ಮಾಜಿ ಶಾಸಕ ಬೇಳೂರು ಯಾರಿಗೂ ಬೇಡವಾದ ಕೂಸು;ಹರತಾಳು ಹಾಲಪ್ಪ.


ಬೇಳೂರು ಈ ಹಿಂದೆ 2 ಬಾರಿ ಬ್ರಾಹ್ಮಣರು ಮತ್ತು ಲಿಂಗಾಯತರ ಮತಗಳನ್ನು ಪಡೆದು ಶಾಸಕರಾಗಿ ಅವರುಗಳ ತಲೆ ಮೇಲೆ ಕಾಲಿಡಲು ಹೋಗಿ, ಪಕ್ಷ ಇವರನ್ನು ಕೊಚ್ಚೆಗೆ ಎಸೆದ ಕಾರಣ ಇಂದು ಅತಂತ್ರರಾಗಿದ್ದಾರೆ.

*BSY ಹಾಗೂ BYR ಕೃಪೆಯಿಂದ MLA ಆಗಿದ್ದನ್ನು ಮರೆತು ಅವರನ್ನು ಹೀನಾಯವಾಗಿ ನಿಂದಿಸಿದರು.* ತನಗೆ ಸಹಾಯ ಮಾಡಿದವರಿಗೆ ಮೋಸ ಮಾಡುವುದನ್ನೇ ತಮ್ಮ ಗುಣವೆಂದು ತೋರಿಸಿದ್ದಾರೆ. ಬಿಜೆಪಿಯಿಂದ ಗೆದ್ದು ಗೋವಾ, ಹೈದರಾಬಾದ್ ಸುತ್ತಾಡಿ ಪಕ್ಷ ದ್ರೋಹ ಮಾಡಿದ ಕಾರಣ ಇವರನ್ನು ಯಾರೂ ನಂಬದ ಸ್ಥಿತಿಗೆ ತಲುಪಿದ್ದಾರೆ. 

*ತನ್ನ ಗೂಂಡ ಪಡೆಯಿಂದ BR ಜಯಂತ್, ಹಕ್ಕರೆ, ತೀ.ನಾ.ಶ್ರೀ, ಹೊಳೆಯಪ್ಪ, ಪುತ್ತೂರಾವ್, ಹೀಗೆ ಸಾಲು-ಸಾಲು ಕಾಂಗ್ರೆಸ್ ನಾಯಕರ ಮೇಲೆ ಹಲ್ಲೆ ನಡೆಸಿ ಇಂದು ಅವರ ಕೈ-ಕಾಲು ಹಿಡಿಯುತ್ತಿದ್ದಾರೆ. ಕಾಗೋಡು ಮನೆಯಲ್ಲಿ ಅವರೆದುರೇ ಕೆ.ಜಿ ಪ್ರಶಾಂತ್ ಗೆ ಹಲ್ಲೆ ಮಾಡಿ.... ಮೋಕ್ಷ ಪಡೆದ ವಿಷಯ ಪಬ್ಲಿಕ್ ಸೀಕ್ರೆಟ್. ಆ ಕಾರಣದಿಂದ ಇಂದು ಎಲ್ಲೂ ಸಲ್ಲದವರು ಆಗಾಗ ಬಂದು ತಮ್ಮ ಇರುವಿಕೆಯನ್ನು ತೋರಿಸಲು ಪತ್ರಿಕಾ ಗೋಷ್ಠಿ ನಡೆಸಿ ಮನೋರಂಜನೆ ನೀಡುತ್ತಿದ್ದಾರೆ.*

ಶಾಸಕರು ಗುಂಡಾಗಿರಿ ಮಾಡುತ್ತಿದ್ದಾರೆ ಎಂಬ ಬೇಳೂರು ಗೋಪಾಲ ಕೃಷ್ಣ ಹೇಳಿಕೆ...ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತೆ.

ಬೇಳೂರು ಗೋಪಾಲಕೃಷ್ಣ ಅವರೇ ತಾವು ಸಾಗರದ MLA ಆಗಿದಾಗ ನಿಮ್ಮ ಬೆಂಬಲಿಗರಿಂದ ಎಷ್ಟು ಗುಂಡಾಗಿರಿ ಮಾಡಿದ್ದಿರಿ. ರೌಡಿಸಂ ಪ್ರವೃತ್ತಿಯಿಂದ ಸಾಗರದಲ್ಲಿ ಭೀಕರ ವಾತಾವರಣ ಸೃಷ್ಟಿಸಿದ್ದೀರಿ... ಇದೆಲ್ಲವೂ ಕ್ಷೇತ್ರದ ಜನತೆಗೆ ಗೊತ್ತು.

 ನಿಮ್ಮ ವಿರುದ್ಧ ಚುನಾವಣೆ ಮಾಡಿದಂತ ಕಾಂಗ್ರೆಸ್ಸಿನ ಗಣ್ಯ ನಾಯಕರು ನಿಮ್ಮ ರೌಡಿಸಂ ಪ್ರವೃತ್ತಿ ಸಾಗರದ ಜನತೆ ಮರೆತಿಲ್ಲ ಕರ್ನಾಟಕ ರಾಜ್ಯ ಕಂಡ ಧೀಮಂತ ನಾಯಕ ಕಾಗೋಡು ತಿಮ್ಮಪ್ಪ ಅವರಿಗೆ ಹೋಡಿಸಿದ್ದು ನೆನಪಿಲ್ಲವೇ.

*ಕೆಲ ತಿಂಗಳ ಹಿಂದೆ ನೆಡೆದ ಕಾಂಗ್ರೆಸ್ ಸಭೆಯಲ್ಲಿ ಕೆ.ಜಿ ಪ್ರಶಾಂತ್ ರವರ ಮೇಲೆ ಹಲ್ಲೆಗೆ ಯತ್ನಿಸಿ ಕಪಾಳ ಮೋಕ್ಷ ಮಾಡಿಸಿಕೊಂಡಿದ್ದು ಗುಟ್ಟಾಗಿ ಉಳಿದಿಲ್ಲ. ಪರಿವರ್ತನೆ ಯಾತ್ರೆ ಸಮಯದಲ್ಲಿ ಫ್ಲೆಕ್ಸ್ ಕಟ್ಟೋ ವಿಚಾರಕ್ಕೆ ಗಣೇಶ್ ಗಟ್ಟಿ ಎಂಬ ಬಿಜೆಪಿ ಸಕ್ರಿಯ ಕಾರ್ಯಕರ್ತನ ಮೇಲೆ ಬೆಂಬಲಿಗರಿಂದ ಹಲ್ಲೆ ಮಾಡಿಸಿದ್ದು ನಿಮ್ಮ ದುರ್ವರ್ತನೆಗೆ ಹಿಡಿದ ಕೈಗನ್ನಡಿ.*

ಕಾಂಗ್ರೆಸ್ನ ಪ್ರಭಾವಿ ನಾಯಕ ಹೊಳೆಯಪ್ಪ ಸೂರನಗದ್ದೆ, ಹಂಚಿನಮನೆ ನಾರಾಯಣಪ್ಪ ಅವರ ಮನೆ ಹಾಳು ಮಾಡಿ, ಹಿಂದುಳಿದ ನಾಯಕ ಶ್ರೀನಿವಾಸ್ ಇವರಿಗೆಲ್ಲಾ ನಡುಬೀದಿಯಲ್ಲಿ ಹೊಡೆಸಿ,.

*ನಿಮ್ಮ ಬಲಗೈ ನಂತಿದ್ದ ಅದರಂತೆ ಚಂದ್ರಶೇಖರ್ ಗೌಡರು ನಿಮ್ಮ ಸಹವಾಸದಿಂದ ಮಾಡಿದ ಸಾಲ ತೀರಿಸಲಾಗದೆ... ಸಾಲದ ಶೂಲಕ್ಕೆ ಬಲಿಯಾದರು ನಿಮ್ಮ ಗುಂಡಾಗಿರಿ ಸಾಗರದ ಜನತೆ ಇನ್ನೂ ಮರೆತಿಲ್ಲ.. ಎಷ್ಟೆಯಾದರು ಪ್ರಧಾನಿ ಮೋದಿ ಯವರಿಗೆ ಗೊಂಡಿಕ್ಕಿ ಎಂದು ಹೇಳಿದ ದುಷ್ಟ ನೀನಲ್ಲವೇ... ಎಲುಬಿಲ್ಲದ ನಾಲಿಗೆಯನ್ನು ಹದ್ದು ಬಸ್ತಿನಲ್ಲಿಡಿ ಬೇರೆ ನಾಯಕರ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ ಇನ್ನಾದರೂ ನಿಮ್ಮ ಮಾತಿನ ಸಂಸ್ಕೃತಿಯನ್ನು ಸರಿಮಾಡಿಕೊಳ್ಳಿ.*

Post a Comment

0 Comments