ಹಿರಿಯ ರಾಜ್ಯ ಪತ್ರಿಕಾ ಸಲಹೆಗಾರರ ಜಿ.ಆರ್ ನಿಂಗೋಜಿರಾವ್ ಇವರಿಗೆ ಕೆ. ಶ್ಯಾಮರಾವ್ ರಾಜ್ಯ ಪ್ರಶಸ್ತಿ ಪ್ರದಾನ.!!!

ದಾವಣಗೆರೆ:-ರಾಜ್ಯ ಪತ್ರಿಕಾ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಪತ್ರಕರ್ತ ಜಿ ಆರ್ ನಿಂಗೋಜಿರಾವ್ ಇವರಿಗೆ ಪತ್ರಿಕಾ ರಂಗದ ದಿಗ್ಗಜ ಬೆಳಗಾವಿಯ ಕೆ ಶ್ಯಾಮ್ ರಾವ್ ಇವರ ನೆನಪಿನಾರ್ಥ ರಾಜ್ಯ ಪ್ರಶಸ್ತಿ ಫಲಕ ನೀಡಿ ಗೌರವಿಸಿ ಸನ್ಮಾನಿಸಿದ್ದಾರೆ .

ಭಾನುವಾರದಂದು ಬೆಳಗಾವಿಯಲ್ಲಿ ನಡೆದ "ನಾಡಿನ ಸಮಾಚಾರ"ಪತ್ರಿಕೆಯ ಏಳನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ರಾಜ್ಯ ಪತ್ರಿಕಾ ಸಲಹೆಗಾರರು ದಾವಣಗೆರೆ ಜಿಲ್ಲೆ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿಗಳಾದ ಹಿರಿಯ ಪತ್ರಕರ್ತ ಶ್ರೀ ಜಿ .ಆರ್ ನಿಂಗೋಜಿರಾವ್ ಇವರಿಗೆ ಪ್ರಶಸ್ತಿ ಫಲಕ ನೀಡಿ ಗೌರವಿಸಿ ಸನ್ಮಾನಿಸಿದ್ದಾರೆ .

ಜಿಆರ್ ನಿಂಗೋಜಿರಾವ್ ಇವರು ದಾವಣಗೆರೆ ಜಿಲ್ಲೆಯ ಪತ್ರಿಕಾ ಭೀಷ್ಮ ಎಂದೇ ಖ್ಯಾತಿ ಪಡೆದವರು.ರಾಜ್ಯದ ಅನೇಕ ಪತ್ರಿಕೆಗಳಿಗೆ ಸಲಹೆ,ಸೂಚನೆ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ.ಇವರ ಪತ್ರಿಕಾ ರಂಗದ ಸಾಧನೆಯನ್ನು ಗುರುತಿಸಿ ಗೌರವಿಸಿ ಸನ್ಮಾನಿಸಿರುವುದು ಪತ್ರಿಕಾ ದಿಗ್ಗಜನಿಗೆ ತಂದ ಗೌರವವಾಗಿದೆ .

ಪ್ರಕಾಶ್ ಮಂದಾರ 
ಸಂಪಾದಕರು .

Post a Comment

0 Comments