನಗರ ಸುಂದರ ನಗರವ"ನ್ನಾಗಿ ಮಾಡುವ ನಿಟ್ಟಿನಲ್ಲಿ ಚುನಾಯಿತ ಎಲ್ಲಾ ಸದಸ್ಯರು ಅಧ್ಯಕ್ಷರು- ಉಪಾಧ್ಯಕ್ಷರು ಮಂಡಿಸಿದ ಬಜೆಟ್ ಗೆ ಕೈ ಜೋಡಿಸಿದರು.
(ಚುನಾಯಿತ ಸದಸ್ಯನಾಗಿ,ನಗರಸಭೆಯ ಉಪಾಧ್ಯಕ್ಷನಾಗಿ ನಗರದ ಪ್ರತಿ ವಾರ್ಡ್ ಗಳಿಗೆ ಪ್ರತಿದಿನ ಬೆಳಿಗ್ಗೆ ಭೇಟಿ ನೀಡಿ ಅಲ್ಲಿ ಬೇಕಾದಂತಹ ಅಗತ್ಯ ಮೂಲಭೂತ ಸೌಲಭ್ಯ ಗಳತ್ತ ಗಮನ ಹರಿಸಿ,ತ್ವರಿತವಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಆ ನಿಟ್ಟಿನಲ್ಲಿ ಇಲಾಖೆಯ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಮೂಲಕ ನಗರದ ಅಭಿವೃದ್ಧಿಗೆ ಸಹಕರಿಸಿ.

ಶ್ರೀ.ವಾಮನಮೂರ್ತಿ.
ಉಪಾಧ್ಯಕ್ಷರು ನಗರಸಭೆ
ಹರಿಹರ.)
(ಅತ್ಯಂತ ಉತ್ತಮವಾದ ಬಜೆಟ್ ನ್ನು ನಗರಸಭೆಯ ಉಪಾಧ್ಯಕ್ಷರಾದ ಶ್ರೀ ವಾಮನ ಮೂರ್ತಿಯವರು ಮಂಡಿಸಿದ್ದಾರೆ.ಪತ್ರಕರ್ತರು ಮತ್ತು ಚುನಾಯಿತ ಸದಸ್ಯರು ನೀಡಿರುವ ಸಲಹೆಗಳಿಗೆ ಮನ್ನಣೆ ನೀಡಿ ಬಜೆಟ್ಟನ್ನು ಮಂಡಿಸಲಾಗಿದೆ.ಹಂದಿಗಳ ನಿರ್ಮೂಲನೆಗೆ ಹೆಚ್ಚಿನ ಆದ್ಯತೆಯನ್ನು ಈ ಬಜೆಟ್ ನಲ್ಲಿ ನೀಡಲಾಗಿದೆ. ಸರ್ವ ಜನಾಂಗದ ಅಭಿವದ್ಧಿ ಈ ಬಜೆಟ್ಟಿ ಹೊಂದಿದೆ .ಬಜೆಟ್ ಮಂಡನೆಯನ್ನು ಅನುಷ್ಠಾನಗೊಳಿಸುವ ಹೆಚ್ಚಿನ ಜವಾಬ್ದಾರಿ ಅಧಿಕಾರಿಗಳದ್ದಾಗಿದ್ದು ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ಮಾಡಿದಾಗ "ಹರಿಹರ ನಗರ ಸುಂದರ ನಗರ" ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ .ಒಟ್ಟಾರೆಯಾಗಿ ಹರಿಹರ ನಗರಸಭೆಯ 2022-23 ನೇ ಬಜೆಟ್ಟಿಗೆ ಸಂಬಂಧಿಸಿದಂತೆ ನಗರಸಭೆಯ ಸದಸ್ಯ ಶಂಕರ್ ಖಟಾವ್ಕರ್  ಕೊಂಡಾಡಿದರು.

ಶಂಕರ್ ಖಟಾವ್ಕರ್ ಸದಸ್ಯರು
ನಗರಸಭೆ 
ಹರಿಹರ)
ನಗರಸಭೆಯಲ್ಲಿ ಈಗಾಗಲೇ ದುರಸ್ತಿಗೊಳ್ಳದ ವಾಹನಗಳು ಹಾಗೆಯೇ ಹಾಳಾಗುತ್ತಿವೆ.ಕೂಡಲೇ ಆ ಎಲ್ಲಾ ವಾಹನಗಳನ್ನು ದುರಸ್ತಿಗೊಳಿಸಿ ಉಪಯೋಗಿಸಿಕೊಳ್ಳುವಂತೆ ನಗರಸಭೆಯ ಮತ್ತೋರ್ವ ಸದಸ್ಯ ದಾದಾ ಖಲಂದರ್ ಸಲಹೆ ನೀಡಿದರು .ಕಳೆದ ಬಜೆಟ್ ನಂತೆ ಕೇವಲ ಆಶ್ವಾಸನೆಯಾಗಿ ಉಳಿಯದೆ,ಅನುಷ್ಠಾನವಾಗುವತ್ತ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಲಿ.ಒಣ ಕಸ -ಹಸಿ ಕಸ ಬೇರ್ಪಡಿಸುವ ಡಬ್ಬಿಗಳನ್ನ ನಗರದ ಇನ್ನೂ ಕೆಲವು ವಾರ್ಡ್ ಗಳಿಗೆ ವಿತರಣೆ ಮಾಡಿಲ್ಲ ಅವುಗಳತ್ತ ಸ್ವಲ್ಪ ಗಮನಹರಿಸಿದರೆ ಒಳಿತು ಎಂದರು.

ದಾದಾ ಖಲಂದರ್ ಸದಸ್ಯರು
ನಗರಸಭೆ
ಹರಿಹರ .)

ಕಳೆದ 3 ಬಜೆಟ್ ನಿಂದ ನಗರದ ವಾರ್ಡ್ ಗಳಿಗೆ ಅನುದಾನ ಬಿಡುಗಡೆಯಾಗುತ್ತಿದೆ. ಆದರೆ ವಾರ್ಡ್ ಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ ,ಕೊನೆಪಕ್ಷ ಯಾವ,ಯಾವ ವಾರ್ಡ್ ಗಳು ಅಭಿವೃದ್ಧಿ ಹೊಂದಿದ್ದಾವೆ, ಯಾವ ವಾರ್ಡ್ ಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಬೇಕಾಗಿದೆ. ಎಂಬುದರ ಕಡೆ ಗಮನ ಹರಿಸುವಂತೆ ಪೌರಾಯುಕ್ತರಿಗೆ ನಗರಸಭಾ ಸದಸ್ಯ ಜಂಬಣ್ಣ ಇವರು ಸಲಹೆ ನೀಡಿದರು.

ಜಂಬಣ್ಣ 
ಸದಸ್ಯರು
ನಗರಸಭೆ 
ಹರಿಹರ )
ನಗರಸಭೆಗೆ ಸಂಬಂಧಿಸಿದಂತೆ ನಗರದಲ್ಲಿ ಅನೇಕ ಆಸ್ತಿಯನ್ನು ಹೊಂದಿದ್ದು, ಕೆಲವರು ನಗರಸಭೆಯ ಆಸ್ತಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ .ಕೂಡಲೇ ಇದನ್ನು ಪತ್ತೆ ಹಚ್ಚಿ ಹದ್ದು ಬಸ್ತ್ ಮಾಡುವಂತೆ ನಗರಸಭೆ ಅಧಿಕಾರಿಗಳಿಗೆ ಚುನಾಯಿತ ಸದಸ್ಯ ವಸಂತ್ ಸಲಹೆ ನೀಡಿದರು.

ವಸಂತ್ 
ಸದಸ್ಯರು 
ನಗರಸಭೆ.ಹರಿಹರ)

ನಗರಸಭೆಯ ಅಧ್ಯಕ್ಷೆ ಶಾಹೀನಾ ಬಾನು ದಾದಾಪೀರ್ ಮಾತನಾಡಿ "ಹರಿಹರ ನಗರವನ್ನು ಸುಂದರ ನಗರ"ವನ್ನಾಗಿ ಮಾಡುವ ನಿಟ್ಟಿನಲ್ಲಿ ಉತ್ತಮವಾದ ಬಜೆಟ್ಟನ್ನು ಮಂಡಿಸಿದ್ದೇವೆ."ಸರ್ವ ಜನಾಂಗ, ಸರ್ವ ಜನರ ಅಭಿವೃದ್ಧಿ" ಈ ಬಾರಿಯ ಬಜೆಟ್ಟಿ ಹೊಂದಿದ್ದು .ನಗರದ ಪ್ರತಿ ವಾರ್ಡಿನ ಜನರಿಗೆ ಅಗತ್ಯ ಮೂಲಭೂತ ಸೌಲಭ್ಯ ಕೊಡಿಸುವ ನಿಟ್ಟಿನಲ್ಲಿ ಬಜೆಟ್ ನ್ನು ತಯಾರಿಸಲಾಗಿದೆ.ನಗರಸಭೆಯ ಅಧ್ಯಕ್ಷರಾಗಿ ಕೇವಲ ಹದಿನೈದು ದಿನದಲ್ಲಿ ಉತ್ತಮವಾದ ಬಜೆಟನ್ನು ಮಂಡಿಸಿದ ತೃಪ್ತಿ ನಮಗಿದೆ.ನಗರಸಭೆಯ ಎಲ್ಲಾ ಪಕ್ಷದ ಚುನಾಯಿತ ಸದಸ್ಯರ ವಿಶ್ವಾಸವನ್ನು ತೆಗೆದುಕೊಂಡು ಸಮಗ್ರ ಹರಿಹರ ನಗರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ.ಜನ ಸಾಮಾನ್ಯರ ಕೆಲಸ ಕಾರ್ಯಗಳು ಶೀಘ್ರವಾಗಿ ವಿಲೇವಾರಿಯಾಗುವಂತೆ ನೋಡಿಕೊಳ್ಳುತ್ತೇನೆ .ಇಂದು ಮಂಡಿಸಿದ ಬಜೆಟ್ ಅನುಷ್ಠಾನಗೊಳ್ಳುವ ನಿಟ್ಟಿನಲ್ಲಿ ನಗರಸಭೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ನಗರದ ಅಭಿವೃದ್ಧಿಗೆ ಸಹಕರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ನೋಡಿಕೊಳ್ಳುತ್ತೇನೆ .ಒಟ್ಟಾರೆಯಾಗಿ ಈ ಬಾರಿ ಮಂಡಿಸಿರುವ ಬಜೆಟ್ ಅತ್ಯುತ್ತಮವಾದ ಬಜೆಟ್ ಆಗಿದೆ ಎಂದು ನಗರಸಭೆಯ ಅಧ್ಯಕ್ಷರು ಬಜೆಟ್ ಕುರಿತು ಗುಣಗಾನ ಮಾಡಿದರು.

ಬಜೆಟ್ ಮಂಡನೆಯ ಸಂದರ್ಭದಲ್ಲಿ ನಗರಸಭಾ ಆಯುಕ್ತೆ ಲಕ್ಷ್ಮೀ ಎಸ್ ,ನಗರಸಭೆಯ ಎಲ್ಲ ಚುನಾಯಿತ ಸದಸ್ಯರು ,ನಾಮ ನಿರ್ದೇಶಿತ ಸದಸ್ಯರುಗಳು ,ನಗರಸಭೆಯ ಅಧಿಕಾರಿ ವರ್ಗದವರು,ಉಪಸ್ಥಿತರಿದ್ದರು .

ಒಟ್ಟಾರೆಯಾಗಿ 2022-23 ನೇ ಸಾಲಿನ ಬಜೆಟ್ ಹರಿಹರದ ಸಮಗ್ರ ಅಭಿವೃದ್ಧಿಯನ್ನು ಹೊಂದಿದ್ದು .ಸುಂದರ ನಗರವನ್ನಾಗಿ ಮಾಡುವ ನಿಟ್ಟಿನಲ್ಲಿ ಪೂರಕವಾದ ಬಜೆಟ್ ಮಂಡಿಸಿದ್ದಾರೆ .ಇಂದು ಮಂಡಿಸಿರುವ ಬಜೆಟ್ ನಂತೆ ಕಾರ್ಯಕ್ರಮಗಳು ಅನುಷ್ಠಾನಗೊಂಡರೆ ಹರಿಹರ ನಗರ ಸುಂದರ ನಗರ೭ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ .

ಪ್ರಕಾಶ್ ಮಂದಾರ 
ಸಂಪಾದಕರು.
8880499904

Post a Comment

0 Comments