ಹರಿಹರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮತ್ತೊಬ್ಬ ಸ್ಪರ್ಧಾಳು ಪ್ರತ್ಯಕ್ಷ !!!


ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಬೀಸುತ್ತಿದೆ .ಕೇಂದ್ರದಲ್ಲಿ ಮೋದಿ ಪ್ರಧಾನಿಯಾದ ಮೇಲೆ ವಂಶಪಾರಂಪರ್ಯ ರಾಜಕಾರಣಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ .ಹಾಗೂ ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಟಿಕೆಟ್ ನೀಡಿದ ಪ್ರತಿಫಲವಾಗಿ ಇಂದು ಬಿಜೆಪಿ ಪಕ್ಷದಿಂದ ಅಭ್ಯರ್ಥಿಗಳಾಗಿ ಚುನಾವಣೆ ಸ್ಪರ್ಧಿಸಲು ತಾಮುಂದು, ನಾಮುಂದು ಎಂದು ಬರುತ್ತಿದ್ದಾರೆ.

ಸಾಮಾನ್ಯ ಪಕ್ಷದ ಕಾರ್ಯಕರ್ತ ಚುನಾವಣೆಗೆ ಸ್ಪರ್ಧಿಸಲು ಮುಂದೆ ಬಂದರೆ ಆಶ್ಚರ್ಯವಿಲ್ಲ .ಆದರೆ ಪಕ್ಷದ ಹೆಸರಿನಲ್ಲಿ ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಬರುವವರಿಗೆ ವಿರೋಧವಿದೆ.ಕಳೆದ ಚುನಾವಣೆ ಸಂದರ್ಭದಲ್ಲಿ ಪ್ರತ್ಯಕ್ಷವಾದವರು  ಮತ್ತೆ ಈ ಬಾರಿಯ ಚುನಾವಣೆಯಲ್ಲಿ ಪ್ರತ್ಯಕ್ಷವಾಗುತ್ತಿದ್ದಾರೆ.ಇದರ ನಡುವೆ ಜನರ ಸಂಕಷ್ಟಕ್ಕೆ ಅವರ ನೋವಿಗೆ ಸ್ಪಂದಿಸಲಿಲ್ಲ ,ಅವರಿಗೆ ತಮ್ಮಿಂದಾಗುವ ಸಹಾಯ ಮಾಡಲಿಲ್ಲ .ಈಗ ಚುನಾವಣೆ ಸಮೀಪಿಸುತ್ತಿದೆ ಎಂದಾಗ ಮಾತ್ರ ಮತದಾರ ಮತ್ತು ಕ್ಷೇತ್ರದ ನೆನಪಾಗುತ್ತಿದೆ .
ಸದ್ಯ ಹರಿಹರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಆಕಾಂಕ್ಷಿಗಳ ಪಟ್ಟಿ ಬಹಳ ದೊಡ್ಡದಿದೆ .ಅದರಲ್ಲಿ ಮತ್ತೊಂದು ಹೊಸ ಹೆಸರು ಸೇರ್ಪಡೆ .

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಬಯಸಿ ಹರಿಹರ  ತಾಲ್ಲೂಕಿನಾದ್ಯಂತ ಭರ್ಜರಿ ಪ್ರಚಾರ ಪಡೆದು. ಟಿಕೆಟ್ ವಂಚಿತರಾಗಿ ಸ್ಪರ್ಧೆಯಿಂದ ಹಿಂದೆ ಸರಿದ ಮಾಜಿ ಪೊಲೀಸ್ ಅಧಿಕಾರಿ ದೇವೇಂದ್ರಪ್ಪ ಕುಣಿಬೆಳಕೆರೆ .ಈಗ ಹರಿಹರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಸ್ಪರ್ಧಾಕಾಂಕ್ಷಿಯಾಗಿ ಮತ್ತೆ ಎಂಟ್ರಿ ಕೊಟ್ಟಿದ್ದಾರೆ .

ದೇವೇಂದ್ರಪ್ಪ ಕುಣಿಬೆಳಕೆರೆ ಕಳೆದ ಬಾರಿಯ ಚುನಾವಣೆ ಸಂದರ್ಭದಲ್ಲಿಯೂ ಸಹ ತಾಲ್ಲೂಕಿನಾದ್ಯಂತ ಭಾರಿ ಹವಾ ಸೃಷ್ಟಿಸಿದ್ದರು .ತಮ್ಮ ಸ್ವಂತ ಖರ್ಚಿನಲ್ಲಿ ತಾಲ್ಲೂಕಿನಾದ್ಯಂತ ಭರ್ಜರಿ ಪ್ರಚಾರ ಪಡೆದು ಇನ್ನೇನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎನ್ನುವಷ್ಟರಲ್ಲಿ ದೇವೇಂದ್ರಪ್ಪ ಕುಣಿಬೆಳಕೆರೆ ವರಿಗೆ ಟಿಕೇಟನ್ನು ನಿರಾಕರಿಸಿ ಮಾಜಿ ಶಾಸಕ ಬಿ.ಪಿ ಹರೀಶ್ ಅವರಿಗೆ ಟಿಕೆಟ್ ನೀಡಲಾಯಿತು .
ಈಗ ಮತ್ತೆ ಚುನಾವಣೆಯ ಕಾವು ಜೋರಾಗಿದೆ, ದೇವೇಂದ್ರಪ್ಪ ಕುಣಿಬೆಳಕೆರೆ ಅವರು ಹರಿಹರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಎಂಟ್ರಿಕೊಟ್ಟಿದ್ದಾರೆ .ಈಗಾಗಲೇ ಬಿಜೆಪಿಯಿಂದ ಸ್ಪರ್ಧೆ ಬಯಸುವವರ ಸಂಖ್ಯೆ ದೊಡ್ಡದಾಗಿದೆ ಅದರಲ್ಲಿ ದೇವೇಂದ್ರಪ್ಪ ಕುಣೆಬೆಳಕೆರೆ ಸಹ ಒಬ್ಬರು .ಚುನಾವಣೆ ಸಮೀಪ ಬಂದಂತೆ ಇನ್ನೂ ಯಾರ ಯಾರ ಹೆಸರು ಚಾಲ್ತಿಗೆ ಬರುತ್ತದೆಯೋ ತಿಳಿಯದು .ಒಟ್ಟಾರೆಯಾಗಿ ಬಿಜೆಪಿಯಿಂದ ಸ್ಪರ್ಧಿಸಬೇಕು ಚುನಾವಣೆಯಲ್ಲಿ ಗೆಲ್ಲಬೇಕು ಎಂಬ ಆಕಾಂಕ್ಷೆ ಮಾತ್ರ ಪ್ರತಿ ಕಾರ್ಯಕರ್ತನಿಗೂ ಇದೆ .ಇದು ಮೋದಿ ಹವಾ ಅಲ್ಲವೇ ?ಮೋದಿಯ ಹೆಸರಿನಲ್ಲಿ ಗೆಲುವು ಸಾಧಿಸಬಹುದು ಎಂಬ ನಂಬಿಕೆ  ಅಲ್ಲವೇ?

ನೋಡೋಣ ಯಾರಿಗೆ ಟಿಕೆಟ್ ಸಿಗುತ್ತದೆ, ಯಾರು ಚುನಾವಣೆಗೆ ಸ್ಪರ್ಧಿಸುತ್ತಾರೆ, ಮತದಾರ ಯಾರ ಕೈ ಹಿಡಿಯುತ್ತಾನೆ.
ಅಲ್ಲಿಯವರೆಗೂ .......

Post a Comment

0 Comments