ಎರಡು ಸಮುದಾಯದ ಮುಖಂಡರ ಎದೆಯ ಮೇಲೆ ಕಾಲಿಟ್ಟ ಹಾಲಪ್ಪ; ಬೇಳೂರು ಗೋಪಾಲಕೃಷ್ಣ ಆಕ್ರೋಶ.


ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂಬ ಉದ್ದೇಶದಿಂದ ತಾಲ್ಲೂಕಿನ ಎರಡು ಪ್ರಬಲ ಸಮುದಾಯಗಳು ಮತವನ್ನು  ನೀಡಿದ್ದರು.ಅವರ ಉದ್ದೇಶ ಯಡಿಯೂರಪ್ಪ ಮುಖ್ಯಮಂತ್ರಿಯಾಗಬೇಕು ಎನ್ನುವ ಉದ್ದೇಶದಿಂದ ಬಿಜೆಪಿಯಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೆ ಮತ ನೀಡಿದರು.

ಸಮುದಾಯದ ಬಂಧುಗಳು ಹರತಾಳು ಹಾಲಪ್ಪನವರ ಮುಖ ನೋಡಿ ಮತ ಹಾಕಲಿಲ್ಲ.ಅವರಿಗೂ ಚೆನ್ನಾಗಿ ಗೊತ್ತಿತ್ತು ಹಾಲಪ್ಪ ಏನೆಂಬುದು. ಯಡಿಯೂರಪ್ಪನವರ ಮುಖ ನೋಡಿ ಮತ ನೀಡಿದ್ದರು.ಆ ಮತದಿಂದಲೇ ಗೆದ್ದ ಸಾಗರದ ಶಾಸಕರು ಈಗ ಆ ಸಮುದಾಯದ ಪ್ರಮುಖ ಮುಖಂಡರ ಮೇಲೆ ಹಲ್ಲೆ ನಡೆಸಿರುವುದು ಅತ್ಯಂತ ಖಂಡನೀಯ.

ವಾಮಮಾರ್ಗದಲ್ಲಿ ಭ್ರಷ್ಟಾಚಾರದ ಮೂಲಕ ಸಂಗ್ರಹಿಸಿದ ಹಣದ ಮದ ಅವರ ತಲೆಯ ನೆತ್ತಿಗೇರಿದೆ.ಹಾಗಾಗಿ ತಾನು ಏನು ಬೇಕಾದರೂ ಮಾಡಿ ಜಯಿಸಿಕೊಳ್ಳಬಹುದು ಎಂಬ ಮನೋಭಾವದಿಂದ ವರ್ತಿಸುತ್ತಿದ್ದಾರೆ.
ಯಾವುದೇ ಸಮಸ್ಯೆಗಳಿಲ್ಲದೆ ವ್ಯವಸ್ಥಿತವಾಗಿ  ನಡೆಯುತ್ತಿದ್ದ ಸಿಗಂದೂರು ಕ್ಷೇತ್ರದಲ್ಲಿ ತನಗೂ ಪಾಲು ಬೇಕು ಎಂದು ಕ್ಷೇತ್ರಕ್ಕೆ ಕೈಹಾಕಿದರು.

ಹಲವು ವರ್ಷಗಳಿಂದ ಒಂದೇ ಕುಟುಂಬದವರಂತೆ ಪರಸ್ಪರ ಅನ್ಯೋನ್ಯವಾಗಿ ಇದ್ದಂತಹ ಶೇಷಗಿರಿ ಭಟ್ ಮತ್ತು ರಾಮಪ್ಪನವರ ನಡುವೆ ಬಿರುಕು ತಂದರು.ನಂತರ ಸಿಗಂದೂರು ಕ್ಷೇತ್ರದ ಸಮಸ್ಯೆ ದೊಡ್ಡದಾಗಿ ಬಿಗಡಾಯಿಸಲು ಹಾಲಪ್ಪನವರೆ ಕಾರಣರು.

ಈಗ ವಿದ್ಯಾ ದೇಗುಲ,ಸರಸ್ವತಿಯ ಮಂದಿರದಲ್ಲಿ ಗದ್ದಲ ಎಬ್ಬಿಸಿ ಜಿಲ್ಲೆಯ ಶೈಕ್ಷಣಿಕ ವ್ಯವಸ್ಥೆಗೆ ಕಳಂಕ ತಂದಿಟ್ಟರು.

ಸಂಸ್ಥೆ ಒಂದರಲ್ಲಿ ಭ್ರಷ್ಟಾಚಾರ ಆಗಿದ್ದರೆ ಅದಕ್ಕೆ ಅಲ್ಲಿನ ಅಧ್ಯಕ್ಷರು ಹೊಣೆಯಾಗುತ್ತಾರೆ ಎಂಬ ಸಾಮಾನ್ಯ ಜ್ಞಾನವೂ ಇವರಿಗಿಲ್ಲವೇ ?

ಎಂಡಿಎಫ್ ಸರ್ವ ಸದಸ್ಯರ ಸಭೆಯಲ್ಲಿ ಹರತಾಳು ಹಾಲಪ್ಪನವರ ಬೆಂಬಲಿಗರಿಂದ ನಡೆದ ಹಲ್ಲೆಯ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೋಪಾಲಕೃಷ್ಣ ಬೇಳೂರು,ಒಂದು ವೇಳೆ ಸಂಸ್ಥೆಯಲ್ಲಿ ಭ್ರಷ್ಟಾಚಾರ ನಡೆದಿದೆ ಆಗಿದ್ದರೆ ಆ ಸಂಸ್ಥೆಯ ವಿರುದ್ಧ ತನಿಖೆ ನಡೆಸುವ ಜವಾಬ್ದಾರಿ ಶಾಸಕನದ್ದಾಗಿರುತ್ತದೆ.ಆ ಕೆಲಸವನ್ನ ಮಾಡುವುದನ್ನ ಬಿಟ್ಟು,ಸಂಸ್ಥೆಯ ಸರ್ವ ಸದಸ್ಯರ ಸಭೆಯಲ್ಲಿ ಗೂಂಡಾಗಳನ್ನು ಕರೆದುಕೊಂಡು ಗಲಾಟೆ ಮಾಡುವುದಲ್ಲ.ಇಂತಹ ಕೆಟ್ಟ ಮನಸ್ಥಿತಿಯನ್ನು ಹೊಂದಿರುವ ಈಗಿನ ಶಾಸಕರು ಸಾಗರ ಕ್ಷೇತ್ರಕ್ಕೆ ಕಳಂಕ ಎಂದು ಆರೋಪಿಸಿದರು.

ಎಂಡಿಎಫ್ ಸಭೆಯಲ್ಲಿ ಗದ್ದಲ ಸೃಷ್ಟಿಸಿ, ಆ ಸಂಸ್ಥೆಗೆ ಕೆಟ್ಟ ಹೆಸರು ತಂದಿಟ್ಟು, ಬೆಂಬಲಿಗರಿಂದ ಜಾಣ್ಮೆಯ ಉತ್ತರ ಕೊಡಿಸುತ್ತಿರುವುದು ನಾಚಿಕೆಗೇಡಿನ ಸಂಗತಿ.

ನಿಮಗೆ ನಿಜವಾಗಿಯೂ ಧೈರ್ಯವಿದ್ದರೆ ನಿಮ್ಮದೇ ಸರ್ಕಾರವಿದೆ ತನಿಖೆಗೊಪ್ಪಿಸಿ ನೋಡೋಣ ಎಂದು ಸವಾಲು ಹಾಕಿದರು.

ನಮ್ಮದು ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿ ಇತ್ತೀಚಿನ ದಿನದಲ್ಲಿ ಹೊಡೆದಾಟ,ಗೂಂಡಾಗಿರಿ ಮಾಡುವ ಪಕ್ಷವಾಗಿದೆ.ಎಂಡಿಎಫ್ ಸಭೆಯಲ್ಲಿ ಗಲಾಟೆ ನಡೆಸಿದವರ ಮೇಲೆ ಕ್ರಮ ಕೈಗೊಳ್ಳುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ.ತಾಲ್ಲೂಕಿನ ಪೋಲಿಸ್ ಇಲಾಖೆ ಹಾಲಪ್ಪನವರ ಅಣತಿಯಂತೆ ನಡೆಯುತ್ತಿದೆ.ದೂರು ನೀಡಿ ವಾರ ಕಳೆದರೂ ಕ್ರಮ ಕೈಗೊಳ್ಳುವಲ್ಲಿ ಮುಂದಾಗುತ್ತಿಲ್ಲ.ಇದುವರೆಗೂ ಪ್ರಕರಣ ದಾಖಲಿಸಿಕೊಂಡಿಲ್ಲ ಇದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಹಿಟ್ಲರ್ ನ ಆಡಳಿತಂದತಾಗಿದೆ ಎಂದರು .

ಎಂಡಿಎಫ್  ಸಭೆಯಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ನಡೆಯನ್ನು ಖಂಡಿಸಿ ವಿರೋಧ ಪಕ್ಷದ ನಾಯಕರ ಗಮನಕ್ಕೆ ತರಲಾಗುವುದು ಎಂದರು .

ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಮಹಿಳಾ ಅಧ್ಯಕ್ಷೆ ಅನಿತಾ ಕುಮಾರಿ, ನಗರಸಭೆ ವಿರೋಧ ಪಕ್ಷದ ನಾಯಕ ಗಣಪತಿ ಮಂಡಗಳಲೆ, ತಾಲ್ಲೂಕ್ ಪಂಚಾಯತ್ ಮಾಜಿ ಅಧ್ಯಕ್ಷ ಸೋಮಶೇಖರ್ ಲ್ಯಾವಿಗೆರೆ,ತಾರಾಮೂರ್ತಿ,ಸಂತೋಷ್ ಸದ್ಗುರು, ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

Post a Comment

0 Comments