ಸಾಗರ ಬ್ಲಾಕ್ ಕಾಂಗ್ರೆಸ್ ನಡೆಸುವ ಪ್ರತಿಭಟನೆಗಳಲ್ಲಿ ಮಾಜಿ ಶಾಸಕ ಗೋಪಾಲಕೃಷ್ಣ ಇರುವುದಿಲ್ಲ ಏಕೆ ?


ಸಾಗರ:-ರಾಜ್ಯದಲ್ಲೇ ಅತಿ ಹೆಚ್ಚು ಬುದ್ಧಿವಂತರು ಇರುವ ನಗರ ಎಂದರೆ ಅದು ಸಾಗರ.

ಸಾಗರ ಜನತೆಯ ನಾಡಿಮಿಡಿತವನ್ನು ಅಷ್ಟು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.ಅವರ ಪ್ರತಿ ಹೆಜ್ಜೆಯೂ ಸೂಕ್ಷ್ಮವಾಗಿರುತ್ತದೆ.ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮುನ್ನ ಹತ್ತು ಬಾರಿ ಯೋಚನೆ ಮಾಡುತ್ತಾರೆ.ತಾವು ಇಡುವ ಪ್ರತಿ ಹೆಜ್ಜೆಯ ಹಿಂದೆ ಒಂದು ಅರ್ಥವಿರುತ್ತದೆ. ಆ ಅರ್ಥದಲ್ಲಿ ಮತ್ತೊಂದು ಒಳಾರ್ಥ ವಿರುತ್ತದೆ.

ಪ್ರತಿ ಗೊಂಬೆಯನ್ನ ಆಡಿಸುವ ಸೂತ್ರದಾರ ಮತ್ತೊಬ್ಬ ಇದ್ದೇ ಇರುತ್ತಾನೆ.ಸೂತ್ರಧಾರ ಎಂದು ಯಾರಿಗೂ ಕಾಣಿಸುವುದಿಲ್ಲ.ಅವನ ಉದ್ದೇಶದಂತೆ ಗೊಂಬೆ ಆಡುತ್ತಿರುತ್ತದೆ.ಇದು ಎಲ್ಲರಿಗೂ ಅರ್ಥವಾಗಿದೆ ಅಂದುಕೊಂಡಿದ್ದೇನೆ.

ಸದ್ಯ ವಿಷಯಕ್ಕೆ ಬರೋಣ.
ಸಾಗರದ ಬ್ಲಾಕ್ ಕಾಂಗ್ರೆಸ್ ಆಡಳಿತ ಪಕ್ಷದ ವಿರುದ್ಧ ಪ್ರತಿ ಬಾರಿಯೂ ವಿವಿಧ ರೀತಿಯಲ್ಲಿ ಪ್ರತಿಭಟನೆ ನಡೆಯುತ್ತಿರುತ್ತದೆ.ಆಡಳಿತ ಪಕ್ಷದ ಜನವಿರೋಧಿ ಧೋರಣೆಯನ್ನು ವಿರೋಧಿಸುವುದು ಆ ಮೂಲಕ ಪಕ್ಷ ಸಂಘಟನೆ ಮಾಡುವುದು ಒಂದು ಭಾಗವಾದರೆ,ಆಡಳಿತಪಕ್ಷದ ವೈಫಲ್ಯಗಳನ್ನು ಎತ್ತಿ ಹಿಡಿದು ಆ ಮೂಲಕ ಕ್ಷೇತ್ರದ ಮತದಾರರರನ್ನು ಒಲಿಸಿಕೊಳ್ಳುವುದು ಇನ್ನೊಂದು ಭಾಗವಾಗಿರುತ್ತದೆ.

ಇಂತಹ ಪ್ರತಿಭಟನೆಗಳನ್ನು ಆಗಾಗ್ಗೆ ಹಮ್ಮಿಕೊಳ್ಳುವ ಮೂಲಕ ಪಕ್ಷ ಸಂಘಟನೆ ಮತ್ತು ಪಕ್ಷದ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬುವುದು ಮತ್ತು ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವಂತೆ ಮಾಡುವುದು ಪ್ರಮುಖ ಉದ್ದೇಶವಾಗಿರುತ್ತದೆ .

ಇತ್ತೀಚಿನ ದಿನದಲ್ಲಿ ಸಾಗರ ಬ್ಲಾಕ್ ಕಾಂಗ್ರೆಸ್ ಪಕ್ಷ ಹಮ್ಮಿಕೊಳ್ಳುವ ಪ್ರತಿಭಟನೆ,ಪತ್ರಿಕಾಗೋಷ್ಠಿ,ಹೋರಾಟಗಳು,ಪಕ್ಷದ ಸಭೆಗಳು,ಹೀಗೆ ಅನೇಕ ವಿಚಾರಗಳಲ್ಲಿ ಸಾಗರದ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರರಾದ ಗೋಪಾಲಕೃಷ್ಣ ಬೇಳೂರು ಅವರು ಉಪಸ್ಥಿತರಿರುವುದಿಲ್ಲ.ಇದು ಏಕೆ? ಎಂಬ ಪ್ರಶ್ನೆ ತಾಲ್ಲೂಕಿನ ಪ್ರಜ್ಞಾವಂತ ನಾಗರಿಕರಲ್ಲಿ ಕಾಡುತ್ತಿದೆ.

ಬೇಳೂರು ಗೋಪಾಲಕೃಷ್ಣ ಅವರು ಕಳೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.ಇವರ ಸೇರ್ಪಡೆ ಮೂಲ ಕಾಂಗ್ರೆಸ್ ನಾಯಕರಿಗೆ ಇಷ್ಟವಿರಲಿಲ್ಲವೇ?ಒಲ್ಲದ ಮನಸ್ಸಿನಿಂದ ಪಕ್ಷಕ್ಕೆ ಸೇರಿಸಿಕೊಂಡಿದ್ದರೇ?ಆದರೂ ಕಳೆದ ಬಾರಿ ಇವರ ಸೇರ್ಪಡೆಯೊಂದಿಗೆ ಚುನಾವಣೆ ಎದುರಿಸಲಾಗಿತ್ತು.ಅಂದಿನಿಂದ ಕಾಂಗ್ರೆಸ್ ನಲ್ಲಿ ಎರಡು ಬಣಗಳು ಸೃಷ್ಟಿಯಾದವು.

ಕಳೆದ ಬಾರಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ಸಂದರ್ಭದಲ್ಲಿ ಮುಂದಿನ ಬಾರಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ ಎಂಬ ಮಾತು ಅಂದಿನಿಂದ ಇಂದಿನವರೆಗೂ ಹರಿದಾಡುತ್ತಲೇ ಇದೆ.ಆದರೆ ಇದುವರೆಗೂ ಅಧಿಕೃತ ಅಭ್ಯರ್ಥಿ ಆಗಲೇ ಇಲ್ಲ.ಮುಂದೆ ಆದರೂ ಆಗಬಹುದು.ಅದು ಗೊತ್ತಿಲ್ಲ.

ಸದ್ಯ ಸಾಗರ ಬ್ಲಾಕ್ ಕಾಂಗ್ರೆಸ್ ಹಮ್ಮಿಕೊಳ್ಳುವ ಪ್ರತಿ ಹೋರಾಟ, ಪ್ರತಿಭಟನೆ, ಪತ್ರಿಕಾಗೋಷ್ಠಿಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣ ಹಾಗೂ ಮಾಜಿ ಸಭಾಪತಿ ಕಾಗೋಡು ತಿಮ್ಮಪ್ಪನವರ ಪುತ್ರಿ ಡಾಕ್ಟರ್ ರಾಜನಂದಿನಿ ಕಾಗೋಡು.ಇವರು ಕಳೆದ ಚುನಾವಣೆಯ ನಂತರ ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ  ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ.ಇದರ ಹಿಂದಿನ ಉದ್ದೇಶ ಏನಿರಬಹುದು ?ಮುಂದೆ ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಬಹುದೇ?ಒಂದು ವೇಳೆ ಇವರು ಸ್ಪರ್ಧಿಸಿದ್ದೆ ಆದರೆ ಗೋಪಾಲಕೃಷ್ಣ ಅವರ ಕಥೆಯೇನು ?ಗೋಪಾಲಕೃಷ್ಣ ಬೇಳೂರು ಅವರು ಸಹ ಕಾಂಗ್ರೆಸ್ ಪಕ್ಷ ಬಲಪಡಿಸುವತ್ತ ತಮ್ಮದೇಯಾದ ಬಣದೊಂದಿಗೆ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ,ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ.ಆದರೂ ಇವರನ್ನು ಬಿಟ್ಟು ಏಕೆ ಪ್ರತಿಭಟನೆ ಮಾಡುತ್ತಾರೆ? ಪತ್ರಿಕಾಗೋಷ್ಠಿ ನಡೆಸುತ್ತಾರೆ ?ಹೀಗೆ ಹತ್ತು ಹಲವು ಪ್ರಶ್ನೆಗಳು ತಾಲ್ಲೂಕಿನ ನಾಗರಿಕರಲ್ಲಿ ಕಾಡುತ್ತಿದೆ.

ಏನೇ ಹೇಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಎಲ್ಲರೂ ಒಗ್ಗಟ್ಟಾಗಿ ದುಡಿದಾಗ ಮಾತ್ರ ಅಭ್ಯರ್ಥಿ ಗೆಲ್ಲಲು ಸಾಧ್ಯವಾಗುತ್ತದೆ.ಇಲ್ಲವಾದರೆ ಎದುರಾಳಿ ಅಭ್ಯರ್ಥಿ ಸುಲಭವಾಗಿ ಗೆಲುವು ಪಡೆಯುತ್ತಾನೆ.

ಸದ್ಯ ಬೇಳೂರು ಗೋಪಾಲಕೃಷ್ಣ ತಾಲ್ಲೂಕಿನ ಜನರಿಗೆ ಚಿರಪರಿಚಿತ ನಾಯಕ.ತನ್ನದೇ ಆದ ವರ್ಚಸ್ಸನ್ನು ಹೊಂದಿರುವ ಕಲರ್ ಫುಲ್ ರಾಜಕಾರಣಿ.ಇವರಿಗೆ ಯಾವುದೇ ರೀತಿಯ ಅನ್ಯಾಯವಾಗದಿರಲಿ ಎಂಬುವುದು ಅವರ ಅಭಿಮಾನಿಗಳ ಆಶಯ .

ಪ್ರಕಾಶ್ ಮಂದಾರ
ಸಂಪಾದಕರು.

Post a Comment

0 Comments