ರಾಣೇಬೆನ್ನೂರು:-ರೈತ ಹೋರಾಟದ ಕರ್ಮಭೂಮಿ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕು ಮಾಕನೂರ ಒಂದು ಇತಿಹಾಸ.
ರೈತರ ಹೋರಾಟ ಇನ್ನೂ ಜೀವಂತವಾಗಿದೆ ಎಂದರೆ ಅದು ಹಾವೇರಿ ಜಿಲ್ಲೆಯ ರೈತ ಸಂಘ ಮತ್ತು ಹಸಿರು ಸೇನೆಯ ಹೋರಾಟದಿಂದ.ಈ ಸಂಘಟನೆಗಳು ರೈತರ ಧ್ವನಿಯಾಗಿ, ಅವರ ಬದುಕಿನ ಆಶಾಕಿರಣವಾಗಿ ಅವರ ಸಂಕಷ್ಟ ,ನೋವಿಗೆ ಸ್ಪಂದಿಸಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ ಎಂದರೆ ಅದು ಹಾವೇರಿ ಜಿಲ್ಲೆಯ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ (ರಿ) ಸಂಘಟನೆಯ ರೈತ ಮಕ್ಕಳು ಎಂದರೆ ತಪ್ಪಾಗಲಾರದು.
ಕಳೆದ ಒಂದು ವಾರದಿಂದ ರೈತ ವಿರೋಧಿ ಕಾನೂನನ್ನು ವಿರೋಧಿಸಿ ನಿರಂತರ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಮಾಕನೂರು ಗ್ರಾಮದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇವರ ರೈತ ವಿರೋಧಿ ಕಾನೂನು ಪಕ್ಷಪಾತ ನೀತಿಯಿಂದ ದಿನನಿತ್ಯ ಸರದಿ ರೈತ ಆತ್ಮಹತ್ಯೆ ಪ್ರಕರಣಗಳು ಸಂಭವಿಸುತ್ತಿವೆ ಇದಕ್ಕೆ ನೇರ ಕಾರಣ ಬ್ಯಾಂಕಿನವರು ಹಾಗೂ ಕೆಲವು ರೈತ ವಿರೋಧಿ ಕಾನೂನುಗಳೇ ಕಾರಣವಾಗಿದೆ.ಇದನ್ನು ಖಂಡಿಸಿ ನ್ಯಾಯಕ್ಕಾಗಿ ಕಳೆದ 1ವಾರದಿಂದ ಮಾಕನೂರು ಯೂನಿಯನ್ ಬ್ಯಾಂಕ್ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹವನ್ನು ಕರ್ನಾಟಕ ರಾಜ್ಯ ರೈತ ಹಾಗೂ ಹಸಿರು ಸೇನೆ ಇವರ ನೇತೃತ್ವದಲ್ಲಿ ನೂರಾರು ಸಂಖ್ಯೆಯ ರೈತರು ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಇವರ ನಿರಂತರ ಧರಣಿ ಸತ್ಯಾಗ್ರಹಕ್ಕೆ ಕಾರಣವಾಗಿದ್ದು ಬ್ಯಾಂಕಿನವರು (OTS) ಏಕ ತಿರುವಳಿ ಯೋಜನೆಯಲ್ಲಿ ರೈತರಿಗೆ ಅನ್ಯಾಯವಾಗಿದೆ ಎಂದು.
ಮಾಕನೂರು ಯೂನಿಯನ್ ಬ್ಯಾಂಕಿನ ಶಾಖಾ ಕಚೇರಿಯಲ್ಲಿ ಸುಸ್ತಿದಾರರಾಗಿರುವ ರೈತರ ಅರಿವಿಗೆ ಬಾರದಂತೆ ಬ್ಯಾಂಕಿನವರೇ ಚಾಲ್ತಿ ಮಾಡಿ ಸಾವಿರಾರು ರೈತರನ್ನು ಓಟಿಎಸ್ ಯೋಜನೆಯಿಂದ ವಂಚಿತರನ್ನಾಗಿ ಮಾಡಿದ್ದಾರೆ ರೈತರು ಓಟಿಎಸ್ ಯೋಜನೆಗೆ ಇತರ ಬ್ಯಾಂಕಿಗೆ ಹೋದರೆ ಅಲ್ಲಿ ರೈತರಿಗೆ ಆದರದ ಸ್ವಾಗತ ನೀಡಿ ಓಟಿಎಸ್ ಯೋಜನೆಯಲ್ಲಿ ಸಾಕಷ್ಟು ಅನುಕೂಲ ಮಾಡಿಕೊಡುತ್ತಿದ್ದಾರೆ ಆದರೆ ಮಾಕನೂರುನಲ್ಲಿರುವ ಯೂನಿಯನ್ ಬ್ಯಾಂಕಿನವರು ಮಾತ್ರ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ.
ಕೂಡಲೇ ಮಾಕನೂರು ಗ್ರಾಮದ ಯೂನಿಯನ್ ಬ್ಯಾಂಕ್ ಶಾಖಾ ಕಚೇರಿಯಲ್ಲಿ ಇರುವಂಥ ಎಲ್ಲ ರೈತರಿಗೆ ಅನುಕೂಲವಾಗುವಂತೆ ಓಟಿಎಸ್ ಯೋಜನೆಯನ್ನು ಕೂಡಲೇ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಕಳೆದ ಒಂದು ವರ್ಷದಿಂದ ಹಾವೇರಿ ಜಿಲ್ಲಾ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಹೋರಾಟ ನಡೆಸಿಕೊಂಡು ಬರುತ್ತಲೇ ಇದ್ದಾರೆ .ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ .ಮಾನ್ಯ ಮುಖ್ಯಮಂತ್ರಿಗಳು ಯೂನಿಯನ್ ಬ್ಯಾಂಕಿನವರಿಗೆ ರೈತರಿಗೆ ಅನುಕೂಲವಾಗುವ ಓಟಿಎಸ್ ಯೋಜನೆಯನ್ನ ಜಾರಿಗೆ ತರುವಂತೆ ತಿಳಿಸಿದ್ದಾರೆ .ಆದರೆ ಬ್ಯಾಂಕಿನವರು ಮುಖ್ಯಮಂತ್ರಿಯವರ ಮಾತಿಗೂ ಕ್ಯಾರೆ ಎನ್ನದೆ ಓಟಿಎಸ್ ಯೋಜನೆಯನ್ನ ಜಾರಿಗೆ ತಂದಿರುವುದಿಲ್ಲ .ಆದ್ದರಿಂದ ಬ್ಯಾಂಕಿನವರ ರೈತ ವಿರೋಧಿ ಕಾನೂನನ್ನು ವಿರೋಧಿಸಿ 24/3/2022ರಂದು ರಾಷ್ಟ್ರೀಯ ಹೆದ್ದಾರಿ (NH-4)ಬಂದ್ ಮಾಡಿ .ರಸ್ತೆ ತಡೆ ನಡೆಸಿ ನಂತರ ಮಾಕನೂರು ಗ್ರಾಮದವರೆಗೆ ರೈತರು ಬೃಹತ್ ಪ್ರತಿಭಟನಾ ಮೆರವಣಿಗೆಯೊಂದಿಗೆ ಗ್ರಾಮದಲ್ಲಿ ಇರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ ಮುಂದೆ ನ್ಯಾಯ ಸಿಗುವ ತನಕ ಹಗಲು ರಾತ್ರಿಯೆನ್ನದೆ ಅನಿರ್ದಿಷ್ಟಾವಧಿ "ಮಾಡು ಇಲ್ಲವೇ ಮಡಿ" ಎಂಬ ಧ್ಯೇಯವಾಕ್ಯದೊಂದಿಗೆ ನಿರಂತರ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರು.ಇವರ ಹೋರಾಟದಿಂದ ಹೊಸ ಇತಿಹಾಸ ಒಂದಕ್ಕೆ ನಾಂದಿ ಹಾಡಿದರು .
ಕಳೆದ 1ವಾರದಿಂದ ನಡೆಸುತ್ತಿದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಹೋರಾಟಕ್ಕೆ ಯಾವುದೇ ರೀತಿಯ ಸ್ಪಂದನೆ ಸಿಗದಿದ್ದ ಕಾರಣಕ್ಕೆ ಇಂದು ಮಾಕನೂರ ಕ್ರಾಸ್ ನಲ್ಲಿರುವ ರಾಷ್ಟ್ರೀಯ ಹೆದ್ದಾರಿ (NH-4) ಯಲ್ಲಿ ರಾಜ್ಯ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ರವೀಂದ್ರ ಗೌಡ .ಎಫ್ ಪಾಟೇಲ್ ಮತ್ತು ಹಾವೇರಿ ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಶ್ರೀ ಈರಣ್ಣ ಹಲಗೇರಿ ಇವರ ನೇತೃತ್ವದಲ್ಲಿ ಸಾವಿರಾರು ರೈತರೊಂದಿಗೆ ರಾಷ್ಟ್ರೀಯ ಹೆದ್ದಾರಿ ತಡೆ ಹಾಗೂ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು.
ಇಂದಿನ ಪ್ರತಿಭಟನಾ ಮೆರವಣಿಗೆ ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧಿಯವರು ನಡೆಸಿದಂಥ ಹೋರಾಟವನ್ನ ನೆನಪಿಗೆ ಬರುವಂತಿತ್ತು .ಮಾಕನೂರಿನಲ್ಲಿ ನಡೆಸಿದ ಹೋರಾಟ ಹಾವೇರಿ ಜಿಲ್ಲೆಯಲ್ಲಿ ಒಂದು ಹೊಸ ಇತಿಹಾಸವನ್ನ ಸೃಷ್ಟಿಸಿದ್ದು ಮಾತ್ರ ಸತ್ಯ.
ರೈತರಿಗಾಗಿ ,ರೈತರ ಸಂಕಷ್ಟಕ್ಕಾಗಿ.ರೈತರ ಬದುಕನ್ನು ಹಸನಾಗಿಸಲು ಬೀದಿಗಿಳಿದು ಹೋರಾಟ ಮಾಡುತ್ತಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಧ್ವನಿ ವಿಧಾನಸೌಧದ ಬಾಗಿಲು ಬಡಿದಿದ್ದು ಅಷ್ಟೇ ಸತ್ಯ .
ಇಂದಿನ ರೈತಸಂಘ ಹೋರಾಟದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ರಾಣೆಬೆನ್ನೂರು ಗ್ರಾಮಾಂತರ ಡಿವೈಎಸ್ಪಿ ಡಿ. ಸುರೇಶ ಅವರ ಮುಂದಾಳತ್ವದಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಯಿತು.
ರೈತರು ತಮ್ಮ ಬೇಡಿಕೆಗಾಗಿ ಶಾಂತಿಯುತವಾಗಿ ಹೋರಾಟ ಮಾಡುತ್ತಿರುವುದು ಇತರ ಹೋರಾಟಗಾರರಿಗೆ ಮಾದರಿಯಾಗಿತ್ತು .
ಇಂದಿನ ಹೋರಾಟದ ಸಂದರ್ಭದಲ್ಲಿ ಮಾಕನೂರು ಗ್ರಾಮದವರಲ್ಲದೆ ಇತರ ಸುತ್ತಮುತ್ತಲಿನ ಗ್ರಾಮದ ಎಲ್ಲಾ ರೈತರು ಪಾಲ್ಗೊಂಡಿದ್ದರು .
ಪ್ರಕಾಶ್ ಮಂದಾರ
ಸಂಪಾದಕರು
8880499904
0 Comments