ಸಾಗರ:ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಾಂಗ್ರೆಸ್ ನ ಹಿರಿಯ ಮುಖಂಡ ಹಾಗೂ ಮಾಜಿ ಸಭಾಪತಿ ಕಾಗೋಡು ತಿಮ್ಮಪ್ಪನವರು ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ ಎಂಬ ಮಾತು ತಾಲ್ಲೂಕಿನಾದ್ಯಂತ ಅವರ ಅಭಿಮಾನಿಗಳಲ್ಲಿ ಹರಿದಾಡುತ್ತಿದೆ.
ಕಾಂಗ್ರೆಸ್ ಪಕ್ಷದಲ್ಲಿ ಹಲವು ಹುದ್ದೆಗಳನ್ನು ಅಲಂಕರಿಸಿರುವ ಕಾಗೋಡು ತಿಮ್ಮಪಪ್ಪನವರು ಸಾಗರ ವಿಧಾನಸಭಾ ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧಿಸುವ ಅಭಿಲಾಷೆಯನ್ನ ಅವರ ಕಾರ್ಯಕರ್ತೆಯರಲ್ಲಿ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ತಾಲ್ಲೂಕಿನಾದ್ಯಂತ ಹರಿದಾಡುತ್ತಿತ್ತು ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದು ಇನ್ನು ಕೆಲವೇ ಕ್ಷಣದಲ್ಲಿ ತಿಳಿದುಬರಲಿದೆ.
ಈಗಾಗಲೇ ಸಾಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಗೋಪಾಲಕೃಷ್ಣ ಬೇಳೂರು ಅವರು ಸ್ಪರ್ಧಿಸುತ್ತಿದ್ದಾರೆ ಕಳೆದ ಚುನಾವಣೆಯ ನಂತರ ದಿನದಿಂದ ಕೇಳಿಬರುತ್ತಿತ್ತು .ಆದರೆ ಏಕಾಏಕಿ ಕಾಗೋಡು ತಿಮ್ಮಪ್ಪನವರು ಮತ್ತೊಮ್ಮೆ ಸಾಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದರಿಂದ ಗೋಪಾಲಕೃಷ್ಣ ಅವರ ಚಿತ್ತ ಎತ್ತ ಎಂಬುದು ಮುಂದಿನ ದಿನದಲ್ಲಿ ಕಾದು ನೋಡಬೇಕಾಗಿದೆ.
ಪ್ರಕಾಶ್ ಮಂದಾರ
ಸಂಪಾದಕರು
8880499904
0 Comments