:- ಮರಳು ಸಾಗಾಣಿಕೆ ವಿಚಾರದಲ್ಲಿ ಪೆಟ್ರೋಲಿಂಗ್ ನ 7 ಜನ ಪೊಲೀಸ್ ಸಿಬ್ಬಂದಿಗಳನ್ನೂ ಶಿವಮೊಗ್ಗ ಜಿಲ್ಲಾ ರಕ್ಷಾಧಿಕಾರಿಗಳು ಅಮಾನತುಗೊಳಿಸಿ ಆದೇಶಿಸಿದ್ದಾರೆ. ಮರಳು ದಂಧೆಯಲ್ಲಿ ಎಂಜಿಲು ಕಾಸು ತಿನ್ನುವವರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ತೀರ್ಥಹಳ್ಳಿ ಮಾರ್ಗದಿಂದ ಬರುವ ಮರಳು ಲಾರಿಗಳನ್ನ ತಪಾಸಣೆ ಮಾಡುವ ವೇಳೆ ಕರ್ತವ್ಯ ಲೋಪವೆಸಗಿದ ಆರೋಪದ ಮೇರೆಗೆ ಪೆಟ್ರೋಲಿಂಗ್ ನಲ್ಲಿದ್ದ 7 ಜನ ಸಿಬ್ಬಂದಿಗಳನ್ನ ಶಿವಮೊಗ್ಗ ಜಿಲ್ಲಾ ಎಸ್ಪಿ ಡಾ.ಬಿ.ಎಂ.ಲಕ್ಷ್ಮೀಪ್ರಸಾದ್ ಅಮಾನತುಗೊಳಿಸಿ ಆದೇಶಿದ್ದು ಮರಳು ಕಳ್ಳ ಸಾಗಾಣಿಕೆ ಮಾಡುವವರಿಗೂ ಖಡಕ್ ಸಂದೇಶ ರವಾನಿಸಿದ್ದಾರೆ.
ಸುರೇಶ್, ಸುದರ್ಶನ್, ನಾಗರಾಜ್, ಲೋಕೇಶ್, ಗಂಗಾಧರ್, ಕುಮಾರ್ ಮತ್ತು ಬಸಲಿಂಗಪ್ಪ ಅಮಾನತುಗೊಂಡ ಪೆಟ್ರೋಲಿಂಗ್ ವಾಹನದ ಸಿಬ್ಬಂದಿಗಳಾಗಿದ್ದಾರೆ. ನಗರದ ಹೊರಭಾಗದಲ್ಲಿ ಮರಳು ಸಾಗಣೆ ವಾಹನಗಳು ಸೇರಿದಂತೆ ಇನ್ನಿತರೆ ಸರಕು ಸಾಗಣೆ ವಾಹನಗಳನ್ನು ತಡೆದು ದಾಖಲೆ ಪರಿಶೀಲನೆ ನೆಪದಲ್ಲಿ ಹಣ ಪಡೆಯುತ್ತಿದ್ದ ಆರೋಪ ಕೇಳಿಬಂದಿದೆ. ಹಾಗಾಗಿ ಏಳೂ ಸಿಬ್ಬಂದಿಗಳನ್ನು ಎಸ್ಪಿ ಅವರು ಮಾ.14ರಂದೇ ಅಮಾನತುಗೊಳಿಸಿರುವ ಬಗ್ಗೆ ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ✒️ *ಓಂಕಾರ ಎಸ್. ವಿ. ತಾಳಗುಪ್ಪ*
0 Comments