:-ಶಿವಮೊಗ್ಗ ಜಿಲ್ಲಾ ಸಾಗರ ತಾಲ್ಲೂಕು ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪ ಹಾಗೂ ಬಲೇಗಾರು ಮಧ್ಯೆ ಮರತ್ತೂರು ಬಳಿ ದ್ವಿಚಕ್ರ ವಾಹನಗಳು ಅಪಘಾತವಾಗಿದ್ದೂ, ವಾಹನ ಸವಾರಾರು ಗಂಭೀರ ಗಾಯವಾಗಿದ್ದೂ ಹೆಚ್ಚಿನ ಚಿಕಿತ್ಸೆಗಾಗಿ ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ತಾಳಗುಪ್ಪ ಪೊಲೀಸ್ ಉಪ ಠಾಣಾ ದಪೇದಾರ್ ಶ್ರೀ ಕಾಂತೇಶ್, ಸಹ ಸಿಬ್ಬಂದಿಗಳಾದ ಶ್ರೀ ಮಂಜುನಾಥ್ ಹಾಗೂ ಶ್ರೀ ವಿನಾಯಕ ರವರು ಗಾಯಳುಗಳನ್ನೂ ಆಸ್ಪತ್ರೆಗೆ ಕಳುಹಿಸುವಲ್ಲಿ ಸಹಕರಿಸಿದ್ದಾರೆ.
*ಅಪಘಾತ ಸಂಭವಿಸಿ ಸುಮಾರು ಒಂದು ಘಂಟೆ ಕಳೆದರೂ ಅಪಘಾತದಿಂದ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲು ಬಾರದ 108 ಹಾಗೂ ತಾಳಗುಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ ಆಂಬುಲೆನ್ಸ್... ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು*
*ಇತ್ತೀಚಿನ ದಿನಗಳಲ್ಲಿ ತಾಳಗುಪ್ಪ ದಿಂದ ಶಿರವಂತೆ ಮಧ್ಯೆ ನಿರಂತರವಾಗಿ ಅಪಘಾತ ಸಂಭವಿಸುತ್ತಿದ್ದೂ ಈ ಬಗ್ಗೆ ಶಿವಮೊಗ್ಗ ಜಿಲ್ಲಾ ಸಂಸದರಾದ ಶ್ರೀ ಬಿ. ವೈ. ರಾಘವೇಂದ್ರ ಹಾಗೂ ಸೊರಬ ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಕುಮಾರ್ ಬಂಗಾರಪ್ಪ ರವರಿಗೆ ತಾಳಗುಪ್ಪಕ್ಕೆ 108 ವಾಹನ ನೀಡುವಂತೆ ಎಷ್ಟೇ ಮನವಿ ಮಾಡಿದರೂ ವ್ಯರ್ಥವಾಗುತ್ತಿರುವ ಬಗ್ಗೆ ಅಪಘಾತ ಸ್ಥಳದಲ್ಲಿ ನೆರೆದಿದ್ದ ಸ್ಥಳೀಯರು ಆಕ್ರೋಶವ್ಯಕ್ತಪಡಿಸಿದರು
✒️ಓಂಕಾರ ಎಸ್. ವಿ. ತಾಳಗುಪ್ಪ*
0 Comments